More

    ಕಾಂಗ್ರೆಸ್​ ಶಾಸಕನಲ್ಲಿ ಕರೊನಾ ವೈರಸ್​ ಕಾಣಿಸಿಕೊಂಡ ಬೆನ್ನಲ್ಲೇ ತಪಾಸಣೆಗೆ ಒಳಗಾದ ಸಿಎಂ ರೂಪಾನಿ; ಇನ್ನೊಂದು ವಾರ ಸೆಲ್ಫ್​ ಐಸೋಲೇಟ್​

    ಗುಜರಾತ್​: ಅಹಮದಾಬಾದ್​ನ ಜಮಲಪುರ್‌-ಖಾಡಿಯಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಇಮ್ರಾನ್​ ಖೇಡವಾಲಾ ಅವರಲ್ಲಿ ಕರೊನಾ ವೈರಸ್​ ದೃಢಪಟ್ಟಿದ ಬೆನ್ನಲ್ಲೇ, ಅವರ ಸಂಪರ್ಕಕ್ಕೆ ಹೋದ ಹಲವು ರಾಜಕೀಯ ಮುಖಂಡರಿಗೂ ಆತಂಕ ಶುರುವಾಗಿದೆ.

    ಗುಜರಾತ್ ಮುಖ್ಯಮಂತ್ರಿ ವಿಜಯ್​ ರೂಪಾನಿಯವರು ಮಂಗಳವಾರ ಕರೆದಿದ್ದ ಎಲ್ಲ ಕ್ಷೇತ್ರಗಳ ಶಾಸಕರ ಸಭೆಯಲ್ಲಿ ಇಮ್ರಾನ್​ ಪಾಲ್ಗೊಂಡಿದ್ದರು. ಅದರಲ್ಲಿ ಉಪಮುಖ್ಯಮಂತ್ರಿ, ಗೃಹಸಚಿವ ಸೇರಿ ಹಲವು ರಾಜಕೀಯ ಮುಖಂಡರು ಭಾಗವಹಿಸಿದ್ದರು. ಇದೀಗ ಎಲ್ಲರಿಗೂ ಕರೊನಾ ಭೀತಿ ಆವರಿಸಿದೆ.

    ಮುಖ್ಯಮಂತ್ರಿ ವಿಜಯ್​ ರೂಪಾನಿಯವರಿಗೆ ಇಂದು ಬೆಳಗ್ಗೆ ಕರೊನಾ ತಪಾಸಣೆ ನಡೆಸಲಾಗಿದ್ದು, ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೂ ರೂಪಾನಿ ಅವರು ಒಂದು ವಾರಗಳ ಕಾಲ ಸೆಲ್ಫ್​ ಐಸೋಲೇಟ್​ ಆಗಲಿದ್ದಾರೆ.
    ಮುಂದಿನ ಒಂದು ವಾರದಲ್ಲಿ ನಿಗದಿಯಾಗಿದ್ದ ಎಲ್ಲ ಸಭೆಗಳನ್ನೂ ಮುಂದೂಡುವಂತೆ ತಿಳಿಸಿದ್ದಾರೆ. ರಾಜ್ಯದ ಆಡಳಿತಕ್ಕೆ ಸಂಬಂಧಪಟ್ಟಂತೆ ಆಯಾ ಅಧಿಕಾರಿಗಳು, ಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರತಿದಿನ ಚರ್ಚೆ ನಡೆಸಲಿದ್ದಾರೆ.

    ಮಂಗಳವಾರ ಸಂಜೆ ಮುಖ್ಯಮಂತ್ರಿ ವಿಜಯ್​ ರೂಪಾನಿ ಅವರು ತಮ್ಮ ಗಾಂಧಿನಗರದ ನಿವಾಸದಲ್ಲಿ ಸಭೆ ನಡೆಸಿದ್ದರು. ಅದರಲ್ಲಿ ಇಮ್ರಾನ್ ಸೇರಿ ಹಲವು ಶಾಸಕರು ಪಾಲ್ಗೊಂಡಿದ್ದರು. ಆದರೆ ಇಂದು ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ಅಹಮದಾಬಾದ್​ನಲ್ಲಿ ಕರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲಿ ಹಲವು ಪ್ರದೇಶಗಳನ್ನು ಹಾಟ್​ಸ್ಫಾಟ್​ ಎಂದು ಗುರುತಿಸಿ ನಿರ್ಭಂಧ ವಿಧಿಸಲಾಗಿದೆ. (ಏಜೆನ್ಸೀಸ್​)

    ಕಾಂಗ್ರೆಸ್‌ ಶಾಸಕನಿಗೆ ಕರೊನಾ ಸೋಂಕು; ಅವರನ್ನು ಸಂಪರ್ಕಿಸಿದವರಿಗೆಲ್ಲ ಆತಂಕ…ಸಿಎಂಗೂ ಶುರುವಾಗಿದೆ ಭಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts