More

    ಬಹು ವಿಶಾಲವಾದ ಧರ್ಮ ವೀರಶೈವ – ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರರ ನುಡಿ

    ಲಿಂಗಸುಗೂರು: ವೀರಶೈವ ಧರ್ಮದ ಹಾಗೂ ಪಂಚಪೀಠಗಳ ಪರಂಪರೆ, ಮಾರ್ಗದರ್ಶನ, ಸಂದೇಶಗಳನ್ನು ಅನುಸರಿಸಿ ನಡೆದರೆ ಸುಸಂಸ್ಕೃತ ಸಮಾಜ ನಿರ್ಮಾಣದ ಜತೆಗೆ ಆದರ್ಶ ಸಂಸ್ಕೃತಿ ಬೆಳೆಸುವ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

    ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಆಶೀರ್ವಚನ ನೀಡಿದರು. ವೀರಶೈವ ಧರ್ಮ ಬಹು ವಿಶಾಲವಾದ ಧರ್ಮವಾಗಿದ್ದು, ಈ ಧರ್ಮದ ಆದರ್ಶಗಳನ್ನು ಸರಿಯಾಗಿ ತಿಳಿದು ಆಚರಿಸದೆ ಕೆಲವರು ಭೋಗದಲ್ಲಿ ಬಿದ್ದು ಒದ್ದಾಡುವ ಪರಿಸ್ಥಿತಿ ಬಂದೊದಗಿದೆ. ಮನುಷ್ಯ ಸಾಕಷ್ಟು ಸಂಪತ್ತು ಗಳಿಸಬಹುದು. ಅಧಿಕಾರ, ಅಂತಸ್ತು ಅನುಭವಿಸಬಹುದು. ಆದರೆ ಅವೆಲ್ಲಕ್ಕಿಂತ ಮಾನಸಿಕ ಶಾಂತಿ, ನೆಮ್ಮದಿಯ ಕೊರತೆ ಎಲ್ಲ ಭಾಗಗಳಲ್ಲಿ ಕಾಣುತ್ತಿದ್ದೇವೆ.

    ರೇಣುಕಾದಿ ಪಂಚಾಚಾರ್ಯರು ಮತ್ತು ಬಸವಾದಿ ಶಿವಶರಣರು ವೀರಶೈವ ಧರ್ಮದ ಎರಡು ಕಣ್ಣುಗಳಿದ್ದಂತೆ. ಕೆಲವರು ತಿಳಿವಳಿಕೆ ಇಲ್ಲದೆ ಆಚರಣೆ ಮಾಡಿದ್ದರಿಂದ ಪರಂಪರೆ ಹಾಗೂ ಶರಣರಿಗೂ ಕಂದಕ ನಿರ್ಮಾಣ ಮಾಡಿ ಕಲುಷಿತ ವಾತಾವರಣ ಉಂಟು ಮಾಡಿದ ಅನೇಕ ಉದಾರಹಣೆಗಳಿವೆ. ಜಾತ್ಯಾತೀತ ಮನೋಭಾವದಿಂದ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯಿಂದ ನಡೆಯಬೇಕೆಂಬುದೇ ಪಂಚಪೀಠಗಳ ಆದರ್ಶ ಧ್ಯೇಯವಾಕ್ಯವಾಗಿದೆ ಎಂದರು. ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಉಪಸ್ಥಿತರಿದ್ದರು.

    ವೀರಶೈವ ಪರಂಪರೆಯ ಪಂಚಪೀಠಗಳು ಅಧ್ಯಾತ್ಮ ಸಂದೇಶಗಳನ್ನು ನೀಡುತ್ತ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ಬೆಳೆಸುವ ಕಾರ್ಯ ಮಾಡುತ್ತಿವೆ. ಹುಟ್ಟಿದ ಪ್ರತಿಯೊಬ್ಬರು ಶಿವಧೀಕ್ಷಾ ಸಂಪನ್ನರಾಗಬೇಕು. ಇಂದು ವೀರಶೈವ-ಲಿಂಗಾಯತ ಧರ್ಮಾಚರಣೆಗಳು ಮರೆಯಾಗುತ್ತಿದ್ದು, ಹಿರಿಯರು ಈ ಧರ್ಮದ ಪರಂಪರೆ, ಸಂಸ್ಕೃತಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಇಚ್ಛಾಸಕ್ತಿ ತೋರಬೇಕು.
    | ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಸ್ವಾಮೀಜಿ, ರಂಭಾಪುರಿ ಪೀಠದ ಜಗದ್ಗುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts