More

    ಮನಸ್ಸನ್ನು ಶುದ್ಧ ಮಾಡುವ ಧ್ಯಾನ

    ಆಲೂರು: ಸಸ್ಯಾಹಾರ ಪದ್ಧತಿ ಹಾಗೂ ಧ್ಯಾನ ಜೀವನದ ಭಾಗವಾದರೆ ಆರೋಗ್ಯವಂತ ಬದುಕು ನಮ್ಮದಾಗಲಿದೆ ಎಂದು ಹಾಸನ ಪಿರಮಿಡ್ ಸೊಸೈಟಿ ಅಧ್ಯಕ್ಷೆ ಡಾ.ಸುಮಂಗಳಾ ಸಾಲಿಮಠ ತಿಳಿಸಿದರು.

    ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ಪತ್ರೀಜಿ ವೆಜಿಟೇರಿಯನ್ ಮೂವ್‌ಮೆಂಟ್ ಮತ್ತು ಹಾಸನ ಪಿರಮಿಡ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಸಸ್ಯಾಹಾರ ಜಾಗೃತಿ ಜಾಥಾ, ಧ್ಯಾನ ಪ್ರಚಾರ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಧ್ಯಾನ ಮನಸ್ಸನ್ನು ಶುದ್ಧ ಮಾಡುತ್ತದೆ. ಈ ಧ್ಯಾನವನ್ನು ಪ್ರತಿದಿನ ಎರಡು ಬಾರಿ ಮಾಡಬೇಕು. ಇದರಿಂದ ಏಕಾಗ್ರತೆ, ಜ್ಞಾಪಕ ಶಕ್ತಿ, ಸಂಪೂರ್ಣ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಆತ್ಮವಿಶ್ವಾಸ ಮೂಡಲಿದೆ ಎಂದರು.

    ಸಸ್ಯಾಹಾರದಿಂದ ಶರೀರ, ಮನಸ್ಸು ಮತ್ತು ಆತ್ಮ ಶುದ್ಧವಾಗಿ, ಉನ್ನತವಾದ ಶಕ್ತಿ ಹೊಂದುತ್ತೇವೆ. ಮಾಂಸಾಹಾರ ಸಹಜವಾದ ಆಹಾರವಲ್ಲ. ಅದನ್ನು ಸೇವಿಸುವುದರಿಂದ ಹೃದ್ರೋಗ, ಕೊಲೆಸ್ಟ್ರಾಲ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಎಲ್ಲರೂ ಸಸ್ಯಾಹಾರಿ ಆಗುವುದರಿಂದ ಎಷ್ಟೋ ಪ್ರಾಣಿಗಳು ಸಂತೋಷದಿಂದ ಜೀವಿಸುತ್ತವೆ ಎಂದರು.

    ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಧ್ಯಾನ, ಸಸ್ಯಾಹಾರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಬಿ. ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಚೇತನ ಬಳಗದ ಗೌರವಾಧ್ಯಕ್ಷ ಎಂ.ಪಿ.ಹರೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜಿ.ಪ್ರವೀಣ್, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್, ರಾಮಚಂದ್ರ, ಕುಲದೀಪ್ ಮತ್ತು ಪತ್ರೀಜಿ ಸೊಸೈಟಿ ನಿರ್ದೇಶಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts