More

    ನಿರೀಕ್ಷೆ ಗರಿಗೆದರಿಸುತ್ತಿರುವ ‘ವಿಜಯಾನಂದ’ ಚಿತ್ರ; ಡಾ.ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ- ಕ್ಯಾರೆಕ್ಟರ್ ಇಂಟ್ರೋ ರಿಲೀಸ್

    ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಬಹುಭಾಷಾ ಚಿತ್ರಗಳಲ್ಲಿ ‘ವಿಜಯಾನಂದ’ ಸಿನಿಮಾ ಪ್ರಮುಖವಾದುದು. ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್ ಇದು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ನಿರ್ಮಿಸುತ್ತಿದ್ದು, ಕನ್ನಡಿಗ ಸಾಧಕರೊಬ್ಬರ ಕುರಿತು ಕನ್ನಡಿಗರೇ ಮಾಡುತ್ತಿರುವ ಚಿತ್ರವಾದ ಕಾರಣ ‘ವಿಜಯಾನಂದ’ ಬಗ್ಗೆ ಮೊದಲಿಂದಲೂ ನಾಡಿನಾದ್ಯಂತ ಸಾಕಷ್ಟು ಕುತೂಹಲವಿದೆ.

    ‘ವಿಜಯಾನಂದ’ ಚಿತ್ರವನ್ನು ‘ಟ್ರಂಕ್​’ ಖ್ಯಾತಿಯ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಡಾ.ವಿಜಯ ಸಂಕೇಶ್ವರರ ಪಾತ್ರದಲ್ಲಿ ನಟ ನಿಹಾಲ್​, ಶ್ರೀಮತಿ ಲಲಿತಾ ಸಂಕೇಶ್ವರರ ಪಾತ್ರದಲ್ಲಿ ಸಿರಿ ಪ್ರಹ್ಲಾದ್​, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್​ ನಾಗ್​ ನಟಿಸುತ್ತಿದ್ದು, ಅವರ ಪಾತ್ರಗಳ ಕ್ಯಾರೆಕ್ಟರ್ ಇಂಟ್ರೊಗಳು ಈಗಾಗಲೇ ಬಿಡುಗಡೆಯಾಗಿವೆ.

    ಡಾ. ಆನಂದ ಸಂಕೇಶ್ವರರ ಪಾತ್ರದಲ್ಲಿ ಭರತ್​ ಬೋಪಣ್ಣ ನಟಿಸುತ್ತಿದ್ದು, ಬುಧವಾರ ಭರತ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರವನ್ನು ಪರಿಚಯಿಸುವ ಕ್ಯಾರೆಕ್ಟರ್ ಇಂಟ್ರೊ​ ಬಿಡುಗಡೆ ಮಾಡಲಾಗಿದೆ. ಡಾ. ಆನಂದ ಸಂಕೇಶ್ವರರ ಬಾಲ್ಯದ ಫೋಟೋ ಸೇರಿದಂತೆ ಕೆಲವು ಅಪರೂಪದ ಫೋಟೋಗಳನ್ನು ಒಳಗೊಂಡಿರುವ ಈ ಕ್ಯಾರೆಕ್ಟರ್ ಇಂಟ್ರೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈಗಾಗಲೇ “ವಿಜಯಾನಂದ’ ಚಿತ್ರದ ಟೀಸರ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಆನಂದ್​ ಆಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, 2 ಕೋಟಿ 15 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಂಡಿದೆ.

    ನಿರೀಕ್ಷೆ ಗರಿಗೆದರಿಸುತ್ತಿರುವ 'ವಿಜಯಾನಂದ' ಚಿತ್ರ; ಡಾ.ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ- ಕ್ಯಾರೆಕ್ಟರ್ ಇಂಟ್ರೋ ರಿಲೀಸ್

    ವಿಜಯಾನಂದ ಚಿತ್ರ ಕುರಿತು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ಡಾ. ವಿಜಯ ಸಂಕೇಶ್ವರ

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts