More

    ಜ್ಞಾನಕ್ಕಿಂತ ಪವಿತ್ರವಾದ ವಸ್ತು ಇಲ್ಲ

    ವಿಜಯಪುರ: ಜ್ಞಾನದಂತಹ ಪವಿತ್ರವಾದ ವಸ್ತು ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಜ್ಞಾನದ ದೀಪ ಹೊತ್ತಿಸಿದರೆ ಅಜ್ಞಾನದ ಕತ್ತಲೆ ಹೊರಟು ಹೋಗುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
    ನಗರದ ಹೊರವಲಯದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಜ್ಞಾನಶಕ್ತಿ ಆವರಣದ ಕನ್ನಡ ಸಭಾಭವನದಲ್ಲಿ ಸೋಮವಾರ ಭಾಸ್ಕರಾಚಾರ್ಯ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ‘ಭಾಸ್ಕರಾಚಾರ್ಯರ ಜೀವನ ಮತ್ತು ಕೃತಿಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
    ಸಾವಿರಾರು ವರ್ಷಗಳಿಂದ ಬೌದ್ಧಿಕ ರಂಗದಲ್ಲಿ ಅಗಾಧ ಬೆಳೆವಣಿಗೆ ಆಗಿವೆ. ಇಂತಹ ಸಂದರ್ಭದಲ್ಲಿರುವ ನಾವುಗಳೇ ಧನ್ಯರು. ಭಾವ ಜಗತ್ತು, ವಿಶಾಲ ಜಗತ್ತು ಕೈಗಳಿಂದ ಮಾಡುವ ಕಾರ್ಯ ಜಗತ್ತು ಇವೆಲ್ಲವುಗಳ ಮೂಲಕ ಮಾನವ ಏನೆಲ್ಲ ಸಾಧಿಸಿದ್ದಾನೆ. ಸಾವಿರಾರು ವರ್ಷಗಳಿಂದ ಸಂಗ್ರಹವಾಗಿರುವ ಜ್ಞಾನಸಂಪತ್ತನ್ನು ಪೋಷಿಸಿ ವಿದ್ಯಾರ್ಥಿಗಳಿಗೆ ನೀಡುವ ಕಾರ್ಯಗಳನ್ನು ವಿಶ್ವವಿದ್ಯಾನಿಲಯಗಳು ಮಾಡುತ್ತಿರುವುದು ಪ್ರಶಂಸನೀಯ ಎಂದರು.

    ಇದೇ ಸಂದರ್ಭದಲ್ಲಿ ಡಾ.ಬಾಲಚಂದ್ರ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ‘ಭಾಸ್ಕರಾಚಾರ್ಯ ಗಣಕಚಕ್ರ ಚುಡಾಮಣಿ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ವಿವಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷತೆವಹಿಸಿದ್ದರು. ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಪ್ರೊ.ಎಸ್.ಬಾಲಚಂದ್ರರಾವ್, ವಿವಿ ಸಿಂಡಿಕೇಟ್ ಸದಸ್ಯ ಡಾ.ವೆಂಕಟೇಶ, ಶಿಲ್ಪಾಶ್ರೀ, ಕಾರ್ಯಕ್ರಮದ ಸಂಯೋಜಕ ಪ್ರೊ.ಜಿ.ಜಿ ರಾಜಪೂತ, ಪ್ರೊ.ಓಂಕಾರ ಕಾಕಡೆ ಹಾಗೂ ವಿವಿಧ ನಿಖಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೃಷ್ಣಾ ಅತಿಥಿ ಗೃಹ, ವಿದ್ಯಾರ್ಥಿನಿಯರ ವಸತಿ ನಿಲಯ, ಹಿಂದಿ ವಿಭಾಗ, ರಸಾಯನ ಶಾಸ ಅಧ್ಯಯನ ವಿಭಾಗ, ಸಸ್ಯಶಾಸ ಅಧ್ಯಯನ ಕಟ್ಟಡಗಳನ್ನು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಉದ್ಘಾಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts