More

    ಮಕ್ಕಳಲ್ಲಿ ಚಿಂತನೆ ಗುಣ ಬೆಳೆಸುವುದೇ ಸರ್ಕಾರದ ಗುರಿ

    ವಿಜಯಪುರ: 21ನೇ ಶತಮಾನಕ್ಕೆ ಅಗತ್ಯವಾಗಿರುವ ಕೌಶಲಗಳನ್ನು ಬೆಳೆಸಬೇಕಾದರೆ ಮಕ್ಕಳು ಹೇಗೆ ಚಿಂತಿಸಬೇಕು ಎಂಬುದನ್ನು ನಾವು ಹೇಳಿಕೊಡಬೇಕಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕಾರ್ಯಪಡೆ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
    ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ ಆಂತರಿಕ ಗುಣಮಟ್ಟ ಭರವಸೆ ಕೋಶ ಇವರ ಸಹಯೋಗದಲ್ಲಿ ವಿವಿಯ ಕನ್ನಡ ಅಧ್ಯಯನ ಸಭಾಂಗಣದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತಾಗಿ ಜರುಗಿದ ಒಂದು ದಿನದ ವೆಬಿನಾರ್‌ನಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
    ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಣ ನೀತಿ ಜಾರಿಯಾಗಿದ್ದು, ಇಂದಿನ ವೈಜ್ಞಾನಿಕ ಯುಗದಲ್ಲಿ ನಮಗೆ ಬಹುಬೇಗನೆ ಮಾಹಿತಿಗಳು ಲಭ್ಯವಾಗುತ್ತವೆ. ಆದರೆ ಲಭ್ಯವಿರುವ ಮಾಹಿತಿಯಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡುವುದೇ ನಮ್ಮ ಮಕ್ಕಳ ಮುಂದಿರುವ ಬಹು ದೊಡ್ಡ ಸವಾಲು. ಸರಿ ಮತ್ತು ತಪ್ಪಿನ, ಸೂಕ್ತ ಮತ್ತು ಸೂಕ್ತವಲ್ಲದ ನಡುವಿನ ವ್ಯತ್ಯಾಸವನ್ನು ತಿಳಿಯುವಂತಹ ಚಿಂತನಾಶಕ್ತಿಯನ್ನು ಬೆಳೆಸಬಹುದಾದಂತಹ ಶೈಕ್ಷಣಿಕ ವ್ಯವಸ್ಥೆಯನ್ನು ನೀಡಲು ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬದ್ಧವಾಗಿದೆ. ಈ ನೀತಿಯನ್ನು ಅಳವಡಿಸುವುದರಲ್ಲಿ ನಾವೆಲ್ಲರೂ ಕೈ ಜೋಡಿಸುವ ಮೂಲಕ ಒಟ್ಟಾಗಿ ಕಾರ್ಯನಿರ್ವಹಿಸಿ ಅದನ್ನು ಯಶಸ್ವಿಗೊಳಿಸೋಣ ಎಂದರು.
    ಉದ್ಘಾಟನೆ ನೆರವೇರಿಸಿದ ವಿವಿ ಕುಲಪತಿ ಪ್ರೊ.ಓಂಕಾರ ಕಾಕಡೆ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿ ಅರುಣ ಶಹಾಪುರ ಅವರಂಥ ಸಂಪನ್ಮೂಲ ವ್ಯಕ್ತಿ ನಮಗೆ ಸಿಕ್ಕಿದ್ದು ತುಂಬ ಸಂತಸದ ಸಂಗತಿ. ಅವರು ಈಗಾಗಲೇ ಈ ಹೊಸ ಶಿಕ್ಷಣ ನೀತಿಯ ಕುರಿತಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ಕಾರ್ಯಾಗಾರಗಳಲ್ಲಿ ಮಾತನಾಡಿದ್ದಾರೆ. ಇಂದು ನಮ್ಮೊಂದಿಗಿದ್ದು ಹೊಸ ಶಿಕ್ಷಣ ನೀತಿ ಬಗ್ಗೆ ಮಾತನಾಡುತ್ತಿರುವುದು ನಮಗೆ ಖುಷಿ ತಂದಿದೆ ಎಂದರು.
    ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ. ತಡಸದ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಭಾಗಿಯಾಗಿದ್ದರು. ಐಕ್ಯೂಎಸಿ ಸಹಾಯಕ ನಿರ್ದೇಶಕ ಮಠಪತಿ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರೋಹಿಣಿ ಭೂಸನೂರಮಠ ವಂದಿಸಿದರು. ವಿವಿಯ ನ್ಯಾಕ್ ಕಮಿಟಿಯ ಸಹಾಯಕ ನಿರ್ದೇಶಕಿ ರೇಣುಕಾ ಮೇಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts