More

    ಹಿಂದು ಧರ್ಮ ರಕ್ಷಣೆಗೆ ವಿಹಿಂಪ, ಬಜರಂಗದಳ ಶ್ರಮ

    ರಟ್ಟಿಹಳ್ಳಿ: ರಾಷ್ಟ್ರ, ಧರ್ಮ ವಿರೋಧಿ ಶಕ್ತಿಗಳ ಷಡ್ಯಂತ್ರಗಳ ವಿರುದ್ಧ ವಿಶ್ವ ಹಿಂದು ಪರಿಷತ್, ಬಜರಂಗದಳ ಅನೇಕ ಹಿಂದು ಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತ ಹಿಂದು ಧರ್ಮದ ರಕ್ಷಣೆ ಮತ್ತು ಸಂಸ್ಕೃತಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿವೆ ಎಂದು ವಿಶ್ವ ಹಿಂದು ಪರಿಷತ್, ಬಜರಂಗದಳ ಧಾರವಾಡ ವಿಭಾಗದ ಸಂಯೋಜಕ ಶಿವಾನಂದ ಸತ್ತಿಗೇರಿ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಆಯೋಜಿಸಿದ್ದ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ರಾಷ್ಟ್ರ, ಧರ್ಮ ವಿರೋಧಿ ಶಕ್ತಿಗಳು ದೇಶದಲ್ಲಿ ಆತಂಕವಾದ, ನಕ್ಸಲೈಟ್, ಜಾತಿವಾದ, ಲವ್ ಜಿಹಾದ್, ಗೋಹತ್ಯೆ, ಡ್ರಗ್ ಮಾಫಿಯಾ, ಮತಾಂತರ, ಜನಸಂಖ್ಯೆ ಅಸಮತೋಲನ ಹೀಗೆ ಅನೇಕ ಪ್ರಕಾರಗಳಲ್ಲಿ ಹಿಂದು ಸಮಾಜ ಮತ್ತು ದೇಶ ಒಡೆಯುವ ಷಡ್ಯಂತ್ರ ನಡೆಸುತ್ತಿವೆ ಎಂದರು.
    ವಿಹಿಂಪ, ಬಜರಂಗದಳ ಸ್ಥಾಪನೆಯಾಗಿ 60 ವರ್ಷಗಳು ಗತಿಸಿವೆ. ಈ ಹಿನ್ನೆಲೆಯಲ್ಲಿ ಸೆ. 30 ರಿಂದ ಅ. 14ರವರೆಗೆ ದೇಶಾದ್ಯಂತ ಈ ಶೌರ್ಯ ಜಾಗರಣ ರಥಯಾತ್ರೆ ಮೂಲಕ ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ವಿಹಿಂಪ, ಬಜರಂಗದಳ ಘಟಕ ಸಂಘಟಸಿಲಾಗುತ್ತಿದೆ ಎಂದರು.

    ಕುಂಭದೊಂದಿಗೆ ಸಾಗಿದ ರಥಯಾತ್ರೆ: ಪಟ್ಟಣದ ಐ.ಬಿ. ಕ್ರಾಸ್‌ನಿಂದ ಸುಮಾರು 60 ಮಹಿಳೆಯರು ಕುಂಭದೊಂದಿಗೆ ಆರಂಭವಾದ ರಥಯಾತ್ರೆ ಶಿವಾಜಿನಗರ, ಹಳೇ ಬಸ್ ನಿಲ್ದಾಣ, ಕುರುಬರ ಓಣಿ, ಮಾಸೂರು ರಸ್ತೆ, ಭಗತ್‌ಸಿಂಗ್ ವೃತ್ತ ಮೂಲಕ ಶಿವಾಜಿ ಪುತ್ಥಳಿ ಬಳಿ ಮುಕ್ತಾಯಗೊಂಡಿತು. ಸ್ಥಳೀಯ ನಿವಾಸಿಗಳು ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಮಾಜಿ ಸಚಿವ ಬಿ.ಸಿ.ಪಾಟೀಲ ಆಗಮಿಸಿ ರಥಯಾತ್ರೆಗೆ ಮಾಲಾರ್ಪಣೆ ಮಾಡಿದರು.

    ವಿಹಿಂಪ ಜಿಲ್ಲಾ ಸಂಯೋಜಕ ಕಿಟ್ಟಿ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲು, ಎಸ್.ಎಸ್. ಪಾಟೀಲ, ರವಿಶಂಕರ ಬಾಳೇಕಾಯಿ, ಶಿವರಾಜ ಗೂಳಪ್ಪನವರ, ತಾಲೂಕು ಸಂಯೋಜಕ ಮೃತ್ಯುಂಜಯ ಬೆಣ್ಣಿ, ಸುರಕ್ಷ ಪ್ರಮುಖರು ನವೀನ ಮಾದರ, ಗಣೇಶ ಸುಣಗಾರ, ಆಕಾಶಗೌಡ ಪಾಟೀಲ, ಸಮಾಜ ಸೇವಕರು ರಾಜು ವೆರ್ಣೀಕರ, ಮಾಲತೇಶ ಬೆಳಕೇರಿ, ಉಜಿನೆಪ್ಪ ಕೋಡಿಹಳ್ಳಿ, ಶ್ರೀನಿವಾಸ ಭೈರಪ್ಪನವರ, ಮಂಜಪ್ಪ ಬಾಗೋಡಿ, ದುರ್ಗಾವಾಹಿನಿ ಮತ್ತು ಮಾತೃಶಕ್ತಿ ಸಂಘಟನೆಯ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts