More

    ತರಕಾರಿ, ಸೊಪ್ಪು ದುಪ್ಪಟ್ಟು ಬೆಲೆಗೆ ಮಾರಾಟ: ಸುಲಿಗೆಗಿಳಿದ ಚಿಲ್ಲರೆ ವ್ಯಾಪಾರಿಗಳು

    ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಪ್ರಯುಕ್ತ ರೈತರು ಬೆಳೆದ ತರಕಾರಿ, ಸೊಪ್ಪು ಹಾಗೂ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದೆ. ಆದರೆ, ಸಗಟು ಬೆಲೆಯಲ್ಲಿ ಇಳಿಕೆ ಕಂಡಿದೆಯಾದರೂ, ಕೆಲ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

    20- 30ರೂ.ಗೆ ಮಾರಾಟ

    ಮಂಗಳವಾರ ಕೊತ್ತಂಬರಿ ಸೊಪ್ಪು ಪ್ರತಿ ಕಟ್ಟಿಗೆ 20ರಿಂದ 30 ರೂ. ಸಗಟು ದರಕ್ಕೆ ಮಾರಾಟವಾಗಿದೆ. ಕೆಲ ಚಿಲ್ಲರೆ ವ್ಯಾಪಾರಿಗಳು ಕಟ್ಟಿಗೆ 70, 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಹಾಪ್​ಕಾಮ್್ಸ ನಲ್ಲಿ ಕೆ.ಜಿ. ಕೊತ್ತಂಬರಿ ದರ 160 ರೂ. ಇದೆ. ಇತರ ಸೊಪ್ಪುಗಳಿಗೆ 5ರಿಂದ 10ರೂ.ವರೆಗೆ ಸಗಟು ದರದಲ್ಲಿ ಮಾರಾಟವಾಗಿದೆ ಎಂದು ದಾಸನಪುರ ಮಾರುಕಟ್ಟೆ ಸೊಪ್ಪುಗಳ ಸಗಟು ಮಾರಾಟಗಾರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಚಾಲನೆ

    ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಜಿಲ್ಲೆಗಳಿಂದ ಯಥೇಚ್ಚವಾಗಿ ತರಕಾರಿ, ಹಣ್ಣು, ಸೊಪ್ಪುಗಳು ಮಾರುಕಟ್ಟೆಗೆ ಪೂರೈಕೆಯಾಗಿದೆ. ಇನ್ನು, ಶುಭ ಸಮಾರಂಭಗಳಿಗೆ ನಿರ್ಬಂಧ ಹಾಗೂ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ಎಲ್ಲ ದರಗಳು ಯಥಾಸ್ಥಿತಿಯಲ್ಲಿವೆ.

    ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ

    ಮಾರುಕಟ್ಟೆ ಸಗಟು ದರಗಳಲ್ಲಿ ಬೀನ್ಸ್, ಹಾಗಲಕಾಯಿ, ಹಸಿ ಬಟಾಣಿ ಹೊರತು ಪಡಿಸಿ, ಟೊಮ್ಯಾಟೊ, ಕ್ಯಾರೆಟ್, ಹಸಿ ಮೆಣಸಿನಕಾಯಿ, ಸೀಮೆ ಬದನೆಕಾಯಿ, ಗೆಡ್ಡೆಕೋಸು, ಮೂಲಂಗಿ, ಬಜ್ಜಿ ಮೆಣಸಿನಕಾಯಿ ಕೆ.ಜಿ.ಗೆ ಕನಿಷ್ಠ 5 ರೂ.ಗಳಿಂದ ಗರಿಷ್ಠ 25 ರೂ.ಗೆ ಮಾರಾಟವಾಗಿದೆ. ನಗರದ ಕೆಲ ಚಿಲ್ಲರೆ ವ್ಯಾಪಾರಿಗಳು ಕ್ಯಾರೆಟ್ 60 ರೂ., ಆಲೂಗಡ್ಡೆ 55 ರೂ., ಟೊಮ್ಯಾಟೊ 30 ರೂ., ಈರುಳ್ಳಿ ಕೆ.ಜಿ.ಗೆ 25 ರೂ. ಹೀಗೆ ಮನಬಂದಂತೆ ಮಾರಾಟ ಮಾಡುತ್ತಿರುವುದು ಮಂಗಳವಾರ ಕಂಡುಬಂದಿದೆ.

    ಬಿಎಂಟಿಸಿ ಬಸ್ ಸಂಚಾರ ಅವಧಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ವಿಸ್ತರಣೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts