More

    200 ಕಿ.ಮೀ.ನ ಫಿಟ್​ ಇಂಡಿಯಾ ವಾಕಥಾನ್​ಗೆ ‘ವಿದ್ಯುತ್’​ ಸಂಚಾಲನೆ..!

    ನವದೆಹಲಿ: ಇಂಡೋ ಟಿಬೇಟನ್​ ಬಾರ್ಡರ್ ಪೊಲೀಸ್​ (ಐಟಿಬಿಪಿ) ಆಯೋಜಿಸಿರುವ ಮೂರು ದಿನಗಳ ಫಿಟ್​ ಇಂಡಿಯಾ ವಾಕಥಾನ್​ಗೆ ಪವರ್​ ಫುಲ್ ಚಾಲನೆ ಸಿಗಲಿದೆ. ಆ ಮೂಲಕ ವಾಕಥಾನ್​ ಭರ್ಜರಿಯಾಗಿಯೇ ಆರಂಭವಾಗಲಿದೆ.

    ಅಕ್ಟೋಬರ್ 31ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆಯುವ ಈ 200 ಕಿಲೋಮೀಟರ್ ಫಿಟ್​ ಇಂಡಿಯಾ ವಾಕಥಾನ್​ಗೆ ಚಿತ್ರನಟ ವಿದ್ಯುತ್​ ಜಮ್ವಾಲ್​ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಹಸಿರು ನಿಶಾನೆ ತೋರಲಿದ್ದಾರೆ.

    ಈ ವಾಕಥಾನ್​ನಲ್ಲಿ ಯೋಧರಷ್ಟೇ ಅಲ್ಲದೆ ಕೇಂದ್ರ ವಿವಿಧ ಸಶಸ್ತ್ರ ಪಡೆಯ ಸಿಬ್ಬಂದಿ ಕೂಡ ಭಾಗವಹಿಸಲಿದ್ದು, 200 ಕಿ.ಮೀ. ದೂರ ಮಾರ್ಚ್​ ಫಾಸ್ಟ್ ಮಾಡಲಿದ್ದಾರೆ. ಅರ್ಹನಿಶಿ ನಡೆಯಲಿರುವ ಈ ವಾಕಥಾನ್​ ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಇರುವ ಥಾರ್ ಮರುಭೂಮಿಯಲ್ಲಿ ಹಾದುಹೋಗಲಿದೆ. ಪ್ರಧಾನಿ ಮೋದಿ ಅವರ ಕರೆಯಂತೆ ಯುವಜನರಲ್ಲಿ ಫಿಟ್​ನೆಸ್​ ಕುರಿತು ಜಾಗೃತಿ ಮೂಡಿಸಲು, ಅದರ ಮಹತ್ವ ತಿಳಿಸಲು ಇದನ್ನು ಆಯೋಜಿಸಲಾಗಿದೆ ಎಂದು ಕಿರೆಣ್​ ರಿಜಿಜು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts