More

    ಲಾಠಿಚಾರ್ಜ್ ಖಂಡಿಸಿ ಪ್ರತಿಭಟನೆ

    ವಿಜಯಪುರ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಿರುದ್ಯೋಗಿಗಳ ಮೇಲೆ ಪೊಲೀಸರ ಲಾಠಿಚಾರ್ಜ್ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‌ನೈಸೇಷನ್ (ಎಐಡಿವೈಒ) ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘಟನೆ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕೋವಿಡ್-19ರ ಲಾಕ್‌ಡೌನ್ ಸಂದರ್ಭದಲ್ಲಿ ದೇಶಾದ್ಯಂತ 2.7ಲಕ್ಷ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. 12 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಇಂಥ ಸ್ಥಿತಿಯಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಭೋಪಾಲ್‌ನಲ್ಲಿ ಸೆ. 4ರಂದು ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ತೀವ್ರ ಲಾಠಿಚಾರ್ಜ್ ಮಾಡಿದೆ. ಇದು ಖಂಡನೀಯ. ನಿರುದ್ಯೋಗಿಗಳ ಅಹವಾಲನ್ನು ಕೇಳುವ ಬದಲು ಪೊಲೀಸರು ಅವರ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದ ಅನೇಕರು ಗಾಯಗೊಂಡಿದ್ದಾರೆ.

    ಎಐಡಿವೈಒ ರಾಜ್ಯ ಕಾರ್ಯದರ್ಶಿ ಪ್ರಮೋದ್ ನಾಮದೇವ್ ಅವರೊಂದಿಗೆ ನೂರಾರು ಯುವಜನರನ್ನು ಬಂಧಿಸಲಾಗಿದೆ. ಪೊಲೀಸ್ ದೌರ್ಜನ್ಯವನ್ನು ಖಂಡಿಸುವುದಾಗಿ ಹೇಳಿದರು.

    ಸಂಘಟನಾಕಾರರಾದ ಪಾಂಡುರಂಗ ಉಪ್ಪಾರ, ಬಾಳು ಜೇವೂರ, ರವಿ ಹತ್ತಳ್ಳಿ, ಶರಣು ಶಹಾಪುರ, ಲಾಯಪ್ಪ ಸುಣಗಾರ, ಚನ್ನಮಲ್ಲಯ್ಯ ಮಠಪತಿ, ಎಸ್.ಡಿ.ಕುದರಿ, ಬಿ.ಎಸ್. ಹಿಪ್ಪರಗಿ, ಶಂಭುಲಿಂಗ, ಆರ್.ವೈ.ಡಾಂಗಿ, ಸಿ.ಎಂ. ಮಸ್ಕಿ, ಅಶೋಕ ಬೂದಿಹಾಳ, ಸುರೇಶ ಕವಡಿಮಟ್ಟಿ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts