More

    VIDEO| ಚಿರತೆಯೊಂದಿಗೆ ಮಹಿಳೆಯ ಸೆಣಸಾಟ! ಮೈನವಿರೇಳಿಸುತ್ತೆ ಈ ದೃಶ್ಯ!

    ಮುಂಬೈ: ಇತ್ತೀಚೆಗೆ ವನ್ಯಪ್ರಾಣಿಗಳು ನಾಡಿಗೆ ಬರುವ ಪ್ರಸಂಗಗಳು ಹೆಚ್ಚಿದ್ದು, ಎಷ್ಟೋ ಸಂದರ್ಭಗಳಲ್ಲಿ ಜನರ ಮೇಲೆರಗಿರುವುದೂ ಉಂಟು. ಇತ್ತೀಚೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಚಿರತೆಯೊಂದು ರಾತ್ರಿ ವೇಳೆ ಊರಿಗೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದ್ದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮುಂಬೈನ ಗೋರೆಗಾವ್ ಬಳಿಯ ಆರೇ ಪ್ರದೇಶದಲ್ಲಿರುವ ವಿಸವ ವರ್ಕರ್ಸ್​ ಕಾಲೊನಿಯ ನಿವಾಸಿಯೊಬ್ಬರು ಮನೆಯ ಮುಂದೆ ತಮ್ಮ ವಾಕಿಂಗ್​ ಸಪೋರ್ಟ್​ ಹಿಡಿದುಕೊಂಡು ಬಂದು ಕೂತಿದ್ದಾರೆ. ಆಗ ಹಿಂದಿನಿಂದ ಬಂದ ಚಿರತೆ ಅವರ ಮೇಲೆರಗಿದೆ. ಸಮಯಪ್ರಜ್ಞೆ ತೋರಿರುವ ಮಹಿಳೆಯು ತಕ್ಷಣ ತಮ್ಮ ವಾಕಿಂಗ್​ ಸಪೋರ್ಟಿನಿಂದ ಚಿರತೆಗೆ ಹೊಡೆದು ಅದನ್ನು ಹಿಮ್ಮೆಟ್ಟಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ. ನೀವೂ ನೋಡಿ –

    55 ವರ್ಷ ವಯಸ್ಸಿನ ಈ ಮಹಿಳೆ ಚಿರತೆಯ ಹಲ್ಲೆಯಿಂದಾಗಿ ಧೊಪ್ಪನೇ ನೆಲದ ಮೇಲೆ ಬಿದ್ದಿದ್ದಲ್ಲದೆ, ಚಿರತೆಯ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ‘ಹೈಕಮ್ಯಾಂಡ್’​ ವಿರುದ್ಧ ದನಿ ಎತ್ತಿದ ಕಾಂಗ್ರೆಸ್​ ನಾಯಕನ ಮನೆ ಮೇಲೆ ದಾಳಿ!

    ವಿಕೃತಕಾಮಿ‌ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts