More

    ರಸ್ತೆ ದಾಟುತ್ತಿದ್ದ ಹುಲಿಗೆ ವಾಹನ ಡಿಕ್ಕಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ

    ಭೋಪಾಲ್ : ಹೆದ್ದಾರಿಯನ್ನು ದಾಟುತ್ತಿದ್ದ ಹುಲಿಯು ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಉಮಾರಿಯ ಜಿಲ್ಲೆ ವ್ಯಾಪ್ತಿಯ ಗುನ್​ಘುಟ್ಟಿ ಅರಣ್ಯ ವಲಯದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲಾ ಕೇಂದ್ರದಿಂದ 35 ಕಿಲೋಮೀಟರ್​ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 43 ರಲ್ಲಿ ನಡೆದಿರುವ ದುರ್ಘಟನೆಯಲ್ಲಿ, ಮೃತಪಟ್ಟಿರುವ ಹುಲಿಯು ಸಮೀಪದ ಬಂಧವಗಡ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದ್ದಲ್ಲ. ಅದರ ವಯಸ್ಸು ಮತ್ತಿತರ ವಿವರಗಳನ್ನು ತಿಳಿಯಲು ಫೊರೆನ್ಸಿಕ್​ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉಮಾರಿಯ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್​​ಒ) ಮೋಹಿತ್​ ಸೂದ್ ಹೇಳಿದ್ದಾರೆ.

    ಇದನ್ನೂ ಓದಿ: ಸೋಂಕು ಕಡಿಮೆಯಾದ್ರೆ ಲಾಕ್‌ಡೌನ್ ಸಡಿಲ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸುಳಿವು

    “ಈ ರೀತಿಯ ಅಪಘಾತಗಳು ಮುಂದೆ ನಡೆಯದಂತೆ ರಸ್ತೆಬದಿಗಳಲ್ಲಿ ಸೈನ್​ಬೋರ್ಡ್​ಗಳನ್ನು ಹಾಕಲು ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಹೆದ್ದಾರಿಯ ವಾಹನ ಚಾಲಕರು ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುವುದು” ಎಂದಿರುವ ಡಿಎಫ್​ಒ ಸೂದ್​, ಹೆದ್ದಾರಿಯಲ್ಲಿ ಸ್ಪೀಡ್​ಬ್ರೇಕರ್​ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೂ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ನಾಯಕತ್ವ ವಿಚಾರದಲ್ಲಿ ಗೊಂದಲವಿಲ್ಲ… ಅಪಸ್ವರ ಎತ್ತಿದವರ ವಿರುದ್ಧ ಕ್ರಮ : ಸಿಎಂ ಯಡಿಯೂರಪ್ಪ

    ಮೂರನೇ ಅಲೆ ಬೇಗ ಅಪ್ಪಳಿಸುತ್ತೆ : ಸರ್ಕಾರಕ್ಕೆ ಹೈಕೋರ್ಟ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts