More

    ಬಾಕಿ ವೇತನ ತ್ವರಿತವಾಗಿ ಪಾವತಿಸಿ

    ವಿಜಯಪುರ: ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಸ್ಟೇಲ್ ನೌಕರರು ಬುಧವಾರ ಒಂದು ದಿನದ ಧರಣಿ ನಡೆಸಿದರು.
    ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ನೇತೃತ್ವ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಯಿತು.
    ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಹೊರ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ‘ಡಿ’ ಗ್ರೂಪ್ ನೌಕರರ ವೇತನ ಬಾಕಿ ಇದೆ. ಮಾರ್ಚ್‌ನಿಂದ ಈವರೆಗೆ ವೇತನ ನೀಡಿಲ್ಲ. ಇದರಿಂದ ನೌಕರರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಹಿಂದಿನ ಪಿಎಫ್ ಕೂಡ ಸರಿಯಾಗಿ ಜಮಾ ಆಗಿಲ್ಲ ಎಂದರು.
    ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಇನ್ನಾದರೂ ವೇತನ ಪಾವತಿಸಬೇಕು. ಜತೆಗೆ ಹೊರ ಗುತ್ತಿಗೆ ಪದ್ಧತಿ ರದ್ದುಪಡಿಸಿ ಇಲಾಖೆಗಳಿಂದ ನೇರವಾಗಿ ವೇತನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಗಳಲ್ಲಿ ನೇರ ನೇಮಕಾತಿಯಿಂದ 8-10 ವರ್ಷಗಳಿಂದ ಸೇವೆ ಸಲ್ಲಿಸಿ ಕೆಲಸ ಕಳೆದುಕೊಂಡ ನೌಕರರಿಗೆ ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ನೌಕರರ ಸಂಬಳ 25 ಸಾವಿರ ರೂ. ಗಳಿಗೆ ಹೆಚ್ಚಿಸಬೇಕು. ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ರದ್ದುಪಡಿಸಬೇಕು. ಹೊರ ಗುತ್ತಿಗೆ ನೌಕರರ ಉದ್ಯೋಗಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಮುಖ್ಯಮಂತ್ರಿಗಳು ಘೋಷಿಸಿದಂತೆ ಹೊರಗುತ್ತಿಗೆ ನೌಕರರಿಗೆ ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ವೇತನ ನೀಡಬೇಕು ಎಂದರು.
    ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹಾಗೂ ಸಿಇಒ ಗೋವಿಂದ ರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಅವರಿಗೆ ಮನವಿ ಸಲ್ಲಿಸಿ ಧರಣಿ ಕೈ ಬಿಡಲಾಯಿತು.
    ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ರಮೇಶ ಆಸಂಗಿ, ಪ್ರದೀಪ ದಳವಾಯಿ, ರಾಜೇಶ ದೇಶಪಾಂಡೆ, ಆನಂದ ಹಾದಿಮನಿ, ಪವಾಡೆಪ್ಪ ಚಲವಾದಿ, ಕಾಶೀಮ್ ಆಲದಾಳ, ಲಕ್ಷ್ಮಣ ಮಸಳಿ, ಯಮನಪ್ಪ ಬಜಂತ್ರಿ, ಮಲ್ಲಿಕಾರ್ಜುನ ಚಲವಾದಿ, ಶಿವಾನಂದ ಮೇಲಿನಕೇರಿ, ದಾನಮ್ಮ ಹೂಗಾರ, ನೂರಜಾನ್ ಎಲಗಾರ, ಗೌರಕ್ಕ ಬೀಳೂರ, ಶಾಂತಾ ಕ್ವಾಟಿ, ಬೋರಮ್ಮ ಎಲ್.ಜಿ, ಬೇಬಿ ಹೊಸಮನಿ, ಲಕ್ಷ್ಮಿ ಮಂಗಸೂಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts