More

    VIDEO: ಮನೆಯಲ್ಲಿ ಕುಳಿತೇ ಅಮರನಾಥ ಹಿಮಲಿಂಗ ದರ್ಶನ ಮಾಡಿ

    ಶ್ರೀನಗರ: ಜಗತ್ಪ್ರಸಿದ್ಧ ಶ್ರೀ ಅಮರನಾಥ ಯಾತ್ರೆ ಈ ಸಲ ಜುಲೈ 21ರಿಂದ ಆರಂಭವಾಗಲಿದ್ದು, ಆಗಸ್ಟ್​ 3ರಂದು ಕೊನೆಗೊಳ್ಳಲಿದೆ. ಈ ಸಲ 55 ವರ್ಷ ವಯಸ್ಸಿನೊಳಗಿನವರಿಗೆ ಮಾತ್ರವೇ ಯಾತ್ರೆ ಕೈಗೊಳ್ಳುವುದಕ್ಕೆ ಅನುಮತಿ ನೀಡಲಾಗಿದೆ ಎಂದು ಅಮರನಾಥ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

    ಯಾತ್ರಾರ್ಥಿಗಳು ಕೋವಿಡ್​ 19 ಸೋಂಕಿನ ಕಾರಣ ಎಲ್ಲರೂ ಕೋವಿಡ್ 19 ನೆಗೆಟಿವ್ ಸರ್ಟಿಫಿಕೆಟ್​ ಸಲ್ಲಿಸಿದರೆ ಮಾತ್ರವೇ ಯಾತ್ರೆ ಕೈಗೊಳ್ಳುವುದಕ್ಕೆ ಅನುಮತಿ ಸಿಗಲಿದೆ. ಜಮ್ಮು-ಕಾಶ್ಮೀರ ಗಡಿ ಪ್ರವೇಶಿಸುತ್ತಲೇ ಥರ್ಮಲ್ ಸ್ಕ್ರೀನಿಂಗ್ ಇರಲಿದ್ದು, ನಂತರವೇ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಮಂಡಳಿ ಹೇಳಿದೆ.

    ಇದನ್ನೂ ಓದಿ: ಮಕ್ಕಳಲ್ಲಿ ನಾಯಕತ್ವ ಲಕ್ಷಣಗಳನ್ನು ಬೆಳೆಸುವ ಬಗೆ

    ಸಾಧುಗಳ ಹೊರತಾಗಿ ಉಳಿದ ಯಾತ್ರಾರ್ಥಿಗಳ ಆನ್​ಲೈನ್ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು, ದೂರದರ್ಶನದ ಜತೆಗೆ ಒಪ್ಪಂದ ಮಾಡಿಕೊಂಡು ಶ್ರೀಅಮರನಾಥನ ಬೆಳಗ್ಗಿನ ಆರತಿಯ ನೇರ ಪ್ರಸಾರ( DD National & Live-Stream)ಕ್ಕೂ ಅವಕಾಶ ಮಾಡಿಕೊಡಲಾಗಿದೆ. ಯಾತ್ರೆ ಕೈಗೊಳ್ಳಲು ಸಾಧ್ಯವಾಗದವರು ಮನೆಯಲ್ಲೇ ಕುಳಿತೇ ಬೆಳಗ್ಗಿನ ಆರತಿ ಕಾರ್ಯಕ್ರಮ ನೋಡಿ ದೇವರ ದರ್ಶನ ಮಾಡಬಹುದು ಎಂದು ಮಂಡಳಿ ತಿಳಿಸಿದೆ. (ಏಜೆನ್ಸೀಸ್)

    ಹೃದಯದ ಆರೋಗ್ಯ ಹೆಚ್ಚಿಸುವ ಯೋಗ-ಮುದ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts