More

    ಮಹಾಪಧಮನಿ ಕವಾಟ ಶಸ್ತ್ರಚಿಕಿತ್ಸೆ ಯಶಸ್ವಿ

    ಹುಬ್ಬಳ್ಳಿ : ಹೃದಯ ನಾಳ ಬ್ಲಾಕ್ ಆಗಿ, ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವೃದ್ಧೆಯೊಬ್ಬರ ಮಹಾಪಧಮನಿಯ ಕವಾಟವನ್ನು ಇಲ್ಲಿನ ವಿಹಾನ್ ಹಾರ್ಟ್ ಆಂಡ್ ಸೂಪರ್ ಸ್ಪೇಷಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಬದಲಾಯಿಸಲಾಗಿದೆ.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆಯ ತಜ್ಞ ವೈದ್ಯ ಡಾ. ವಿಜಯಕೃಷ್ಣ ಕೋಳೂರು, ವೃದ್ಧೆಯ ಮಹಾಪಧಮನಿಯ ಕವಾಟದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಂಡುಬಂದಿತ್ತು. ಹೀಗಾಗಿ, ಕವಾಟ ಬದಲಾವಣೆ ಮಾಡುವುದು ಸರಿ ಅನಿಸಿತು. ಈ ರೀತಿಯ ಶಸ್ತ್ರ ಚಿಕಿತ್ಸೆ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಎಂದರು.

    ತಮ್ಮೊಂದಿಗೆ ಮುಂಬೈನ ಡಾ. ರಿಷಬ್ ಪಾರೆಕ್ ಸೇರಿದಂತೆ ಐವರು ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿದೆ. ಸಾಮಾನ್ಯವಾಗಿ 75 ವರ್ಷದವರಿಗೆ ಮಹಾಪಧಮನಿಯ ಕವಾಟದಲ್ಲಿ ಸಮಸ್ಯೆ ಕಾಣಿಸುತ್ತವೆ. ಶಸ್ತ್ರಚಕಿತ್ಸೆಗೆ ಒಳಪಟ್ಟ ವೃದ್ಧೆ 64 ವಯಸ್ಸಿನವರಾಗಿದ್ದು, ಶಸ್ತ್ರ ಚಿಕಿತ್ಸೆ ನಂತರ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಮಾಡಲಾಯಿತು ಎಂದು ಡಾ. ವಿಜಯಕೃಷ್ಣ ಕೋಳೂರು ತಿಳಿಸಿದರು.

    8 ರಿಂದ 10 ವರ್ಷದವರೆಗೆ ಮಹಾಪಧಮನಿಯ ಕವಾಟ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನಂತರ ಕವಾಟವನ್ನು ಮತ್ತೊಮ್ಮೆ ಬದಲಾಯಿಸಬಹುದು ಎಂದರು.

    ಅಸಾಧಾರಣ ವೈದ್ಯಕೀಯ ಸೇವೆಗಳು, ರೋಗಿಗಳ ಫಲಿತಾಂಶಗಳು ಮತ್ತು ಅನುಭವಕ್ಕೆ ಹೆಸರುವಾಸಿಯಾದ ಹೃದಯದ ಆರೈಕೆಯೇ ನಮ್ಮ ಗುರಿ. ಹೃದಯ ರಕ್ತನಾಳ ಚಿಕಿತ್ಸೆಯಲ್ಲಿ ಅದ್ಭುತ ಮಾನದಂಡಗಳನ್ನು ಹೊಂದಿಸುವ ದೃಷ್ಟಿಯೊಂದಿಗೆ ನಾವು ಜಾಗತಿಕವಾಗಿ ಹೃದಯ ಆರೋಗ್ಯ ರಕ್ಷಣೆಯಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದರು.

    ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ರೋಗಗಳಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ರೋಗಿಗಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಡಾ. ಜುನೇ ಜಮಾದಾರ, ಡಾ. ಮಾರ್ತಾಂಡಪ್ಪ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts