More

    ವಿಮಾನ ನಿಲ್ದಾಣಕ್ಕೆ ಬಸವಣ್ಣರ ಹೆಸರಿಡಿ

    ವಿಜಯಪುರ: ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣ ಅವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಯಿತು.

    ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ವಿಶ್ವಗುರು ಬಸವಣ್ಣ ಅವರು ಜನಿಸಿದ ಪವಿತ್ರ ಕ್ಷೇತ್ರ ವಿಜಯಪುರ ಜಿಲ್ಲೆ. ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿ. ಮೇಲು ಕೀಳು ಎಂಬ ಭಾವನೆಯನ್ನು ಹೊಡೆದು ಹಾಕಲು ಕಲ್ಯಾಣದಲ್ಲಿ ಅಂತರ್ಜಾತಿ ವಿವಾಹ ಮಾಡುವ ಮೂಲಕ ಜಾತಿಯನ್ನು ಹೋಗಲಾಡಿಸಲು ಪ್ರಯತ್ನಿಸಿದರು.

    ಜಗತ್ತಿನಲ್ಲಿ ಪ್ರಥಮವಾಗಿ ಅನುಭವ ಮಂಟಪವನ್ನು ರಚಿಸಿ ಸಂವಿಧಾನದ ಪರಿಕಲ್ಪನೆಯನ್ನು ಕೊಟ್ಟವರು ವಿಶ್ವಗುರು ಬಸವಣ್ಣನವರು.ಅಂತಹವರ ಹೆಸರು ನಾಮಕರಣ ಮಾಡುವುದು ಅತ್ಯಂತ ಅವಶ್ಯಕ ಮತ್ತು ಸೂಕ್ತ. ಆದ್ದರಿಂದ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡುವ ಮೂಲಕ ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

    ಮುಖಂಡರಾದ ಪಾಂಡು ಹ್ಯಾಟಿ, ಸದಾಶಿವ ಬರಟಗಿ, ಕೃಷ್ಣಪ್ಪ ಬಮರಡ್ಡಿ, ವಿಠ್ಠಲ ಬಿರಾದಾರ, ಈರಣ್ಣ ದೇವರಗುಡಿ, ನಂದುಗೌಡ ಬಿರಾದಾರ, ಸಿದ್ರಾಮ ಅಂಗಡಗೇರಿ, ಚಂದ್ರಾಮ ತೆಗ್ಗಿ, ಹೊನಕೇರಪ್ಪ ತೆಲಗಿ, ವಿಶಾಲಸಿಂಗ ನರಗುಂದ, ವಿ.ಎನ್.ಕೊಣ್ಣೂರ, ಬಿ.ಪಿ.ಖಂಡೇಕಾರ, ಎನ್.ಕೆ.ವಿದಾಟೆ, ಬಸವರಾಜ ಅವಟಿ, ಶಾಂತಗೌಡ ಬಿರಾದಾರ, ಶೇಖಪ್ಪ ಕರಾಬಿ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts