More

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ಬರೆ

    ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆ ಪಡೆದಿರುವ ಅದಾನಿ ಸಂಸ್ಥೆ ಮೇ 1ರಿಂದ ಪಾರ್ಕಿಂಗ್ ಶುಲ್ಕವನ್ನು ಮೂರು ಪಟ್ಟುವಿಗಿಂತಲೂ ಹೆಚ್ಚು ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿದೆ.

    10 ನಿಮಿಷ ಪಾರ್ಕಿಂಗ್ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಸಮಯದ ಪಾರ್ಕಿಂಗ್ ದರದಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ.
    ಕೋಚ್ ಬಸ್ ಮತ್ತು ಟ್ರಕ್‌ಗಳಿಗೆ 30 ನಿಮಿಷಕ್ಕೆ 70 ರೂ. ಇದ್ದ ಪಾರ್ಕಿಂಗ್ ಶುಲ್ಕ ಮೇ 1ರಿಂದ 300 ರೂ. ಆಗಲಿದೆ. ಎರಡು ಗಂಟೆಗೆ 500 ರೂ, ನಂತರದ ಎರಡು ಗಂಟೆಗೆ ಮತ್ತೆ 200 ರೂ. ಏರಿಕೆಯಾಗಲಿದ್ದು, 24 ಗಂಟೆಗಳಾದರೆ 2700 ರೂ. ಪಾವತಿಸಬೇಕಾಗುತ್ತದೆ. ಮಿನಿ ಬಸ್, ಟೆಂಪೋಗಳಿಗೆ ಇದ್ದ 60 ರೂ. 200 ರೂ.ಗೆ ಏರಿಕೆಯಾಗಲಿದೆ. ಎರಡು ಗಂಟೆ ತನಕ ನಿಂತರೆ 350 ರೂ, ನಂತರದ ಎರಡು ಗಂಟೆಗೆ ಮತ್ತೆ 100 ರೂ, 24 ಗಂಟೆಗೆ 1450 ರೂ. ಕಟ್ಟಬೇಕು. ಬಾಡಿಗೆ ಕಾರುಗಳಿಗೆ ಹಿಂದೆ ಇದ್ದ 55 ರೂ. ಇನ್ನು 90 ರೂ. ಆಗಲಿದೆ. ನಂತರದ ಎರಡು ಗಂಟೆಗೆ 150 ರೂ. ಹಾಗೂ 24 ಗಂಟೆಗೆ 420 ರೂ. ಪಾವತಿಸಬೇಕು. ದ್ವಿಚಕ್ರ ವಾಹನಗಳಿಗೆ 15 ರೂ.ನಿಂದ 20 ರೂ.ಗೆ ಏರಿಕೆ ಮಾಡಲಾಗಿದೆ. ನಂತರದ 2 ಗಂಟೆಗೆ 40 ರೂ, 24 ಗಂಟೆಗೆ 150 ರೂ. ಪಾವತಿಸಬೇಕು.

    ವಾಹನ ನಿಲುಗಡೆ ನಿಯಮಗಳ ಉಲ್ಲಂಘನೆಗೆ ಕೋಚ್ ಬಸ್, ಟೆಂಪೋ, ಕಾರುಗಳಿಗೆ 500 ರೂ, ದ್ವಿಚಕ್ರ ವಾಹನಗಳಿಗೆ 250 ರೂ. ನಿಗದಿಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts