More

    ಕಲಬುರಗಿ ಸಾರಿಗೆ ಸಂಪರ್ಕ ಸ್ಥಗಿತ

    ವಿಜಯಪುರ: ನೆರೆಯ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೊನಾ ಹಾವಳಿ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಕೆಎಎಸ್‌ಆರ್‌ಟಿಸಿ ಮತ್ತು ಖಾಸಗಿ ವಾಹನ ಸಂಚಾರ ರದ್ದುಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆದೇಶಿಸಿದ್ದಾರೆ.
    ಮಹಾರಾಷ್ಟ್ರ ಜಿಲ್ಲೆಯ ಸಾರಿಗೆ ಸಂಪರ್ಕ ಸ್ಥಗಿತಗೊಳಿಸಿದ ಬೆನ್ನಲ್ಲೇ ಕಲಬುರಗಿ ಜಿಲ್ಲೆಗೂ ಆ ನೀತಿ ಅನ್ವಯಿಸಲಾಗಿದೆ. ಕಲಬುರಗಿಯಲ್ಲೂ ಕರೊನಾ ಹಾವಳಿ ಹೆಚ್ಚಿದೆ. ಹೀಗಾಗಿ ಎರಡು ಜಿಲ್ಲೆಗಳ ಸಾರಿಗೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಸಂಜೆ 6ರಿಂದಲೇ ಆದೇಶ ಅನ್ವಯವಾಗಲಿದೆ. ಜತೆಗೆ ಹೇರ್‌ಸಲೂನ್, ಬ್ಯೂಟಿಪಾರ್ಲರ್, ಆಯುಷ್ಮಾನ ಕಾರ್ಡ್ ಹಂಚಿಕೆ ಸಹ ಸ್ಥಗಿತಗೊಳಿಸಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಅಧಿಕಾರಿಗಳ ಸಭೆ

    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಎಂದಿನಂತೆ ಸಭೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಕರೊನಾ ನಿಯಂತ್ರಣ ಹಿನ್ನೆಲೆ ಈಗಾಗಲೇ ಗ್ರಹ ಬಂಧನದಲ್ಲಿರುವವರ ಮೇಲೆ ನಿಗಾ ಇರಿಸಲಾಗಿದೆ ಎಂದರು.
    ಕಲ್ಕತ್ತಾ, ಕರ್ನಾಟಕದ ಕೊಡಗು, ಮೈಸೂರು ಮತ್ತು ವಿವಿಧೆಡೆಗಳಲ್ಲಿ ಗೃಹಬಂಧನದಲ್ಲಿರುವವರು ಕಣ್ತಪ್ಪಿಸಿ ಹೊರಗೆ ಹೋಗುವುದು ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಓಡಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಆಗಬಹುದಾದ ಅಪಾಯಗಳನ್ನು ತಪ್ಪಿಸಲು ಗೃಹ ಬಂಧನದಲ್ಲಿರುವವರ ಮೇಲೆ ನಿಗಾ ಇರಿಸಲಾಗಿದೆ. ನೆರೆಹೊರೆಯವರಿಗೂ ಮಾಹಿತಿ ನೀಡಲು ತಿಳಿಸಲಾಗಿದೆ ಎಂದರು.

    ಸ್ಯಾನಿಟೈಸರ್-ಮಾಸ್ಕ್ ಮಾರಾಟ

    ಜಿಲ್ಲಾದ್ಯಂತ ತುರ್ತುಕೆಲಸ ಹೊರತುಪಡಿಸಿ ಗುಂಪುಗುಂಪಾಗಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲಾಗಿದೆ. ಅತ್ಯಂತ ತುರ್ತುಕೆಲಸವಿರುವ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರೆ ನಿರ್ಣಯ ಕೈಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದ್ದು, ಮಾರುಕಟ್ಟೆಗಳಲ್ಲಿ ಅಕ್ರಮವಾಗಿ ಮತ್ತು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿರುವ ಮಾಸ್ಕ್‌ಗಳ ಜಪ್ತಿಗೆ ಮತ್ತು ಬಳಸಲು ಯೋಗ್ಯವಿರುವ ಮಾಸ್ಕ್‌ಗಳ ಬಳಕೆ ಎಂಆರ್‌ಪಿ ದರದಲ್ಲಿ ಪಡೆಯಬೇಕು. ಅದರಂತೆ ಅವಶ್ಯಕ ವಸ್ತುಗಳ ಬಳಕೆ ಕಾಯ್ದೆ (ಎಶೇನ್ಸಿಯಲ್ ಕಮಾಡಿಟಿ ಆ್ಯಕ್ಟ್) ಅಡಿ ಅನಧಿಕೃತ ಮಾಸ್ಕ್ ಮಾರಾಟ ಮಾಡುವವರ ಬಗ್ಗೆ ಪ್ರಕರಣ ದಾಖಲಿಸಲು ಸಹ ಸೂಚಿಸಲಾಗಿದೆ. ಅನಧಿಕೃತ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳ ಮಾರಾಟ ಕಂಡುಬಂದಲ್ಲಿ ತಕ್ಷಣ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಅಂಗಡಿ ಮತ್ತು ಹೋಲ್‌ಸೇಲ್ ಮಾರಾಟ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
    ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಗ್ರಹ ಬಂಧನದಲ್ಲಿರುವ ವ್ಯಕ್ತಿಗಳ ಮೇಲೆ ನಿಗಾ ಇಡಲು ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿನಕ್ಕೆ 2 ಬಾರಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಭೇಟಿ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಅವರಿಗೆ ಹೊರಹೋಗದಂತೆ ತಿಳುವಳಿಕೆ ನೀಡಬೇಕು. ಅದರಂತೆ ಕರ್ತವ್ಯನಿರತ ಸಿಬ್ಬಂದಿ ಜಾಗೃತರಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
    ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಡಿಎಚ್‌ಒ ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ, ವಿಶ್ವ ಆರೋಗ್ಯ ಸಂಸ್ಥೆಯ ನಿಯಂತ್ರಣಾಧಿಕಾರಿ ಮುಕುಂದ ಗಲಗಲಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts