More

    ಜಯಕ್ಕಾಗಿ ವಿದರ್ಭ-ಎಂಪಿ ಫೈಟ್: ಕುತೂಹಲ ಕೆರಳಿಸಿದೆ ಕೊನೇ ದಿನದಾಟ

    ನಾಗ್ಪುರ: ಬ್ಯಾಟರ್ ಯಶ್ ರಾಥೋಡ್ (141 ರನ್, 200 ಎಸೆತ, 18 ಬೌಂಡರಿ, 2 ಸಿಕ್ಸರ್) ಶತಕದ ನೆರವಿನಿಂದ ವಿದರ್ಭ ತಂಡ ದಿಟ್ಟ ಹೋರಾಟ ನಡೆಸಿದ್ದು, ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ಸೆಮಿೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಗೆಲುವಿನ ಆಸೆ ಜೀವಂತವಿರಿಸಿದೆ. ಪಂದ್ಯದ ಐದನೇ ಹಾಗೂ ಅಂತಿಮ ದಿನವಾದ ಬುಧವಾರದ ಆಟ ಕುತೂಹಲ ಮೂಡಿಸಿದ್ದು, ವಿದರ್ಭ ಗೆಲುವಿಗೆ 4 ವಿಕೆಟ್ ಅಗತ್ಯವಿದ್ದರೆ, ಮಧ್ಯಪ್ರದೇಶಕ್ಕೆ 93 ರನ್ ಬೇಕಿದೆ.

    ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನವಾದ ಮಂಗಳವಾರ 6 ವಿಕೆಟ್‌ಗೆ 343 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ವಿದರ್ಭ, 101.3 ಓವರ್‌ಗಳಲ್ಲಿ 402 ರನ್‌ಗಳಿಗೆ ಆಲೌಟ್ ಆಯಿತು. 321 ರನ್ ಗುರಿ ಪಡೆದ ಮಧ್ಯಪ್ರದೇಶ, ಆರಂಭಿಕ ಯಶ್ ದುಬೆ (94 ರನ್, 212 ಎಸೆತ, 10 ಬೌಂಡರಿ) ಹಾಗೂ ಹರ್ಷ ಗೌಲಿ (67) ಜತೆಯಾಟದ ಬಲದಿಂದ ದಿನದಂತ್ಯಕ್ಕೆ 71 ಓವರ್‌ಗಳಲ್ಲಿ 6 ವಿಕೆಟ್‌ಗೆ 228 ರನ್‌ಗಳಿಸಿದೆ. ದಿನದಾಟ ಅಂತ್ಯಕ್ಕೆ ಮುನ್ನ ಯಶ್ ದುಬೆ ವಿಕೆಟ್ ಕಬಳಿಸಿದ ವಿದರ್ಭ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

    ವಿದರ್ಭ: 170 ಹಾಗೂ 402 (ಯಶ್ 141, ಅಕ್ಷಯ್ 77, ಆದಿತ್ಯ 21, ಅನುಭವ್ 92ಕ್ಕೆ 5, ಕುಲ್ವಂತ್ 64ಕ್ಕೆ2).
    ಮಧ್ಯಪ್ರದೇಶ: 252 ಹಾಗೂ 6 ವಿಕೆಟ್‌ಗೆ 228 (ಯಶ್ ದುಬೆ 94, ಹರ್ಷ 67, ಸಾಗರ್ 12, ವೆಂಕಟೇಶ್ ಅಯ್ಯರ್ 19, ಸರಶ್ಯ 16*, ಅಕ್ಷಯ್ 38ಕ್ಕೆ3, ಆದಿತ್ಯ 51ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts