More

    ಜಿಲ್ಲೆಯಲ್ಲಿ ಶೇ.72.4 ರಷ್ಟು ಬಿತ್ತನೆ

    ವಿಜಯಪುರ: ಜಿಲ್ಲೆಯ ವಿವಿಧೆಡೆ ಗುರುವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಉತ್ತಮ ಮಳೆಯಾಗಿದೆ.
    ವರ್ಷಧಾರೆ ಆಗಮನದಿಂದಾಗಿ ಕೃಷಿ ಚಟುವಟಿಕೆ ಗರಿಗೆದರಿದೆ. ಬುಧವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಮಳೆ ಬಿದ್ದಿದೆ. ಬಸವನ ಬಾಗೇವಾಡಿ 50.5 ಮಿ.ಮೀ, ಮನಗೂಳಿ 19.1, ಆಲಮಟ್ಟಿ 21.2, ಹೂವಿನ ಹಿಪ್ಪರಗಿ 70.8, ಅರೇಶಂಕರ 50.2, ಮಟ್ಟಿಹಾಳ 83.4, ವಿಜಯಪುರ 34.4, ನಾಗಠಾಣ 6.2, ಭೂತನಾಳ 21.6, ಹಿಟ್ನಳ್ಳಿ 36.2, ತಿಕೋಟಾ 28.8, ಮಮದಾಪುರ 43.4, ಕುಮಟಗಿ 12.2, ಕನ್ನೂರ 22.5, ಬಬಲೇಶ್ವರ 22.6, ಇಂಡಿ 51.0, ನಾದ ಬಿ.ಕೆ 40.6, ಅಗರಖೇಡ 80.1, ಹೋರ್ತಿ 37.4, ಹಲಸಂಗಿ 37.0, ಚಡಚಣ 26.0, ಝಳಕಿ 63.2, ಮುದ್ದೇಬಿಹಾಳ 48.0, ನಾಲತವಾಡ 34.8, ತಾಳಿಕೋಟೆ 43.4, ಢವಳಗಿ 62.0, ಸಿಂದಗಿ 66.2, ಆಲಮೇಲ 56.3, ಸಾಸಾಬಾಳ 10.3, ರಾಮನಹಳ್ಳಿ 76.2, ಕಡ್ಲೇವಾಡ 32.2, ದೇವರ ಹಿಪ್ಪರಗಿ 23.6, ಕೊಂಡಗೂಳಿ 25.0 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಅಂಕಿ-ಅಂಶ ಇಲಾಖೆ ಮಾಹಿತಿ ನೀಡಿದೆ.

    ಬಿತ್ತನೆ ಕಾರ್ಯ ಚುರುಕು

    ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಜಿಲ್ಲೆಯಲ್ಲಿ ಶೇ.72.4 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಅದರಲ್ಲೂ 2.48 ಲಕ್ಷ ಹೆಕ್ಟೇರ್ ತೊಗರಿ , 46,892 ಹೆಕ್ಟೇರ್ ಮೆಕ್ಕೆಜೋಳ, 13,815 ಹೆಕ್ಟೇರ್ ಸಜ್ಜೆ, ಶೇಂಗಾ 3239 ಹೆಕ್ಟೇರ್, ಸೂರ್ಯಕಾಂತಿ 2480 ಹೆಕ್ಟೇರ್ ಸೇರಿದಂತೆ ಒಟ್ಟು 3.53 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಮುದ್ದೇಬಿಹಾಳ ಶೇ.73.7, ಸಿಂದಗಿ ಶೇ.75.3, ಬಸವನ ಬಾಗೇವಾಡಿ ಶೇ.51.3, ವಿಜಯಪುರ ಶೇ.86.5, ಇಂಡಿ ಶೇ.70.9 ರಷ್ಟು ಬಿತ್ತನೆಯಾಗಿದೆ. ಒಟ್ಟು 4.88 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts