More

    ದಂಡ ರಹಿತ ವಾಹನ ತೆರಿಗೆ ಪಾವತಿ ಅವಧಿ ವಿಸ್ತರಣೆ

    ಬೆಂಗಳೂರು: ರಾಜ್ಯದಲ್ಲಿ ನೋಂದಣಿಯಾದ ವಾಹನಗಳಿಗೆ ಅನ್ವಯವಾಗುವಂತೆ ಸೆ. 15ರೊಳಗೆ ಪಾವತಿಸಬೇಕಿದ್ದ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸುವ ಅವಧಿಯನ್ನು ಸೆ. 30ರವರೆಗೆ ವಿಸ್ತರಿಸಲಾಗಿದೆ. ಕರೊನಾ ಸೊಂಕಿನ ಕಾರಣದಿಂದ ಸಂಕಷ್ಟದಲ್ಲಿರುವ ಸಾರಿಗೆ ಉದ್ಯಮ ಹಾಗೂ ವಾಹನ ಮಾಲೀಕರಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಂಡಿದೆ.

    ಸಿಂಧುತ್ವ ವಿಸ್ತರಣೆ: ತೆರಿಗೆ ಪಾವತಿಯಲ್ಲಿನ ವಿನಾಯಿತಿ ಜತೆಗೆ ನವೀಕರಣಗೊಳ್ಳದ ವಾಹನಗಳ ದಾಖಲೆಗಳನ್ನು ಡಿಸೆಂಬರ್ 2020ರವರೆಗೆ ಮಾನ್ಯ ಮಾಡುವ ಕುರಿತು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ ಅಧಿವೇಶನದಲ್ಲಿ ಮಂಡನೆ

    ದಾಖಲೆಗಳ ಅವಧಿ ಈ ವರ್ಷದ ಜನವರಿ 31ಕ್ಕೆ ಮುಗಿದಿದ್ದರೂ, ವಾಹನಗಳ ಮೇಲೆ ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಕ್ಕೆ ಡಿಸೆಂಬರ್ 2020ರವರೆಗೆ ವಿನಾಯಿತಿ ನೀಡಿ ಕೇಂದ್ರ ಸಾರಿಗೆ ಇಲಾಖೆ ಈ ಹಿಂದೆ ಆದೇಶಿಸಿತ್ತು. ಅದಕ್ಕೆ ಪೂರಕವಾಗಿ ಇದೀಗ ರಾಜ್ಯ ಸಾರಿಗೆ ಇಲಾಖೆ ಆದೇಶಿಸಿದ್ದು, ಅದನ್ನು ಪಾಲಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಕರ್ಕಶ ಮ್ಯೂಸಿಕ್​ ಗದ್ದಲದಿಂದ ಕೆರಳಿ, ಗಾಳಿಯಲ್ಲಿ ಗುಂಡು ಹಾರಿಸಿದ್ರು ಮಾಜಿ ಯೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts