More

    ವಿಮಾನಕ್ಕೆ ಹಕ್ಕಿ ಡಿಕ್ಕಿ; ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿ ಉರಿದ ಎಂಜಿನ್!​​

    ಅಮೆರಿಕ: ಇತ್ತೀಚಿನ ದಿನಗಳಲ್ಲಿ ವಿಮಾನ ದುರಂತದ ಸುದ್ದಿಗಳು ಹೆಚ್ಚಾಗುತ್ತಿವೆ. ಆಕಾಶದಲ್ಲಿ ಚಲಿಸುತ್ತಿದ್ದ ವಿಮಾನಕ್ಕೆ ಹಾರಾಡುತ್ತಿದ್ದ ಹಕ್ಕಿಯೊಂದು ಡಿಕ್ಕಿಯಾಗಿ ವಿಮಾನದ ಎಂಜಿನ್​ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

    ಓಹಿಯೋ ವಿಮಾನ ನಿಲ್ದಾಣದಿಂದ ಭಾನುವಾರ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ವಿಮಾನಕ್ಕೆ ಒಂದು ಹಕ್ಕಿಯ ಡಿಕ್ಕಿಯಾಗಿದೆ. ಈ ವೇಳೆ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ. ವಿಡಿಯೋದಲ್ಲಿ ವಿಮಾನದ ಇಂಜಿನ್ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು. ನಂತರ ಅಮೆರಿಕನ್ ಏರ್‌ಲೈನ್ಸ್ ಬೋಯಿಂಗ್ 737 ವಿಮಾನವು ಯುಎಸ್‌ನ ಓಹಿಯೋದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಅಗ್ನಿಶಾಮಕ ದಳದವರು ತ್ವರಿತವಾಗಿ ಬೆಂಕಿಯನ್ನು ನಂದಿಸಿದರು.

    ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆಯಲ್ಲಿ ಕಂತೆ‌ ಕಂತೆ ಹಣ, ಬೆಳ್ಳಿ, ಚಿನ್ನ, ವಿದೇಶಿ ಕರೆನ್ಸಿಗಳು ಪತ್ತೆ!
    ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್​ ಮಾಡಲಾಗಿದೆ. ಯಾವುದೇ ಪ್ರಣಾಪಾಯವಾಗಿರುವ ಕುರಿತಾಗಿ ಯಾವುದೇ ವರದಿಯಾಗಿಲ್ಲ. ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ.

    https://twitter.com/aviationbrk/status/1650232686873571328

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts