More

    ವಿಜಯಾನಂದ ಸ್ವಾಮೀಜಿ ಕಾರ್ಯ ಶ್ಲಾಘನೀಯ

    ಬೈಲಹೊಂಗಲ: ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಆಯುರ್ವೇದಿಕ್ ಆಸ್ಪತ್ರೆ ಸ್ಥಾಪಿಸಿ ನೂರಾರು ಜನರಿಗೆ ಜನೋಪಯೋಗಿ ಕಾರ್ಯ ಮಾಡುತ್ತಿರುವ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಕಾರ್ಯ ಶ್ಲಾಘನೀಯ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

    ತಾಲೂಕಿನ ಬೇವಿನಕೊಪ್ಪ ಗ್ರಾಮದ ಆನಂದಾಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿತ್ಯಕಾರುಣ್ಯ ನಿಲಯದ ನವಗ್ರಹ ಶಾಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಶ್ರೀಗಳು ಬೇವಿನಕೊಪ್ಪ ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನೋಪಕಾರಿ ಸೇವೆ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ನಿಡುವ ಜತೆಗೆ ಭಕ್ತರ ಬಹು ದಿನದ ಬೇಡಿಕೆಯಾದ ಯಾತ್ರಿ ನಿವಾಸ ನಿರ್ಮಾಣವನ್ನು ಶಾಸಕರೊಂದಿಗೆ ಚರ್ಚಿಸಿ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

    ಸಾನ್ನಿಧ್ಯ ವಹಿಸಿದ್ದ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಮಾತನಾಡಿ, ಬೇವಿನಕೊಪ್ಪ ಮತ್ತು ಸಂಗೊಳ್ಳಿ ಮಾರ್ಗ ಮಧ್ಯೆ ರಾಯಣ್ಣ ಸೇತುವೆ ನಿರ್ಮಾಣಕ್ಕೆ 40 ಕೋಟಿ ರೂ. ಹಾಗೂ ಅಮಟೂರ ಗ್ರಾಮದಲ್ಲಿ ವೀರಕೇಸರಿ ಅಮಟೂರ ಬಾಳಪ್ಪ ಸ್ಮಾರಕ ಭವನ ನಿರ್ಮಿಸುವಲ್ಲಿ ಸಚಿವ ಎಚ್.ಕೆ.ಪಾಟೀಲ ಅವರ ಪಾತ್ರ ಹಿರಿದಾಗಿದೆ ಎಂದರು.

    ಶಾಸಕ ಮಹಾಂತೇಶ ಕೌಜಲಗಿ, ಸೋಮನಗೌಡ ಪಾಟೀಲ, ಮಲ್ಲಪ್ಪ ಮುರಗೋಡ, ಮಹಾಂತೇಶ ಮರೇಕ್ಕನವರ, ರಮೇಶ ಜಂಗಲ, ಮಲ್ಲಿಕಾರ್ಜುನ ಪೂಜೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts