More

    ವಿಜಯ್​ ಮಲ್ಯ ಸದ್ಯ ಭಾರತಕ್ಕೆ ಹಸ್ತಾಂತರ ಆಗಲ್ಲ!

    ನವದೆಹಲಿ: ಭಾರತದಲ್ಲಿನ ಹಲವು ಬ್ಯಾಂಕ್​ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿ ಲಂಡನ್​ಗೆ ಪರಾರಿಯಾಗಿರುವ ವಾಣಿಜ್ಯೋದ್ಯಮಿ ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ವಿಳಂಬವಾಗಲಿದೆ. ಅವರ ಹಸ್ತಾಂತರ ಪ್ರಕ್ರಿಯೆಯಲ್ಲಿ ಕಾನೂನು ತೊಡಕೊಂದು ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಬ್ರಿಟನ್​ ಸರ್ಕಾರ ಸ್ಪಷ್ಟಪಡಿಸಿದೆ.

    ಆ ಕಾನೂನು ತೊಡಕು ತುಂಬಾ ಗೌಪ್ಯವಾದದ್ದು. ಉಭಯ ರಾಷ್ಟ್ರಗಳೊಂದಿಗಿನ ಅಪರಾಧಿಗಳ ವಿನಿಮಯ ಒಪ್ಪಂದದನ್ವಯ ಈ ಕಾನೂನು ತೊಡಕು ನಿವಾರಣೆಯಾಗದ ಹೊರತು ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ. ಆ ತೊಡಕು ನಿವಾರಣೆಗೊಳಿಸಿಕೊಳ್ಳುವಲ್ಲಿ ಹಲವು ತಿಂಗಳು, ವರ್ಷಗಳೇ ಬೇಕಾಗಬಹುದು. ಆದರೂ ಅದನ್ನು ತ್ವರಿತವಾಗಿ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬ್ರಿಟನ್​ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

    ಭಾರತದ ಬ್ಯಾಂಕ್​ಗಳಿಗೆ ವಂಚಿಸಿ ಲಂಡನ್​ಗೆ ಪರಾರಿಯಾಗಿದ್ದ ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್​ ಹೈಕೋರ್ಟ್​ ಆದೇಶ ಹೊರಡಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವ ಮಲ್ಯ ಅವರ ಪ್ರಯತ್ನ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬ್ರಿಟನ್​ ಸರ್ಕಾರ ಭಾರತಕ್ಕೆ ಹಸ್ತಾಂತರಿಸುತ್ತದೆ ಎಂದೇ ಹೇಳಲಾಗುತ್ತಿತ್ತು.

    2019ರ ನವೆಂಬರ್​ನಲ್ಲೇ ಭಾರತ ಪ್ರವೇಶಿಸಿದ್ದ ಕರೊನಾ ವೈರಾಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts