More

    ಸಚಿವ ಸಂಪುಟದಲ್ಲಿ ಸಾಮಾಜಿಕ ಅಸಮಾನತೆ

    ವಿಜಯಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಪಕ್ಷಕ್ಕೆ ಬೆಂಬಲ ನೀಡಿದ್ದವರಲ್ಲಿ ಹತ್ತು ಜನ ಸಚಿವರನ್ನಾಗಿಯೂ ಮಾಡಿದ್ದಾರೆ. ಆದರೆ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮಾನತೆ ಆಗಿದ್ದು, ಅದನ್ನು ಸರಿಪಡಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
    ಸೋಮವಾರ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಅದರಲ್ಲಿ ಎಲ್ಲಾ ಜಿಲ್ಲೆಗಳಿಗೆ, ಭಾಗಗಳಿಗೆ ಪ್ರಾತಿನಿಧ್ಯ ಕೊಡಬೇಕಿದೆ. ಸಂಪುಟ ಪುನರ್ ರಚನೆಯಾದರೂ ಪರವಾಗಿಲ್ಲ, ಜೊತೆಗೆ ಕೆಲ ಹಿರಿಯ ಸಚಿವರೂ ತಮ್ಮ ಹುದ್ದೆಯನ್ನು ತ್ಯಾಗ ಮಾಡಿಸಿ, ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿರುವುದಾಗಿ ಹೇಳಿದರು.
    ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಡಗು, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಪ್ರಮುಖ ಜಿಲ್ಲೆಗಳಿಗೂ ಸಚಿವ ಸ್ಥಾನ ದೊರೆತಿಲ್ಲ. ಉತ್ತರ ಕರ್ನಾಟಕವೇ ಬಿಜೆಪಿಗೆ ಮೂಲ. ಹೀಗಾಗಿ ಉತ್ತರ ಕರ್ನಾಟಕ ಎಲ್ಲಾ ಜಿಲ್ಲೆಗಳಿಗೂ ಒಂದೊಂದು ಸಚಿವ ಸ್ಥಾನವನ್ನು ಕೊಡಬೇಕು. ಎಲ್ಲವನ್ನೂ ಬೆಂಗಳೂರು, ಬೆಳಗಾವಿಯವರಿಗೆ ಕೊಟ್ಟರೆ ಎಷ್ಟು ಸರಿ. ನಾವು ಇದ್ದೇವೆ ಅನ್ನೋ ನೋವು ಶಾಸಕರಲ್ಲಿದೆ. ಹೀಗಾಗಿ ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚೆ ಮಾಡಿ ಈ ಎಲ್ಲಾ ಜಿಲ್ಲೆಗಳಿಗೆ ನ್ಯಾಗ ಒದಗಿಸಬೇಕು ಎಂದು ಹೇಳಿದರು.
    ಮುಖ್ಯಮಂತ್ರಿಗಳು ಈಗಾಗಲೇ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಹಣ ನೀಡಿದ್ದಾರೆ. ಆದರೂ ಬರುವ ಬಜೆಟ್‌ನಲ್ಲಿ ಎಲ್ಲಾ ಶಾಸಕರಿಗೂ ಸಮನಾಗಿ ಅಭಿವೃದ್ಧಿಗಾಗಿ ಹಣವನ್ನು ಬಿಡುಗಡೆ ಮಾಡಬೇಕು. ಅವರ ಮೇಲೆ ನಮಗೆಲ್ಲ ಅದಮ್ಯ ವಿಶ್ವಾಸವಿದೆ. ಮುಂದಿನ ಮೂರು ವರ್ಷ ಅವರೇ ಮುಖ್ಯಮಂತ್ರಿಯಾಗಿ ಇರಬೇಕು. ಅವರು ಸಮರ್ಥರಿದ್ದು, ಸಚಿವ ಸಂಪುಟದ ಬಗ್ಗೆ ಅವರೇ ಹೇಳಿಕೆ ಕೊಡಬೇಕು. ನಾನು ಎಲ್ಲಾ ಶಾಸಕರ ಭಾವನೆಯನ್ನು ಹೇಳಿದ್ದಾನೆ. ಇದು ನನ್ನ ವೈಯಕ್ತಿಕವಲ್ಲ. ನಾನೇನೂ ಬೇಡವುದೂ ಇಲ್ಲ ಎಂದು ಹೇಳಿದರು.

    ಮುಖ್ಯಮಂತ್ರಿ ಯಡಿಯೂರಪ್ಪನವರು ಅತ್ಯುತ್ತಮ ಬಜೆಟ್ ನೀಡಲಿದ್ದಾರೆ. ಕೃಷ್ಣಾ ಕೊಳ್ಳಕ್ಕೆ 25 ಸಾವಿರ ಕೋಟಿ ರೂ. ಕೊಡುತ್ತಾರೆ. ಇದರಿಂದ ಕೃಷ್ಣಾ ಕೊಳ್ಳದ ಕಾಮಗಾರಿಗಳು ಆರಂಭವಾಗಲಿದೆ.
    ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts