More

    ರೈಲುಗಳಲ್ಲಿ ವಾಹನಗಳ ಸಾಗಣೆ; 91 ರೇಕ್​ಗಳಲ್ಲಿ ಕಾರುಗಳ ಸಾಗಾಟ..

    ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಪ್ರಯಾಣಿಕರಿಗೆ ರೈಲ್ವೆ ಸೇವೆ ನೀಡುವುದರ ಜತೆಗೆ ವಾಹನಗಳ ಸಾಗಣೆಗೂ ಹೆಚ್ಚು ಒತ್ತು ನೀಡುತ್ತಿದೆ. ಅದರಂತೆ ಶುಕ್ರವಾರ ಹೊಸೂರಿನಿಂದ ಹರಿಯಾಣದ ಬಲ್ಲಬ್ಗರ್‌ಗೆ ಅಶೋಕ ಲೇಲ್ಯಾಂಡ್‌ನ 64 ಭಾರಿ ವಾಣಿಜ್ಯ ವಾಹನದ ಚಾಸೀಸ್‌ಗಳನ್ನು ರೈಲಿನ ಮೂಲಕ ಸಾಗಿಸಲಾಗಿದೆ.

    ಕಳೆದೊಂದು ವರ್ಷದಿಂದ ವಾಹನಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ರೈಲಿನ ಮೂಲಕ ಸಾಗಿಸಲಾಗುತ್ತಿದೆ. 2020ರ ಏಪ್ರಿಲ್ 29ರಂದು ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಿಂದ ರಾಜಸ್ತಾನದ ಪುಲೇರಿಯಾಕ್ಕೆ 175 ಟ್ರ್ಯಾಕ್ಟರ್‌ಗಳನ್ನು ಸಾಗಿಸುವ ಮೂಲಕ ರೈಲಿನಲ್ಲಿ ವಾಹನಗಳ ಸಾಗಣೆಗೆ ಚಾಲನೆ ನೀಡಲಾಗಿತ್ತು.

    ಅದರ ಜತೆಗೆ 2020-21ನೇ ಸಾಲಿನಲ್ಲಿ ಪೆನುಕೊಂಡಾದಿಂದ 91 ರೇಕ್‌ಗಳಲ್ಲಿ ಕಾರುಗಳು, ಮಾಲೂರಿನಿಂದ 7 ರೇಕ್‌ಗಳಲ್ಲಿ ದ್ವಿಚಕ್ರ ವಾಹನ, ಹೊಸೂರಿನಿಂದ 6 ರೇಕ್‌ಗಳಲ್ಲಿ ಲಘು ವಾಣಿಜ್ಯ ವಾಹನಗಳನ್ನು ಸಾಗಿಸಲಾಗಿದೆ.

    ರೈಲುಗಳಲ್ಲಿ ವಾಹನಗಳ ಸಾಗಣೆ; 91 ರೇಕ್​ಗಳಲ್ಲಿ ಕಾರುಗಳ ಸಾಗಾಟ..

    ಭೀಕರ ಅಪಘಾತ, ಕಾರು ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು…

    ಮತ್ತೆ ಕೋವಿಡ್ ನಿರ್ಬಂಧ: ಶಾಲೆ, ಜಿಮ್​, ಕ್ಲಬ್, ಪಾರ್ಟಿಹಾಲ್​, ಈಜುಕೊಳ ಬಂದ್​; ಬಾರ್-ರೆಸ್ಟೋರೆಂಟ್​, ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ. 50 ಆಸನ ಭರ್ತಿಗಷ್ಟೇ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts