More

    ಕರೊನಾ ಆತಂಕ ಬೇಡ-ಜಾಗೃತಿ ಇರಲಿ

    ವಿಜಯಪುರ: ಮಹಾಮಾರಿ ಕರೊನಾ ವ್ಯಾಪಕವಾಗಿ ಹರಡುತ್ತಿದ್ದು ಆ ಬಗ್ಗೆ ಯಾವುದೇ ಆತಂಕ ಬೇಡ. ಬದಲಾಗಿ ಜನಸಾಮಾನ್ಯರಲ್ಲಿ ಜಾಗೃತಿ ಅವಶ್ಯ ಎಂದು ಮುಖಂಡ ಡಾ.ಜಿ.ಡಿ. ಕೋಟ್ನಾಳ ಹೇಳಿದರು.

    ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಕರ್ನಾಟಕ ನವನಿರ್ಮಾಣ ವೇದಿಕೆ ಹಾಗೂ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕರೊನಾ ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಕರೊನಾ ಸೋಂಕು ಜಾಗತಿಕ ಮಟ್ಟದಲ್ಲಿ ಜನಜೀವನವನ್ನು ಅಸ್ತಿರಗೊಳಿಸಿ ತನ್ನ ಹಿರಿಮೆಯನ್ನು ಮೆರೆದು ಮರಣ ಶಾಸನ ದಾಖಲಿಸಿದೆ. ಜನಸಾಮಾನ್ಯರು, ಕೃಷಿ ಕೂಲಿಕಾರ್ಮಿಕರು, ಬಡವರು ಸುಧಾರಿಸಿಕೊಳ್ಳಲು ಇನ್ನೂ ಹಲವು ದಿನಗಳೇ ಬೇಕಾಗಿದೆ. ಈ ಪ್ರಯುಕ್ತವಾಗಿ ತಲ್ಲಣಗೊಂಡ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದೇ ಈ ಕವಿಗೋಷ್ಠಿಯ ಉದ್ದೇಶವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಶೇಷರಾವ ಮಾನೆ ಮಾತನಾಡಿ, ಕವಿತೆಗೆ ಕಣ್ಣು ಬೇಕು, ಕವಿತೆಗೆ ಕಿವಿಯು ಬೇಕು ಮಾನವೀಯತೆ ಇಲ್ಲದ ಸಾಹಿತ್ಯ ಸಾಹಿತ್ಯವಾಗಲಾರದು. ಪ್ರಾಣಿ ಪಕ್ಷಿಗಳು ಕೂಡಿ ಕಲೆತು ಜೀವನವನ್ನು ಸಮನಾಗಿ ಹಂಚಿಕೊಂಡು ಬದುಕುತ್ತವೆ. ಆದರೆ ಮಾನವಗೆ ಬುದ್ಧಿ ಇದ್ದರು ಕೂಡಾ ಏಕೆ ಸಮಾನತೆಯಿಂದ ಬದುಕಲಾರ ಎಂಬ ಪ್ರಶ್ನೆಯನ್ನು ಗೋಷ್ಠಿಯಲ್ಲಿ ಪ್ರಶ್ನಿಸಿದರು.

    ಹಯಾತ ರೋಜಿನದಾರ ಮಾತನಾಡಿ, ಆನಂದ ಜೋಶಿ ಮಾತನಾಡಿದರು. ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಸುರೇಶ ಶೇಡಶ್ಯಾಳ, ಜ್ಯೋತಿ ಕೃಷ್ಣಾ ನಾಯಕ, ಸುರೇಶ ಬಿಜಾಪುರ, ಎಂ.ಎ. ಭಕ್ಷಿ, ಯಾಜ ಕಲಾದಗಿ, ಮನೋಹರ ಕಾಂಬಳೆ, ಎ.ಎಸ್. ಪಟೇಲ, ಅಶೋಕ ಹೊಸಮನಿ ಉಪಸ್ಥಿತರರಿದ್ದರು.

    ಕವಿಗಳಾದ ಸಿದ್ದಪ್ಪ ಹದಿಮೂರು, ಮಯೂರ ಸಜ್ಜನ, ಸೋಮಶೇಖರಯ್ಯ ಹಿರೇಮಠ, ಯಮನೂರಪ್ಪ ಅರಬಿ, ಮಹಾದೇವಿ ಪಾಟೀಲ, ಶಿವಾಜಿ ಮೋರೆ, ಮಹೇಶ ಸಜ್ಜನ, ಹಣಮಂತ ಕುಲಕರ್ಣಿ, ರುಕ್ಮಿಣಿ ಚವಾಣ, ಮಲ್ಲಿಕಾರ್ಜುನ ಬುರ್ಲಿ, ವಿಶ್ವನಾಥ ಅರಬಿ, ಅಶೋಕ ಹೊಸಮನಿ, ಬಾಬುರಾವ ಕುಲಕರ್ಣಿ, ಶಾಂತಾ ಜೊಗೆಣ್ಣವರ, ಮಾಧವ ಅನಂತರಾವ ಮಂಗಳವಡೆ, ವಸಂತರಾವ ಕೊರತೆ, ನೀಲಕಂಠ ಬನಸೋಡೆ, ಪ್ರಕಾಶ ಇನಾಮದಾರ, ವಿಠಲ ಭೈರೊಡಗಿ, ದಾನೇಶ ಅವಟಿ ಕವನ ವಾಚಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts