More

    VIDEO| ನಟಿ ನಯನತಾರಾ ಜನ್ಮದಿನ… ಹೀಗಿತ್ತು ಬರ್ತ್​​ಡೇ ಪಾರ್ಟಿ!

    ನವದೆಹಲಿ: ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತರಾಗಿರುವ ಬಹುಭಾಷಾ ನಟಿ ನಯನತಾರಾಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 37ನೇ ಹುಟ್ಟಿದಹಬ್ಬವನ್ನು ಅವರು ತಮ್ಮ ಫಿಯಾನ್ಸಿ ಚಿತ್ರನಿರ್ಮಾಪಕ ವಿಘ್ನೇಶ್​ ಶಿವನ್​​ರೊಂದಿಗೆ ಆಚರಿಸಿಕೊಂಡರು.

    ಕೇಕ್​ ಕಟಿಂಗ್​ ಕಾರ್ಯಕ್ರಮದಲ್ಲಿ ಅವರ ಮುಂದಿನ ಚಿತ್ರ ‘ಕಾತುವಾಕುಲ ರೆಂಡು ಕಾದಲ್​​’ನ ಸಹಕಲಾವಿದರಾದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ಸೇತುಪತಿ ಕೂಡ ಪಾಲ್ಗೊಂಡರು.

    ಹಳದಿ ಟಾಪ್​ ಮತ್ತು ಲೂಸ್​​ ಜೀನ್ಸ್​ ತೊಟ್ಟು ಸರಳವಾಗಿ ಕಾಣಿಸಿಕೊಂಡ ನಯನತಾರಾ ತಮ್ಮ ಬರ್ತ್​ಡೇ ಸಂದರ್ಭದ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇಂಗ್ಲಿಷಿನಲ್ಲಿ ನಯನ್​ ಎಂಬ ಅಕ್ಷರಗಳ ಮಾದರಿಯ ಕೇಕ್​ಗಳು ಮತ್ತು ಹ್ಯಾಪಿ ಬರ್ತ್​ಡೇ ಲೇಡಿ ಸೂಪರ್​ಸ್ಟಾರ್​ ಎಂದು ಬರೆದ ಚಾಕಲೇಟ್​ ಕೇಕ್​ ಅವರ ಬರ್ತ್​ಡೇಗೆ ವಿಶೇಷವಾಗಿದ್ದವು.

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ ಕೂಡ ಹ್ಯಾಪಿ ಬರ್ತ್​ಡೇ ನಯನ್​ ಎಂದು ವಿಶ್​ ಮಾಡಿ, ಅವರನ್ನು ತಬ್ಬಿ ನಿಂತ ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. (ಏಜೆನ್ಸೀಸ್​​)

    ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

    ಭಾರತದ ಬಗ್ಗೆ ಅಮೆರಿಕದಲ್ಲಿ ‘ವಿಡಂಬನೆ’ ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts