More

  ರಾಜ್ಯಸಭೆ ಚುನಾವಣೆ ಮತ ಚಲಾಯಿಸದ ಶಾಸಕ ಹೆಬ್ಬಾರ ಹುಡುಕಿಕೊಡಿ-ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಕೆ

  ಯಲ್ಲಾಪುರ: ರಾಜ್ಯ ಸಭೆ ಚುನಾವಣೆಯಲ್ಲಿ ಮತ ಚಲಾವಣೆಗೆ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಗೈರಾಗಿದ್ದಾರೆ. ಹಾಗಾಗಿ ಶಿವರಾಮ ಹೆಬ್ಬಾರ್ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ ಯಲ್ಲಾಪುರ ಠಾಣೆಗೆ ದೂರು ನೀಡಿದ್ದಾರೆ.

  ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯಸಭೆಯ ಚುನಾವಣೆ ನಡೆದಿದ್ದು, ಬಿಜೆಪಿ ಅವರ ಮನೆಯ ಬಾಗಿಲಿಗೆ ವಿಪ್‌ ಅಂಟಿಸಿತ್ತು. ಆದರೆ, ಸಾಕಷ್ಟು ದಿನಗಳಿಂದ ಬಿಜೆಪಿ ಸಂಪರ್ಕದಿಂದ ದೂರವೇ ಉಳಿದು ಕಾಂಗ್ರೆಸ್‌ ಕಡೆ ಒಲವಿರುವ ಶಿವರಾಮ ಹೆಬ್ಬಾರ್‌ ರಾಜ್ಯ ಸಭೆ ಮತದಾನ ಮಾಡದೇ ಚಾಲಕಿತನ ಪ್ರದರ್ಶಿಸಿದರು. ಬಿಜೆಪಿಯ ಹಿರಿಯ ಮುಖಂಡರ ಸಂಪರ್ಕಕ್ಕೂ ಸಿಕ್ಕಿಲ್ಲ. ಪ್ರಜಾಪ್ರಭುತ್ವದ ಮುಖ್ಯ ಕರ್ತವ್ಯಗಳಲ್ಲೊಂದಾದ ಮತದಾನದಿಂದ ದೂರ ಉಳಿದಿದ್ದಾರೆ. ಎರಡು ದಿನಗಳವರೆಗೆ ಕ್ಷೇತ್ರದಲ್ಲೇ ಇದ್ದ ಶಾಸಕರು ಈಗ ಕ್ಷೇತ್ರದಲ್ಲೂ ಇಲ್ಲ.‌ ಮತ ಹಾಕಲೂ ಹೋಗದೇ, ಕ್ಷೇತ್ರದಲ್ಲೂ ಇಲ್ಲದೇ, ಯಾರ ಸಂಪರ್ಕಕ್ಕೂ ಸಿಗದೇ ಶಾಸಕರು ಕಾಣೆಯಾಗಿದ್ದಾರೆ. ಅವರನ್ನು ಶೀಘ್ರ ಹುಡುಕಿಕೊಡಬೇಕೆಂದು ಪೊಲೀಸರಲ್ಲಿ ಸೋಮೇಶ್ವರ ನಾಯ್ಕ ಆಗ್ರಹಿಸಿದ್ದಾರೆ. 

  ಬಿಜೆಪಿ ಚಿಹ್ನೆಯಡಿ ಆಯ್ಕೆಯಾದ ಶಾಸಕರು ಮತದಾನಕ್ಕೆ ಹಾಜರಾಗಿ ಪಕ್ಷದ ಸೂಚನೆ ಪಾಲಿಸಬೇಕಿತ್ತು. ಅದನ್ನು ಮಾಡಿಲ್ಲ. ಕ್ಷೇತ್ರದಲ್ಲೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹಾಗಾಗಿ ಹುಡುಕಿಕೊಡುವಂತರ ದೂರು ನೀಡಿದ್ದೇನೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ ತಿಳಿಸಿದ್ದಾರೆ.

  ಇದನ್ನೂ ಓದಿ: ಅಘನಾಶಿನಿಗೆ ಆರತಿ ಸಮರ್ಪಣೆ

     

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts