More

    85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ

    ಚಿತ್ರದುರ್ಗ: 85 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾದವರು ಮತದಾನದಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಪೋಸ್ಟಲ್ ಬ್ಯಾಲೆಟ್, ಎವಿಇಎಸ್ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

    ಅರ್ಹರೆಲ್ಲರಿಗೂ ಶೇ 100ರಷ್ಟು 12‘ಡಿ’ ಫಾರಂ ವಿತರಿಸಬೇಕು. ನಂತರ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲೇಬೇಕು ಎಂಬುದು ಕಡ್ಡಾಯವಲ್ಲ. ಇದು ಒಂದು ಸೌಲಭ್ಯವಷ್ಟೇ. ಫಾರಂಗೆ ಒಪ್ಪಿಗೆ ನೀಡಿ, ಬ್ಯಾಲೆಟ್ ಸಹಾಯದಿಂದ ಮತ ಚಲಾಯಿಸುತ್ತೇನೆಂದು ಅದನ್ನು ಹಿಂದಿರುಗಿಸಿದಾಗ ಮಾತ್ರ ಅದಕ್ಕೆ ಒಪ್ಪಿಗೆ ಸೂಚಿಸಿದಂತಾಗುತ್ತದೆ ಎಂದು ಹೇಳಿದರು.

    ಇದಕ್ಕೆ ಸಂಬಂಧಿಸಿದ ತಂಡ 85 ವರ್ಷ ಮೇಲ್ಪಟ್ಟವರು, ಅಂಗವಿಕಲರ ಮನೆಗೆಳಿಗೆ ಖುದ್ದಾಗಿ ಹೋಗಿ ಫಾರಂ ನೀಡಬೇಕು. ಅಲ್ಲದೆ, ಸ್ವೀಕೃತಿ ಪಡೆಯುವುದು ಕಡ್ಡಾಯ ಎಂದು ಸೂಚಿಸಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ಕ್ಷೇತ್ರವಾರು ಅರ್ಹರ ಮಾಹಿತಿ ಲಭ್ಯವಿದೆ. ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ತೊಂದರೆ ಇರುವಂತಹ ಅಂಗವಿಕಲರು, 85 ವರ್ಷ ಮೇಲ್ಪಟ್ಟವರಿಗೆ ಅವರ ಮನೆಗೆ ತೆರಳಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಈ ಸಂಬಂಧ ನಿಗದಿತ ನಮೂನೆಯನ್ನು ಆಯಾ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ತಲುಪಿಸಬೇಕು. ಇದರ ಜೊತೆಗೆ ಚುನಾವಣಾ ಕರ್ತವ್ಯದಲ್ಲಿರುವ 13 ಇಲಾಖೆ-ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ. ಮತದಾನ ದಿನದಂದು ಮತ ಚಲಾಯಿಸಲು ಆಗದ ಅಧಿಕಾರಿಗಳ, ಸಿಬ್ಬಂದಿ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಈ ಆಧಾರದ ಮೇಲೆ 12‘ಡಿ’ ಫಾರಂ ವಿತರಿಸಬೇಕು. ಇದರ ಮಾಹಿತಿಯನ್ನು ನೋಡಲ್ ಅಧಿಕಾರಿಗಳು ಎಲೆಕ್ಟ್ರೋ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದರು.

    ಅಧಿಕಾರಿಗಳು, ಸಿಬ್ಬಂದಿಗೆ ಮತದಾನ ದಿನದ ಬದಲಿಗೆ ಮತದಾನಕ್ಕೂ ಪೂರ್ವದಲ್ಲಿಯೇ ಫೆಸಿಲಿಟೇಶನ್ ಸೆಂಟರ್‌ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts