More

    2 ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಸಮುದ್ರದಲ್ಲಿ ಜೀವಂತ ಪತ್ತೆ: ಎದೆ ಝಲ್​ ಎನಿಸುವ ಘಟನೆ ಇದು!

    ನ್ಯೂಯಾರ್ಕ್​: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಲಂಬಿಯನ್​ ಮಹಿಳೆಯೊಬ್ಬರು ಜೀವಂತವಾಗಿ ಸಮದ್ರದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಎಲ್ಲರನ್ನೂ ಚಕಿತಗೊಳಿಸಿದೆ.

    ಕೊಲಂಬಿಯಾದ ಕರಾವಳಿ ಪ್ರದೇಶದಲ್ಲಿ ಏಂಜೆಲಿಕಾ ಗೈಟನ್ (46) ಎಂಬ ಮಹಿಳೆ ಕಾಣಿಸಿಕೊಳ್ಳುವ ಮೂಲಕ ಮೀನುಗಾರರನ್ನು ಆಶ್ಚರ್ಯಕ್ಕೆ ದೂಡಿದರು. ಇನ್ನು ಏಂಜೆಲಿಯಾರನ್ನು ರಕ್ಷಣೆ ಮಾಡುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಮೀನುಗಾರ ರೊಲ್ಯಾಂಡೋ ವಿಸ್ಬಲ್​ ಮತ್ತವರ ಸ್ನೇಹಿತರು ಮಹಿಳೆಯನ್ನು ಪತ್ತೆಹಚ್ಚಿದ್ದಾರೆ. ಪೋರ್ಟೊ ಕೊಲಂಬಿಯಾದ ಸಮುದ್ರ ದಡದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಶನಿವಾರ ಬೆಳಗ್ಗೆ 6 ಗಂಟೆಗೆ ಏಂಜೆಲಿಕಾ ಅವರು ಪತ್ತೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಿಸ್ಬಲ್​ ಅವರು ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಬಾಬ್ರಿ ಮಸೀದಿ ಕೇಸ್​- ಕೋರ್ಟ್​ನತ್ತ ಮುಖಂಡರು: ವಿನಾಯಿತಿ ಕೋರಿದ ಮೂವರು, ಆರೋಪ ಸಾಬೀತಾದರೆ ಶಿಕ್ಷೆ ಏನು?

    ನ್ಯೂಯಾರ್ಕ್​ ಪೋಸ್ಟ್​ ಪ್ರಕಾರ ಆರಂಭದಲ್ಲಿ ಮಹಿಳೆಯನ್ನು ನೋಡಿ ಯಾವುದೇ ಮರದ ತುಂಡು ಇರಬಹುದೇನೆಂದು ವಿಸ್ಬಲ್​ ಮತ್ತು ಸ್ನೇಹಿತರು ಭಾವಿಸಿದ್ದರಂತೆ. ಆದರೆ, ಏಂಜೆಲಿಕಾ ಅವರು ಸಹಾಯಕ್ಕಾಗಿ ಕೈಮೇಲೆ ಎತ್ತಿ ಸೂಚನೆ ನೀಡಿದಾಗಲೇ ವಿಸ್ಬಲ್​ ಅವರಿಗೆ ಘಟನೆ ಅರಿವಾಗಿದೆ. ಬಳಿಕ ದೋಣಿಯನ್ನು ಏಂಜೆಲಿಕಾ ಅವರೆಡೆಗೆ ತಿರುಗಿಸಿ ಯಾವುದೇ ಸ್ಪಂದನೆ ಇಲ್ಲದೆ ನಿತ್ರಾಣ ಸ್ಥಿತಿಯಲ್ಲಿದ್ದ ಏಂಜೆಲಿಕಾರನ್ನು ರಕ್ಷಿಸಿದ್ದಾರೆ. ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ನೀರಿನಲ್ಲಿ ತೇಲಿದ್ದರಿಂದ ಏಂಜೆಲಿಕಾ ಅವರು ತುಂಬಾ ದಣಿದಿದ್ದರು ಮತ್ತು ಲಘು ಉಷ್ಣತೆಯಿಂದ ಬಳಲಿದ್ದರು.

    El momento cuando la rescatamos.

    Posted by Rolando Visbal Lux on Tuesday, September 29, 2020

    ರಕ್ಷಣೆ ಮಾಡಿದ ಬಳಿಕ ಆಕೆ ಆಡಿದ ಮೊದಲು ಮಾತು ” ನಾನು ಮತ್ತೆ ಹುಟ್ಟಿದ್ದೇನೆ, ನಾನು ಸಾಯುವುದು ದೇವರಿಗೆ ಬೇಕಾಗಿಲ್ಲ” ಎಂದಿದ್ದಾರೆ. ಆಕೆಯನ್ನು ರಕ್ಷಣೆ ಮಾಡುವ ಮತ್ತಷ್ಟು ವಿಡಿಯೋಗಳನ್ನು ವಿಸ್ಬಲ್​ ಅವರು ಶೇರ್​ ಮಾಡಿಕೊಂಡಿದ್ದು, ಭಾರಿ ವೈರಲ್​ ಆಗಿವೆ. ಇನ್ನು ನಿತ್ರಾಣರಾಗಿದ್ದ ಏಂಜೆಲಿಕಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

    ತೆರೆದುಕೊಂಡಿತು ಏಂಜೆಲಿಕಾ ಇತಿಹಾಸ
    ಏಂಜೆಲಿಕಾ ಅವರು ಪತ್ತೆಯಾದ ಬೆನ್ನಲ್ಲೇ ಅವರ ಇತಿಹಾಸ ಬಿಚ್ಚಿಕೊಂಡಿತು. ಹಲವು ವರ್ಷಗಳವರೆಗೆ ತಮ್ಮ ಮಾಜಿ ಪತಿಯ ಕೌಟಂಬಿಕ ಹಿಂಸೆಗೆ ನಲುಗಿ ಹೋಗಿದ್ದ ಏಂಜೆಲಿಕಾ 2018ರಲ್ಲಿ ಮನೆಯಿಂದ ಓಡಿಹೋಗಲು ನಿರ್ಧರಿಸುತ್ತಾರಂತೆ. ಸುಮಾರು 20 ವರ್ಷ ವಿಷಮ ಸಂಬಂಧದ ಸುಳಿಯಲ್ಲಿ ಸಿಲುಕಿದ್ದೆ. ಮೊದಲ ಬಾರಿಗೆ ಗರ್ಭಿಣಿ ಆದಾಗಿನಿಂದ ನನ್ನ ಮೇಲೆ ಕಿರುಕುಳ ನೀಡಲು ಆರಂಭವಾಯಿತು. ಎರಡನೇ ಬಾರಿಯೂ ಕಿರುಕುಳ ಮುಂದುವರಿಯಿತು. ಮಾಜಿ ಪತಿ ತುಂಬಾ ಚಿತ್ರಹಿಂಸೆ ನೀಡುತ್ತಿದ್ದ. ಮಕ್ಕಳು ಚಿಕ್ಕವರಾಗಿದ್ದರಿಂದ ಎಷ್ಟೇ ನೋವಾದರೂ ಸಹಿಸಿಕೊಂಡಿದ್ದೆ. ಪೊಲೀಸ್​ ದೂರು ನೀಡಿದರು ಸಹ ಪ್ರಯೋಜನವಾಗಲಿಲ್ಲ. ಪತಿಯನ್ನು ಬಂಧಿಸಿ 24 ಗಂಟೆಯ ಬಳಿಕ ಮತ್ತೆ ಬಿಟ್ಟು ಕಳುಹಿಸಿದರು. ಮರಳಿ ಬಂದ ನಂತರವೂ ಹಿಂಸೆ ನೀಡುವುದನ್ನು ಪತಿ ಮುಂದುವರಿಸಿದರು ಎಂದು ಮಾಜಿ ಪತಿ ಕರಾಳ ಮುಖವನ್ನು ಹೊರಗಾಕಿದ್ದಾರೆ.

    ಇದನ್ನೂ ಓದಿ: ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಹತ್ರಾಸ್ ಗ್ಯಾಂಗ್​ರೇಪ್​ ಸಂತ್ರಸ್ತೆಯದ್ದಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಸೆಪ್ಟೆಂಬರ್​ 2018ರಲ್ಲಿ ನನ್ನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಪತಿ ಕೊಲೆ ಮಾಡಲು ಯತ್ನಿಸಿದರು. ನನ್ನ ಕೈಯಲ್ಲಿ ಹಿಂಸೆಯನ್ನು ಸಹಿಸಿಕೊಳ್ಳಲು ಆಗಲಿಲ್ಲ. ಬಳಿಕ ಮನೆಯಿಂದ ಓಡಿಬಂದು ಸುಮಾರು 6 ತಿಂಗಳು ಬೀದಿ ಬೀದಿ ಅಲೆದಾಡಿದೆ. ಬಳಿಕ ಕ್ಯಾಮಿನೋ ಡಿ ಫೆ ರಕ್ಷಣಾ ಕೇಂದ್ರದಲ್ಲಿ ವಾಸವಿದ್ದೆ. ಆದಾಗ್ಯು ಪೊಲೀಸರು ಆಶ್ರಯ ಮನೆಯಿಂದ ಹೊರಹಾಕಿದರು. ಆದರೂ ನನ್ನ ಪತಿ ಬೆನ್ನತ್ತಿದ. ಬಳಿಕ ಎಲ್ಲ ಸಂಬಂಧಗಳನ್ನು ಮುರಿದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದೆ. ನನ್ನ ಕುಟುಂಬದಿಂದಲೂ ನನಗೆ ನೆರವು ಸಿಗಲಿಲ್ಲ. ಎಲ್ಲರೂ ಸೇರಿ ನನ್ನನ್ನು ತುಂಬಾ ನೋಯಿಸಿದರ. ಅಂತಿಮವಾಗಿ ಸಾಯುವ ನಿರ್ಧಾರಕ್ಕೆ ಬಂದೆ. ಸಮುದ್ರಕ್ಕೆ ಜಿಗಿಯಲು ನಿರ್ಧರಿಸಿದೆ. ಆದರೆ, ಕಾಲು ಜಾರಿ ಸಮುದ್ರಕ್ಕೆ ಬಿದ್ದ ಬಳಿಕ ಪ್ರಜ್ಞೆ ಕಳೆದುಕೊಂಡೆ. ಮುಂದೆ ಏನಾಯಿತು ಎಂದು ಗೊತ್ತಾಗಲಿಲ್ಲ. ನನ್ನ ರಕ್ಷಣೆ ಮಾಡಿದವರು ನಾನು ಪ್ರಜ್ಞೆ ತಪ್ಪಿದ್ದೆ ಎಂದು ತಿಳಿಸಿದರು ಎಂದು ಹೇಳಿಕೊಂಡಿದ್ದಾಳೆ.

    ನಂತರ ಸ್ಥಳೀಯ ಮಾಧ್ಯಮ ಏಂಜೆಲಿಕಾ ಅವರ ಮಕ್ಕಳನ್ನು ಸಂಪರ್ಕಿಸಿ, ತಾಯಿಯ ಬಗ್ಗೆ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ನಮ್ಮ ತಾಯಿ ಎಲ್ಲಿ ಹೋದರು ಎಂದು ನಮಗೆ ತಿಳಿಯಲಿಲ್ಲ ಎಂದಿದ್ದಾರೆ. ಅಲ್ಲದೆ, ಕೌಟಂಬಿಕ ಹಿಂಸೆ ನೀಡಿದ್ದಾರೆಂಬುದು ಸುಳ್ಳು ಎಂದು ಹೇಳಿದ್ದಾರೆ. ಇದೀಗ ತನ್ನ ತಾಯಿಯನ್ನು ಮರಳಿ ಕೊಲಂಬಿಯಾ ರಾಜಧಾನಿ ಬೊಗತಾಗೆ ಕರೆತರಲು ಮಕ್ಕಳು ಹಣವನ್ನು ಹೊಂದಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    Amigos les comparto todos los vídeos que logré al momento del rescate en Altamar de Angélica Gaitan frente a las costas del municipio de Puerto Colombia el día sábado 26 de Septiembre de 2020 !

    Posted by Rolando Visbal Lux on Tuesday, September 29, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts