More

    ಜಿಲ್ಲೆಗೆ ಮಾದರಿ ವಸತಿ ನಿಲಯ, ಹರಪನಹಳ್ಳಿ ಶಾಸಕ ಜಿ.ಕರುಣಾಕರರೆಡ್ಡಿ ಶ್ಲಾಘನೆ

    ಹರಪನಹಳ್ಳಿ: ಪಟ್ಟಣದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಜಿ ಪ್ಲಸ್ 2, 3 ಮಾದರಿಯ ಎರಡು ವಸತಿ ನಿಲಯಗಳು ವಿಜಯನಗರ ಜಿಲ್ಲೆಗೆ ಮಾದರಿಯಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಶ್ಲಾಘಿಸಿದರು.

    ಅವರು ಗುರುವಾರ ಕಟ್ಟಡಗಳನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್‌ಟಿಪಿ ಯೋಜನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪಟ್ಟಣದ ಬಾಪೂಜಿನಗರ ಹಿಂಭಾಗದ ಹೊಂಬಳಗಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಜಿ ಪ್ಲಸ್2 ಮಾದರಿ ಕೊಠಡಿಗಳನ್ನು 5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದಲ್ಲಿ ಗ್ರಾಂಥಾಲಯ, ಅಡುಗೆಕೊಣೆ, ಕಚೇರಿ ಹಾಗೂ ವಿದ್ಯಾರ್ಥಿಗಳ ಕೊಠಡಿ ಸೇರಿ ಒಟ್ಟು 40 ಕೊಠಡಿಗಳು ಇವೆ. ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೀರಿನ ಪುನರ್ ಬಳಕೆ ಮಾಡಿಕೊಳ್ಳಲು ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.

    ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ರೇಣುಕಾದೇವಿ ಮಾತನಾಡಿ ನಮ್ಮ ಇಲಾಖೆಗೆ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಇನ್ನೂ ಮೂರು ವಸತಿ ನಿಲಯಗಳ ಅವಶ್ಯವಿದೆ. ಪ್ರಸ್ತುತ ಒಂದು ವಸತಿ ನಿಲಯ ಮಂಜೂರಾಗಿದ್ದು ಸ್ಥಳದ ಅಗತ್ಯವಿದೆ. ಈ ಸಂಬಂಧ ಶಾಸಕ ಜಿ.ಕರುಣಾಕರರೆಡ್ಡಿರವರ ಗಮನಕ್ಕೆ ತರಲಾಗಿದೆ ಎಂದರು.ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀನಿವಾಸರೆಡ್ಡಿ, ಶಿರಗಾನಹಳ್ಳಿ ವಿಶ್ವನಾಥ, ಸಿಬ್ಬಂದಿ ಎನ್.ಜಿ.ಬಸವರಾಜ, ರಾಘವೇಂದ್ರ, ಯಲ್ಲಮ್ಮ, ಸುನೀತಾ, ನಿಂಗರಾಜ, ಯು.ಪಿ.ನಾಗರಾಜ, ಪೂರ‌್ಯನಾಯ್ಕ, ಶಿವಾನಂದ ಇತರರು ಇದ್ದರು.

    97 ಕೊಠಡಿಗಳ ಕಟ್ಟಡ
    ಹರಪನಹಳ್ಳಿಯ ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಜಿ ಪ್ಲಸ್ 3 ಮಾದರಿಯ ವಸತಿ ನಿಲಯವನ್ನು ಶಾಸಕ ಜಿ.ಕರುಣಾಕರ ರೆಡ್ಡಿ ಗುರುವಾರ ಉದ್ಘಾಟಿಸಿದರು. 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ 97 ಕೊಠಡಿಗಳು ಇರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts