More

    ಕೊಡವ ಟ್ರೈಬ್, ಕೂರ್ಗ್ ಯುನೈಟೆಡ್ ತಂಡಕ್ಕೆ ಗೆಲುವು

    ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಕೊಡವ ಟ್ರೈಬ್, ಕೂರ್ಗ್ ಯುನೈಟೆಡ್ ತಂಡಗಳು ಗೆಲುವು ಸಾಧಿಸಿತು.


    ಶನಿವಾರದ ಮೊದಲ ಪಂದ್ಯದಲ್ಲಿ ಕೊಡವ ಟ್ರೈಬ್ ತಂಡ ೩೮ ರನ್‌ಗಳ ಅಂತರದಿಂದ ಎದುರಾಳಿ ರಾಯಲ್ಸ್ ಟೈಗರ್ಸ್‌ ತಂಡವನ್ನು ಮಣಿಸಿತು. ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಲು ಇಳಿದ ಕೊಡವ ಡ್ರೈಬ್ ತಂಡ, ರಾಯಲ್ಸ್ ಟೈಗರ್ಸ್‌ ತಂಡದ ಉತ್ತಮ ಬೌಲಿಂಗ್ ದಾಳಿಯ ಎದುರು ರನ್‌ಗಳಿಸಲು ಸಾಕಷ್ಟು ಪರಿಶ್ರಮ ಪಡಬೇಕಾಗಿ ಬಂದಿತು. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಕೊಡವ ಟ್ರೈಬ್ ೧೯.೫ ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ೧೬೫ ರನ್‌ಗಳ ಗೌರವದ ಮೊತ್ತವನ್ನು ಪೇರಿಸಿತು.


    ಗೆಲುವಿನ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾದ ರಾಯಲ್ ಟೈಗರ್ಸ್‌ ತಂಡ, ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೨೭ ರನ್‌ಗಳನ್ನಷ್ಟೆ ಮಾಡಲು ಶಕ್ತವಾಗಿ ಸೋಲಿಗೆ ಶರಣಾಯಿತು. ಕೊಡವ ಟ್ರೈಬ್ ತಂಡದ ಗ್ಯಾನ್ ಸೋಮಯ್ಯ ಅವರು ತಂಡದ ಸಂಕಷ್ಟದ ಅವಧಿಯಲ್ಲಿ ಕೇವಲ ೨೩ ಬಾಲ್‌ಗಳಿಗೆ ಬಿರುಸಿನ ೬೦ ರನ್‌ಗಳನ್ನು ಕಲೆ ಹಾಕುವ ಮೂಲಕ, ತಂಡದ ಗೌರವದ ಮೊತ್ತಕ್ಕೆ ಮಹತ್ವದ ಕಾಣಿಕೆ ನೀಡಿದರು. ಅತ್ಯುತ್ತಮವಾದ ಆಟಕ್ಕಾಗಿ ಇವರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನೀಡಲಾಯಿತು.


    ಎರಡನೇ ಪಂದ್ಯಾಟದಲ್ಲಿ ಟಾಸ್ ಸೋತ ಕೂರ್ಗ್ ಯೂನಿಯನ್ ತಂಡ ನಿಗದಿತ ೨೦ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೧೯೯ರನ್ ಕಲೆ ಹಾಕಿತು. ತಂಡದ ಪರ ಸಿ.ಆರ್.ಅಯ್ಯಪ್ಪ ೪೭ ಎಸೆತದಲ್ಲಿ ೮೯ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ಎಂಟಿಬಿ ರಾಯಲ್ಸ್ ತಂಡ ೯ ವಿಕೆಟ್ ಕಳೆದುಕೊಂಡು ೧೨೧ ರನ್ ದಾಖಲಿಸಿ ೭೮ ರನ್‌ಗಳ ಅಂತದಿಂದ ಸೋಲುಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂರ್ಗ್ ಯೂನಿಯನ್ ಸಿ.ಆರ್.ಅಯ್ಯಪ್ಪ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts