More

    ಕಾಲಾ ಪತ್ಥರ್​​ನಲ್ಲಿ ಕೆಂಡಸಂಪಿಗೆ ವಿಕ್ಕಿ; ಇದು ಸೂತ್ರಧಾರ ಸತ್ಯಪ್ರಕಾಶ್ ಬರೆದ ಕಥೆ..

    ಬೆಂಗಳೂರು: ‘ಕೆಂಡಸಂಪಿಗೆ’ಯ ಮುಗ್ಧ ಹುಡುಗ, ‘ಕಾಲೇಜ್ ಕುಮಾರ’ ಚಿತ್ರದ ಮಿಡಲ್ ಕ್ಲಾಸ್ ಹೀರೋ ವಿಕ್ಕಿ ವರುಣ್ ಇದೀಗ ‘ಕಾಲಾ ಪತ್ಥರ್’ ಹಿಂದೆ ಬಿದ್ದಿದ್ದಾರೆ. ಅಂದರೆ, ಆ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಈ ಸಲ ಹಿಂದಿನ ಎರಡು ಸಿನಿಮಾಗಳಿಗಿಂತ ವಿಭಿನ್ನ ಅವತಾರದಲ್ಲಿ ಎದುರಾಗುತ್ತಿದ್ದಾರೆ.

    ವಿಶೇಷ ಏನೆಂದರೆ ಈಗಾಗಲೇ ‘ರಾಮಾ ರಾಮಾ ರೇ’ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ನಿರ್ದೇಶಿಸಿರುವ ಸೂತ್ರದಾರ ಸತ್ಯಪ್ರಕಾಶ್ ವಿಕ್ಕಿಯ ‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಅವರ ಜತೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದ ಚೇತನ್, ಈ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕಿಳಿಯುತ್ತಿದ್ದಾರೆ.

    ಇಂಥ ತಂಡದೊಂದಿಗೆ ಕೆಲಸ ಮಾಡುತ್ತಿರುವ ವಿಕ್ಕಿ ತಮ್ಮ ಪಾತ್ರದ ಬಗ್ಗೆಯೂ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ‘ಈ ಹಿಂದಿನ ಎರಡು ಸಿನಿಮಾಗಳಲ್ಲಿನ ವಿಕ್ಕಿಯೇ ಬೇರೆ. ಇದೀಗ ಕಾಣಿಸುವ ವಿಕ್ಕಿಯೇ ಬೇರೆ. ಈ ಪಾತ್ರಕ್ಕಾಗಿ ಏಳು ಕೆ.ಜಿ ತೂಕವನ್ನೂ ಹೆಚ್ಚಿಸಿಕೊಂಡಿದ್ದೇನೆ. ಶೀರ್ಷಿಕೆಗೆ ತಕ್ಕಂತೆ ಆಕ್ಷನ್ ಜತೆಗೆ ಅಷ್ಟೇ ಭಾವುಕ ಅಂಶಗಳನ್ನೂ ಸೇರಿಸಲಾಗಿದೆ’ ಎನ್ನುತ್ತಾರೆ ವಿಕ್ಕಿ.

    1979ರಲ್ಲಿ ಯಶ್ ಚೋಪ್ರಾ ನಿರ್ದೇಶನದಲ್ಲಿ ಅಮಿತಾಬ್ ಬಚ್ಚನ್ ‘ಕಾಲಾ ಪತ್ಥರ್’ ಶೀರ್ಷಿಕೆಯ ಸಿನಿಮಾ ಮಾಡಿದ್ದರು. ಆ ಸಮಯದಲ್ಲಿ ಕನ್ನಡದಲ್ಲಿ ಅಂಬರೀಷ್ ಸಹ ಅದೇ ಶೀರ್ಷಿಕೆಯಲ್ಲಿ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ಆದರೆ, ಅದು ಈಡೇರಲಿಲ್ಲ. ಇದೀಗ ಅದೇ ಶೀರ್ಷಿಕೆ ವಿಕ್ಕಿಗೆ ಸಿಕ್ಕಿದೆ. ನವೀನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಫೆಬ್ರವರಿಯಿಂದ ಶೂಟಿಂಗ್ ಶುರುವಾಗಲಿದ್ದು, ಶೀಘ್ರದಲ್ಲಿಯೇ ಇನ್ನುಳಿದ ತಾರಾಗಣ ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿ ನೀಡಲಿದೆ ತಂಡ.

    “ಮಾಂಸಾಹಾರ ಕಡಿಮೆ ಮಾಡದಿದ್ದರೆ ಭೂಮಿಗೇ ಅಪಾಯ..”

    ಈ ಮದ್ವೆ ಬಗ್ಗೆ ತಕರಾರು ತೆಗೆಯುವ ಹಾಗೇ ಇಲ್ಲ. ಏಕೆಂದರೆ ಇದು ಅಕ್ಷರಶಃ ‘ಸಂವಿಧಾನಬದ್ಧ’ ಮದುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts