More

    ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಶೀಘ್ರವಾಗಿ ಗಲ್ಲಿಗೇರಿಸಬೇಕು: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು

    ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣ ಅಪರಾಧಿಗಳನ್ನು ಶೀಘ್ರವಾಗಿ ಮರಣದಂಡನೆಗೆ ಗುರಿಪಡಿಸಬೇಕು ಎಂದು ಆಮ್​ ಆದ್ಮಿ ಪಕ್ಷದ ಶಾಸಕ ಸಂಜಯ್​ ಸಿಂಗ್​ ನೀಡಿರುವ ಹೇಳಿಕೆಗೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಧ್ವನಿಗೂಡಿಸಿದ್ದಾರೆ.

    ನಾಲ್ವರನ್ನು ಶೀಘ್ರವೇ ಗಲ್ಲಿಗೇರಿಸಲು ಜವಾಬ್ದಾರಿ ಹೊಂದಿರುವ ಎಲ್ಲ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಅಂತಿಮಗೊಳಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ರಾಜ್ಯಸಭೆಯಲ್ಲಿ ಮಾತನಾಡಿದರು.

    ಅಪರಾಧಿಗಳನ್ನು ಕ್ಷಮಿಸಲು ಸಾಧ್ಯವಿಲ್ಲ. ರಾಷ್ಟ್ರದ ಜನರು ಕೂಡ ಇದನ್ನು ಒಪ್ಪುವುದಿಲ್ಲ. ಅಪರಾಧಿಗಳಿಗೆ ಎಲ್ಲ ರೀತಿಯ ಕಾನೂನು ನೆರವು ನೀಡಲಾಗಿದೆ. ಅವರು ಎಲ್ಲ ಕಡೆಯೂ ಅಪರಾಧಿಗಳು ಎಂದು ಸಾಬೀತಾಗಿದೆ. ಅವರಿಗೆ ಜೀವಂತವಾಗಿರಲು ಯಾವುದೇ ಹಕ್ಕುಗಳು ಇಲ್ಲ. ಅವರನ್ನು ಶೀಘ್ರವೇ ಗಲ್ಲಿಗೇರಿಸಬೇಕು ಎಂದು ಅವರು ಹೇಳಿದರು.
    ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಅಪರಾಧಿಗಳನ್ನು ಗಲ್ಲಿಗೇರಿಸುವಲ್ಲಿ ವಿಳಂಬವಾಗುತ್ತಿರುವುದು ಸೂಕ್ಷ್ಮ ವಿಷಯವಾಗಿದೆ. ವಿಳಂಬಕ್ಕೆ ಎಎಪಿ ನೇತೃತ್ವದ ಸರ್ಕಾರ ಕಾರಣ ಎಂದು ಆರೋಪಿಸಿದರು.

    ಒಂದು ವರ್ಷದ ಹಿಂದೆಯೇ ಅಪರಾಧಿಗಳ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ತಿಹಾರ್ ಜೈಲು ಅಧಿಕಾರಿಗಳು ಅಪರಾಧಿಗಳನ್ನು ಗಲ್ಲಿಗೇರಿಸುವುದನ್ನು ವಿಳಂಬ ಮಾಡಿತು ಎಂದು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts