More

    ನಂಬರ್​ಪ್ಲೇಟ್ ಗೋಲ್ಮಾಲ್: ನಕಲಿ ಕಂಪನಿಗಳಿಂದ ಎಚ್​ಎಸ್​ಆರ್​ಪಿ ದಂಧೆ; ಹಳೇ ವಾಹನಗಳಿಗೆ ಕಡ್ಡಾಯವಲ್ಲ..

    | ಕೀರ್ತಿನಾರಾಯಣ ಸಿ. ಬೆಂಗಳೂರು

    ರಾಜ್ಯದಲ್ಲಿ 2019ರ ಏ.1ಕ್ಕಿಂತ ಮೊದಲು ರಸ್ತೆಗಿಳಿದಿರುವ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್​ಎಸ್​ಆರ್​ಪಿ) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ನಿಯಮ ಇನ್ನೂ ಜಾರಿಯಾಗಿಲ್ಲ. ಹೊಸ ವಾಹನಗಳಿಗೆ ಮಾತ್ರ ನಿಯಮ ಅನ್ವಯಿಸಿದ್ದರೂ ತಪು್ಪ ಮಾಹಿತಿ ನೀಡಿ ನಕಲಿ ನಂಬರ್ ಪ್ಲೇಟ್​ಗಳನ್ನು ಅಳವಡಿಸಿ ವಾಹನ ಮಾಲೀಕರಿಗೆ ಟೋಪಿ ಹಾಕಲಾಗುತ್ತಿದೆ. ಜನರಿಂದ ಮನಸೋಇಚ್ಛೆ ದರ ವಸೂಲಿ ಮಾಡಿ ಕೋಟ್ಯಂತರ ರೂ. ಲೂಟಿ ಮಾಡುತ್ತಿರುವ ವಿಚಾರ ಬಹಿರಂಗವಾಗಿದೆ.

    ಸದ್ಯ 2019 ಏ.1ರ ನಂತರ ಖರೀದಿಸಿದ ವಾಹನಗಳಿಗೆ ಮಾತ್ರವೇ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಕಡ್ಡಾಯ ನಿಯಮ ಜಾರಿಯಲ್ಲಿದೆ. ಅದಕ್ಕೂ ವಾಹನ ಉತ್ಪಾದಕರೇ ನಂಬರ್ ಪ್ಲೇಟ್​ಗಳನ್ನು ಪೂರೈಕೆ ಮಾಡಬೇಕು ಎಂದು ಅವರಿಗೇ ಜವಾಬ್ದಾರಿ ವಹಿಸಲಾಗಿದೆ. ಇನ್ನು ಹಳೇ ವಾಹನಗಳಿಗೂ ಹೈ ಸೆಕ್ಯುರಿಟಿ ನಂಬರ್ ಅಳವಡಿಕೆ ನಿಯಮವನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಒಡಿಶಾ, ಅಂಧ್ರಪ್ರದೇಶ, ತಮಿಳುನಾಡು ಸೇರಿ ಕೆಲವು ರಾಜ್ಯಗಳು ಜಾರಿಗೊಳಿಸಿವೆ.

    ರಾಜ್ಯದಲ್ಲೂ ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಫಲಕ ಅಳವಡಿಸಲು ಸರ್ಕಾರ ಮುಂದಾಗಿದ್ದು, ಟೆಂಡರ್ ಆಹ್ವಾನ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ. ಟೆಂಡರ್​ನಲ್ಲಿ ಆಯ್ಕೆಯಾದ ಸಂಸ್ಥೆಗೆ ಪ್ಲೇಟ್​ಗಳ ಪೂರೈಸುವ ಜವಾಬ್ದಾರಿ ಕೊಟ್ಟು, ಇಂತಿಷ್ಟೇ ದರ ನಿಗದಿಪಡಿಸಲಿದೆ. ಹಾಗಾಗಿ ಅಧಿಕೃತವಾಗಿ ಈ ನಿಯಮ ಅನುಷ್ಠಾನಕ್ಕೆ ಬರಲು ಇನ್ನು ಸಾಕಷ್ಟು ಸಮಯ ಹಿಡಿಯುತ್ತದೆ. ಆದ್ದರಿಂದ ಮಾಲೀಕರು ಪ್ರಸ್ತುತ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಹಾಕಿಸುವ ಅಗತ್ಯವಿಲ್ಲ. ಸಣ್ಣಪುಟ್ಟ ಅಂಗಡಿಗಳು, ಕೆಲ ಸಂಸ್ಥೆಗಳು, ಕಡ್ಡಾಯ ನಿಯಮದ ಹೆಸರಲ್ಲಿ ನಕಲಿ ನಂಬರ್ ಪ್ಲೇಟ್ ಹಾಗೂ ಹಾಲೋಗ್ರಾಂ ಸ್ಟಿಕ್ಕರ್​ಗಳನ್ನು ಅಳವಡಿಸಿ, ಈಗಿರುವ ಮೂಲ ದರಕ್ಕಿಂತ 2 ರಿಂದ 3 ಪಟ್ಟು ಹೆಚ್ಚು ಹಣವನ್ನು ಸಾರ್ವಜನಿಕರಿಂದ ವಸೂಲಿ ಮಾಡುತ್ತಿವೆ.

    ರಾಜ್ಯದಲ್ಲಿ ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಪ್ಲೇಟ್​ಗಳ ಮಾರಾಟಕ್ಕೆ ಅನುಮತಿ ಇಲ್ಲದಿದ್ದರೂ www.bookhsrp.online.comನಲ್ಲಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರದಿಂದ ಅನುಮತಿ ಪಡೆದಿರುವ ಸಂಸ್ಥೆ ಎಂದು ಹೇಳಿಕೊಳ್ಳುತ್ತಿದೆ. ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿಸಿಕೊಂಡು ನಕಲಿ ನಂಬರ್ ಪ್ಲೇಟ್​ಗಳನ್ನು ಕೊರಿಯರ್ ಮೂಲಕ ಸರಬರಾಜು ಮಾಡುತ್ತಿದೆ.

    ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ನಕಲಿ ನಂಬರ್ ಪ್ಲೇಟ್​ಗಳನ್ನು ಎಚ್​ಎಸ್​ಆರ್​ಪಿ ಹೆಸರಲ್ಲಿ ಈವರೆಗೆ ಮಾರಾಟ ಮಾಡಿದೆ. ಆನ್​ಲೈನ್​ನಲ್ಲಿ ಮಾರಾಟ ಮಾಡುತ್ತಿರುವ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾರಿಗೆ ಆಯುಕ್ತರು, ಪ್ರಧಾನ ಕಾರ್ಯದರ್ಶಿ ಹಾಗೂ ಸಾರಿಗೆ ಸಚಿವರಿಗೆ ದೂರು ನೀಡಲಾಗಿದೆ. ಈ ಮೇರೆಗೆ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.

    ನಕಲಿ ಪ್ಲೇಟ್​ನಿಂದ ಪ್ರಯೋಜನ ಇಲ್ಲ!: ಎಚ್​ಎಸ್​ಆರ್​ಪಿ ಹೆಸರಿನಲ್ಲಿ ಹಾಕಿಸುವ ನಕಲಿ ನಂಬರ್ ಪ್ಲೇಟ್​ನಿಂದ ಯಾವುದೇ ಪ್ರಯೋಜನ ಇಲ್ಲ. ಅಸಲಿ ಎಚ್​ಎಸ್​ಆರ್​ಪಿ ಫಲಕದ ಮೇಲೆ ಲೇಸರ್ ತಂತ್ರಜ್ಞಾನದಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ಪ್ರತಿಯೊಂದು ನಂಬರ್ ಪ್ಲೇಟ್​ಗೂ ಒಂದು ಸೀರಿಯಲ್ ನಂಬರ್ ಕೊಡಲಾಗುತ್ತದೆ. ಆ ನಂಬರ್ ಅನ್ನು ಸಾರಿಗೆ ಇಲಾಖೆಯ ವಾಹನ್-4 ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿರುತ್ತದೆ. ಆದರೆ, ಅನಧಿಕೃತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಖರೀದಿಸುವ ನಂಬರ್ ಪ್ಲೇಟ್​ಗಳಲ್ಲಿ ಸೀರಿಯಲ್ ಸಂಖ್ಯೆಯೂ ಇರುವುದಿಲ್ಲ. ವಾಹನ್-4 ತಂತ್ರಾಂಶಕ್ಕೂ ಜೋಡಣೆ ಆಗಿರುವುದಿಲ್ಲ.

    ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಇಲ್ಲ ಎಂಬ ಕಾರಣಕ್ಕೆ ವಾಹನ ತಡೆಯಬಾರದು ಎಂದು ಎಲ್ಲ ಪೊಲೀಸರಿಗೆ ಸೂಚಿಸಲಾಗಿದೆ. ಫಲಕದಲ್ಲಿ ನಂಬರ್​ಗಳ ಗಾತ್ರದ ವ್ಯತ್ಯಾಸ, ಅಕ್ಷರಗಳ ವ್ಯತ್ಯಾಸ ಸೇರಿ ದೋಷಪೂರಿತ ನಂಬರ್ ಪ್ಲೇಟ್ ಇದ್ದರಷ್ಟೇ ನಿಲ್ಲಿಸುತ್ತಾರೆ. ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಫಲಕ ಇಲ್ಲ ಎಂದು ಪ್ರಶ್ನಿಸಿದರೆ, ದಂಡ ವಿಧಿಸಿದರೆ ದೂರು ಕೊಡಿ. ಅಂತಹ ಪೊಲೀಸರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ.

    | ಡಾ.ಬಿ.ಆರ್. ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತ (ಬೆಂ.ಸಂಚಾರ ವಿಭಾಗ)

    1.5 ಕೋಟಿ ಹಳೇ ವಾಹನ: ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯಾದ್ಯಂತ 1.5 ಕೋಟಿ ಹಳೇ ವಾಹನಗಳಿವೆ ಎಂದು ಅಂದಾಜಿಸಿದ್ದು, ಇವುಗಳಿಗೆ ಎಚ್​ಎಸ್​ಆರ್​ಪಿ ಅಳವಡಿಸಿದರೆ ಅಂದಾಜು 600 ರಿಂದ 1,000 ಕೋಟಿ ರೂ. ವಹಿವಾಟು ನಡೆಯಲಿದೆ.

    ಸಾರಿಗೆ ಇಲಾಖೆ ಹೇಳೋದೇನು?

    • ಸದ್ಯ 2019 ಏ.1ಕ್ಕಿಂತ ಮುನ್ನ ಖರೀದಿಸಿದ ವಾಹನ ಗಳಿಗೆ ಎಚ್​ಎಸ್​ಆರ್​ಪಿ ಕಡ್ಡಾಯವಲ್ಲ
    • ಹಳೇ ವಾಹನಗಳಿಗೂ ಜಾರಿ ಗೊಳಿಸಲು ನಿರ್ಧರಿಸಿದ್ದು, ಟೆಂಡರ್​ಗೆ ಸಿದ್ಧತೆ ನಡೆದಿದೆ
    • ಫಲಕಗಳ ಪೂರೈಕೆ ಜವಾಬ್ದಾರಿ ಯನ್ನು ಅಧಿಕೃತ ಸಂಸ್ಥೆಗಳಿಗೆ ವಹಿಸಲಾಗುತ್ತದೆ
    • ಹಿರಿಯ ಅಧಿಕಾರಿಗಳ ಮಟ್ಟ ದಲ್ಲಿ ಸಭೆ ನಡೆಸಿ, ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ
    • ಏಜೆನ್ಸಿಗಳ ಮೂಲಕ ತಾಲೂಕು ಅಥವಾ ಜಿಲ್ಲಾಮಟ್ಟದಲ್ಲಿ ಪ್ಲೇಟ್ ಅಳವಡಿಸಲು ಸೂಚಿಸಲಾಗುತ್ತದೆ
    • ಸರ್ಕಾರ ಆದೇಶ ಹೊರಡಿಸು ವವರೆಗೂ ಎಚ್​ಎಸ್​ಆರ್​ಪಿ ಪ್ಲೇಟ್ ಅಗತ್ಯವಿಲ್ಲ
    ವಸೂಲಿ ದರ ಎಷ್ಟು?
    • ಬೈಕ್​ಗೆ-450 ರಿಂದ 500 ರೂ.
    • ಕಾರಿಗೆ-750 ರಿಂದ 800 ರೂ.

    ನೋಂದಣಿ ಫಲಕ ಅಸಲಿ ದರ ಎಷ್ಟು?

    • ದ್ವಿಚಕ್ರ ವಾಹನ – 240 ರೂ. ಹಾಗೂ ಶೇ.18 ಜಿಎಸ್​ಟಿ
    • ಕಾರು – 440 ರೂ. ಹಾಗೂ ಶೇ.18 ಜಿಎಸ್​ಟಿ
    • ಭಾರಿ ವಾಹನ – 600 ರೂ. ಹಾಗೂ ಶೇ.18 ಜಿಎಸ್​ಟಿ

    ಎಚ್​ಎಸ್​ಆರ್​ಪಿಯಲ್ಲಿ ಏನಿರುತ್ತೆ?

    • ಪ್ರತಿ ವಾಹನದ ಎಚ್​ಎಸ್​ಆರ್​ಪಿ ಪ್ಲೇಟ್​ಗೂ ಪ್ರತ್ಯೇಕ ವಿಶಿಷ್ಟ ಗುರುತಿನ ಸಂಖ್ಯೆ
    • ಇಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ, ರಿಜಿಸ್ಟ್ರೇಷನ್ ಸಂಖ್ಯೆ, ವಿಮೆ, ಮಾಲೀಕರ ಮಾಹಿತಿ ಅಡಕ
    • 10 ಅಂಕಿಗಳನ್ನು ಒಳಗೊಂಡಿರುವ ವಿಶಿಷ್ಟ ಗುರುತಿನ ಸ್ಟಿಕ್ಕರ್ ಎಡಭಾಗದಲ್ಲಿ ಅಂಟಿಸಲಾಗುತ್ತೆ
    • ಅಶೋಕ ಚಕ್ರ ಚಿಹ್ನೆಯ ಕ್ರೋಮಿಯಂ ಸ್ಟಿಕ್ಕರ್ ಅಳವಡಿಕೆ
    • ಪೊಲೀಸರು ಸ್ಕ್ಯಾನ್​ ಮಾಡಿದ ತಕ್ಷಣವೇ ಎಲ್ಲ ಮಾಹಿತಿಗಳು ಲಭ್ಯ

    ಎಷ್ಟು ವಾಹನಗಳಿವೆ?

    • ಕರ್ನಾಟಕದಲ್ಲಿ 1.50 ಕೋಟಿಗೂ ಅಧಿಕ ವಾಹನ
    • ಬೆಂಗಳೂರಲ್ಲೇ 85 ಲಕ್ಷಕ್ಕೂ ಅಧಿಕ ವಾಹನ

    ಒಂದೂವರೆ ಕೋಟಿ ಹಳೇ ವಾಹನ: ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯಾದ್ಯಂತ ಒಂದೂವರೆ ಕೋಟಿ ಹಳೇ ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸಿದರೆ ಅಂದಾಜು 600 ರಿಂದ 1,000 ಕೋಟಿ ರೂ. ವಹಿವಾಟು ನಡೆಯಲಿದೆ.

    ಕೊರಿಯರ್​ನಲ್ಲಿ ಪ್ಲೇಟ್ ರವಾನೆ: ಕರ್ನಾಟಕದಲ್ಲಿ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಮಾರಾಟಕ್ಕೆ ಅನುಮತಿ ಸಿಕ್ಕಿದೆ ಎಂದೇಳಿ www.bookhsrp.online.comನಲ್ಲಿ 620 ರೂ. ಕಟ್ಟಿಸಿಕೊಂಡು ಕೊರಿಯರ್ ಮೂಲಕ ನಂಬರ್ ಪ್ಲೇಟ್​ಗಳನ್ನು ಕಳುಹಿಸಲಾಗುತ್ತಿದೆ. ಆದರೆ, ನಂಬರ್ ಪ್ಲೇಟ್​ಗಳು ಎಚ್​ಎಸ್​ಆರ್​ಪಿ ಅಲ್ಲ. ಅದಕ್ಕೆ ಸಂಬಂಧಿಸಿದ ನಂಬರ್ ಪ್ಲೇಟ್, ಶುಲ್ಕ ಪಾವತಿ ರಸೀದಿ, ವೆಬ್​ಸೈಟ್ ವಿಳಾಸದ ಸಮೇತ ಸಾರಿಗೆ ಇಲಾಖೆಗೆ ದೂರು ಕೊಡಲಾಗಿದೆ.

    ಸಾರಿಗೆ ಇಲಾಖೆ ಹೇಳೋದೇನು?

    • ಸದ್ಯ 2019 ಏ.1ಕ್ಕಿಂತ ಮುನ್ನ ಖರೀದಿಸಿದ ವಾಹನ ಗಳಿಗೆ ಎಚ್​ಎಸ್​ಆರ್​ಪಿ ಕಡ್ಡಾಯವಲ್ಲ
    • ಹಳೇ ವಾಹನಗಳಿಗೂ ಜಾರಿ ಗೊಳಿಸಲು ನಿರ್ಧರಿಸಿದ್ದು, ಟೆಂಡರ್​ಗೆ ಸಿದ್ಧತೆ ನಡೆದಿದೆ
    • ಫಲಕಗಳ ಪೂರೈಕೆ ಜವಾಬ್ದಾರಿ ಯನ್ನು ಅಧಿಕೃತ ಸಂಸ್ಥೆಗಳಿಗೆ ವಹಿಸಲಾಗುತ್ತದೆ
    • ಹಿರಿಯ ಅಧಿಕಾರಿಗಳ ಮಟ್ಟ ದಲ್ಲಿ ಸಭೆ ನಡೆಸಿ, ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ
    • ಏಜೆನ್ಸಿಗಳ ಮೂಲಕ ತಾಲೂಕು ಅಥವಾ ಜಿಲ್ಲಾಮಟ್ಟದಲ್ಲಿ ಪ್ಲೇಟ್ ಅಳವಡಿಸಲು ಸೂಚಿಸಲಾಗುತ್ತದೆ
    • ಸರ್ಕಾರ ಆದೇಶ ಹೊರಡಿಸು ವವರೆಗೂ ಎಚ್​ಎಸ್​ಆರ್​ಪಿ ಪ್ಲೇಟ್ ಅಗತ್ಯವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts