More

    ವಿಧಾನಮಂಡಲ ಅಧಿವೇಶನ: ಅಕ್ರಮ ಬಡಾವಣೆ ಹಾವಳಿ ಬಗ್ಗೆ ಗಂಭೀರ ಚರ್ಚೆ

    ಬೆಂಗಳೂರು: ರಾಜ್ಯದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಬಡಾವಣೆ ಹಾವಳಿ ಬಗ್ಗೆ ವಿಧಾನಸಭೆಯಲ್ಲಿ ಶುಕ್ರವಾರ ಗಂಭೀರ ಚರ್ಚೆ ನಡೆಯಿತು. ಪ್ರಶ್ನೋತ್ತರ ವೇಳೆ ಬಿಜೆಪಿಯ ಅಮೃತ್​ ಅಯ್ಯಪ್ಪ ದೇಸಾಯಿ, ಕೃಷಿ ಭೂಮಿಯಲ್ಲಿ ಅಕ್ರಮ ಬಡಾವಣೆ ನಿರ್ಮಾಣವಾಗುತ್ತಿದೆ, ನಿವೇಶನ ಮಾರಾಟ ಮಾಡಿದವರು ನಾಪತ್ತೆಯಾಗುತ್ತಾರೆ. ಕೊನೆಗೆ ನಿವೇಶನ ಕೊಂಡು ಮೋಸ ಹೋದವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು. ರೌಡಿ ಶೀಟರ್​ ಹಾಗೂ ಪುಡಾರಿಗಳೇ ಇಂತಹ ಬಡಾವಣೆ ನಿಮಿರ್ಸುತ್ತಿದ್ದಾರೆ. ಅವರ ಮೇಲೆ ಕ್ರಿಮಿನಲ್​ ಕೇಸು ದಾಖಲಿಸಬೇಕೆಂದು ಆಗ್ರಹಿಸಿದರು. ಇದಕ್ಕುತ್ತರಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಅಕ್ರಮ ಬಡಾವಣೆ ಮಾಡುವವರ ಮೇಲೆ ನಿರ್ದ್ಯಾಣ ಕ್ರಮ ಕೈಗೊಳ್ಳಲು ಸುತ್ತೋಲೆ ಹೊರಡಿಸಿದೆ ಎಂದರು. ಜೆಡಿಎಸ್​ನ ಎ.ಟಿ.ರಾಮಸ್ವಾಮಿ ಮಾತನಾಡಿ, ಈ ಹಿಂದಿನಿಂದಲೂ ಕಠಿಣ ಕ್ರಮ ಎಂದು ಸರ್ಕಾರ ಹೇಳಿಕೊಂಡು ಬರುತ್ತಿದೆ. ಆದರೆ, ಅನುಮತಿ ಪಡೆಯದೆ ರಾಜ್ಯದಲ್ಲಿ ಸಾವಿರಾರು ಬಡಾವಣೆ ತಲೆಎತ್ತಿವೆ. ಎಷ್ಟು ಜನರ ಮೇಲೆ ಕ್ರಮಕೈಗೊಂಡಿದ್ದೀರಿ ಹೇಳಿ ಎಂದು ದಬಾಯಿಸಿದರು. 2020&21ರಲ್ಲಿ ವಿಶೇಷ ಅಧಿಕಾರಿಗಳ ಸಭೆ ಮಾಡಿ ಅಕ್ರಮ ಬಡಾವಣೆ ನಿಮಿರ್ಸುವವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಅಕ್ರಮ ಬಡಾವಣೆ ನಿರ್ಮಾಣವಾದರೆ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕ್ರಿಮಿನಲ್​ ಕೇಸ್​ ಹಾಕುವ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

    ಮತ್ತೊಂದು ಪ್ರಶ್ನೆಗೆ ಉತ್ತರಿಸಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್​, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅನಧಿಕೃತ ಬಡಾವಣೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲಸೌಕರ್ಯ ಕಲ್ಪಿಸಿ ನಿರ್ವಹಣೆ ಮಾಡಲಾಗಿದೆ ಎಂದರು. ಇದಕ್ಕೆ ಆೇಪವೆತ್ತಿದ ಎ.ಟಿ.ರಾಮಸ್ವಾಮಿ, ಪೌರಾಡಳಿತ ಇಲಾಖೆ ಅಕ್ರಮ ಬಡಾವಣೆಗೆ ಸೌಲಭ್ಯ ಕಲ್ಪಿಸುತ್ತದೆ ಎಂದು ಹೇಳುವುದು ಎಷ್ಟು ಸರಿ, ಸರ್ಕಾರದಲ್ಲೆಕೆ ದ್ವಂದ್ವ ಎಂದು ಪ್ರಶ್ನಿಸಿದರು. ಬಿಜೆಪಿಯ ಕುಮಾರ ಬಂಗಾರಪ್ಪ, ವೀರಣ್ಣ ಚರಂತಿ ಮಠ ಸೇರಿ ಹಲವು ಶಾಸಕರು ಅಕ್ರಮ ಬಡಾವಣೆ ಬಗ್ಗೆ ದನಿ ಎತ್ತಿದರು. ನಂತರ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಮೂಲಸೌಲಭ್ಯ ಕೊಡುವುದು ಕಷ್ಟವಾಗುತ್ತಿದೆ. ಕಂದಾಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಯೋಜನಾ ಇಲಾಖೆ ಸೇರಿ ಇದನ್ನು ನಿಯಂತ್ರಣ ಮಾಡುವುದು ಒಂದೇ ಮಾರ್ಗವಾಗಿದ್ದು, ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಿ, ಒಂದೇ ಬಾರಿಗೆ ಇತ್ಯರ್ಥದ ಕುರಿತು ಚಚಿರ್ಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

    2024ಕ್ಕೆ ಎಲ್ಲ ಮನೆಗೂ ನಲ್ಲಿ ನೀರು- ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ಮಾಹಿತಿ
    ರಾಜ್ಯದ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು 2024ರೊಳಗಾಗಿ ನಲ್ಲಿ ಮೂಲಕ ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ. ಪರಿಷತ್​ನಲ್ಲಿ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿ, 2019ರ ಆ.15ರವರೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಜಾರಿಯಲ್ಲಿತ್ತು. ಬಳಿಕ ಜಲಜೀವನ್​ ಮಿಷನ್​ನಡಿ ಯೋಜನೆ ಸೇರ್ಪಡಿಸಲಾಗಿದೆ. ಬಹುಗ್ರಾಮ ನೀರಿನ ಯೋಜನೆ ಹಲವು ಕಡೆ ಅನುಷ್ಟಾನ ಆಗಿಲ್ಲ. ನೀರಿನ ಲಭ್ಯತೆಗೆ ಅನುಸಾರವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ರಾಜ್ಯದಲ್ಲಿರುವ ಒಟ್ಟು 97.91 ಲ ಗ್ರಾಮೀಣ ಮನೆಗಳ ಪೈಕಿ, 2021ರ ಮಾರ್ಚ್​ ಅಂತ್ಯಕ್ಕೆ 28.15 ಲ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. ಈವರೆಗೆ ಒಟ್ಟು 34.90 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದು, 2024ರ ಮಾರ್ಚ್​ ಅಂತ್ಯದೊಳಗಾಗಿ ಗುರಿ ತಲುಪುವ ನಿಟ್ಟಿನಲ್ಲಿ ನಲ್ಲಿ ಸಂಪರ್ಕಕ್ಕಾಗಿ 11,010 ಕೋಟಿ ರೂ. ಹಾಗೂ ಸುಸ್ಥಿರ ಜಲಮೂಲಗಳಿಂದ ನೀರು ಸರಬರಾಜಿಗೆ 30,790 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕಾಲಾವಧಿ ವಿಸ್ತರಿಸುವುದಿಲ್ಲ
    ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ 692 ತಜ್ಞ ವೈದ್ಯರು ಹಾಗೂ 1,048 ಸಾಮಾನ್ಯ ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಗೊಂಡು, ನಿಗದಿತ ಕಾಲಾವಧಿಯಲ್ಲಿ ವರದಿ ಮಾಡಿಕೊಳ್ಳದವರಿಗಾಗಿ ಕಾಲಾವಧಿ ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದ್ದಾರೆ. ಜೆಡಿಎಸ್​ನ ಎನ್​.ಅಪ್ಪಾಜಿಗೌಡ ಪ್ರಶ್ನೆಗೆ ಉತ್ತಿಸಿರುವ ಅವರು, ಈಗಾಗಲೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts