More

    ಆತಂಕ ಸೃಷ್ಟಿಸಿದ ಚಾಮಾ ಲೇಔಟ್ !

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಮಹಾಮಾರಿ ಕರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಹೊರಡಿಸಿರುವ ಲಾಕ್ಡೌನ್ ಆದೇಶದಿಂದಾಗಿ ನಗರದ ತರಕಾರಿ ಮಾರುಕಟ್ಟೆ ಸದ್ಯ ಬಂದ್ ಆಗಿದೆ. ಆದರೆ ಈ ಮಾರುಕಟ್ಟೆ ಚಾಮಾ ಲೇಔಟ್ಗೆ ಶಿಫ್ಟ್ ಆಗಿದ್ದು, ಸಾಮಾಜಿಕ ಅಂತರ ಇಲ್ಲದೆ ಜನರಲ್ಲಿ ಭಯ ಮೂಡಿಸಿದೆ.

    ನಗರಸಭೆಯು ಓಲ್ಡ್ ಸಿಟಿಯ ತರಕಾರಿ ಮಾರುಕಟ್ಟೆಗೆ ಎರಡು ವಾರದ ಹಿಂದೆ ಬೀಗ ಹಾಕಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹತ್ತಿಕುಣಿ ಕ್ರಾಸ್ ಬಳಿ ಖಾಸಗಿ ನಿವೇಶನ ಹಾಗೂ ಚಾಮಾ ಲೇಔಟ್ನಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಎರಡು ದಿನ ಹಿಂದಷ್ಟೇ ಹತ್ತಿಕುಣಿ ಕ್ರಾಸ್ ಬಳಿ ತರಕಾರಿ ವ್ಯಾಪಾರಿಗಳೆಲ್ಲರೂ ಚಾಮಾ ಲೇಔಟ್ಗೆ ಶಿಫ್ಟ್ ಆಗಿದ್ದರಿಂದ ಬಡಾವಣೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಸಾಮಾಜಿಕ ಅಂತರ ಕಾಣದಾಗಿದೆ.

    ಇದು ಬಡಾವಣೆ ನಿವಾಸಿಗಳಲ್ಲದೆ ಇಡೀ ನಗರ ಜನರ ನಿದ್ದೆಗೆಡಿಸಿದೆ. ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಬೆಳಗ್ಗಿನ ಜಾವ 4ರಿಂದ ಸಂಜೆ 4ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಸಂಜೆ 4ರ ನಂತರ ನಗರದ ಬೀದಿಗಳಲ್ಲಿ ಯಾರೂ ಸಂಚರಿಸುವಂತಿಲ್ಲ. ಹೀಗಾಗಿ ಮಧ್ಯರಾತ್ರಿ 2ರ ಸುಮಾರಿಗೆ ಚಾಮಾ ಲೇಔಟ್ನಲ್ಲಿ ಟಂಟಂ, ಕಮಾಂಡರ್ ಜೀಪ್, ಕ್ರೂಜರ್ ಸೇರಿ ನೂರಾರು ವಾಹನಗಳು ಹಳ್ಳಿಗಳಿಂದ ತರಕಾರಿ ಹೊತ್ತು ತರುತ್ತಿದ್ದು, ಒಂದೇ ಕಡೆ ಸಾವಿರಾರು ವ್ಯಾಪಾರಿಗಳು ಸೇರುತ್ತಿದ್ದಾರೆ. ಅಲ್ಲದೆ ಬೆಳಗ್ಗೆ 4ರಿಂದ 5ರೊಳಗೆ ಈ ತರಕಾರಿಗಳನ್ನು ದಲ್ಲಾಳಿಗಳು ಹರಾಜು ಮಾಡುತ್ತಿದ್ದು, ಕೊಂಡುಕೊಳ್ಳಲು ರಿಟೇಲರ್ಗಳು ನಾ ಮುಂದು, ತಾ ಮುಂದು ಎನ್ನುತ್ತಿದ್ದಾರೆ.

    ಇದರಿಂದ ಇಡೀ ವಾತಾವರಣ ಕಲ್ಮಶವಾಗುತ್ತಿದೆ. ಅಲ್ಲದೆ ಯಾರೊಬ್ಬರೂ ಮಾಸ್ಕ್ ಧರಿಸದಿರುವುದು ಮತ್ತಷ್ಟು ಭಯ ಮೂಡಿಸಿದೆ. ಕರೊನಾ ವೈರಸ್ ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಎರಡು ಬಲಿ ಪಡೆದಿದೆ. ಅದೃಷ್ಟವಶಾತ್ ಗಿರಿ ಜಿಲ್ಲೆಯತ್ತ ಈ ಮಹಾಮಾರಿ ಕಣ್ಣು ಹಾಯಿಸಿಲ್ಲ (ಹಾಯಿಸುವುದೂ ಬೇಡ).
    ಸಂಬಂಧಿತ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಚಾಮಾ ಲೇಔಟ್ ಮತ್ತೊಂದು ವುಹಾನ್ ನಗರದಂತೆ ಭಾಸವಾಗುತ್ತಿರುವುದು ಸುಳ್ಳಲ್ಲ. ಲೇಔಟ್ನಲ್ಲಿ ಉದ್ಯಾನವನ ಸ್ಥಳದಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರೆ ತರಕಾರಿ ವ್ಯಾಪಾರಿಗಳು ರಸ್ತೆಯಲ್ಲೇ ವಹಿವಾಟು ನಡೆಸುತ್ತಿದ್ದಾರೆ.

    ಪಕ್ಕದ ಖಾಲಿ ನಿವೇಶನದಲ್ಲಿ ಚರಂಡಿ ನೀರು ಸಂಗ್ರಹಗೊಂಡಿದ್ದು, ಅದರಲ್ಲಿ ಕೊಳೆತ ತರಕಾರಿ ಎಸೆಯಲಾಗುತ್ತಿದೆ. ಸಾಲದ್ದು ಎಂಬಂತೆ ಹಣ್ಣಿನ ವ್ಯಾಪಾರವೂ ಇಲ್ಲೇ ನಡೆಯುತ್ತಿದೆ. ಚಾಮಾ ಲೇಔಟ್ನ ಕೂಗಳತೆ ದೂರದಲ್ಲೇ ಸಕರ್ಾರಿ ಪದವಿಪೂರ್ವ ಮೈದಾನವಿದೆ. ಅಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಸದ್ಯ ಕಾಲೇಜಿಗೆ ರಜೆ ಇರುವುದರಿಂದ ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬಹುದು. ಇಲ್ಲವಾದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಲಕ್ಷಣ ಗೋಚರಿಸುತ್ತಿರುವುದು ಆತಂಕ ಇಮ್ಮಡಿಗೊಳಿಸಿದೆ.

    ಕರೊನಾ ವೈರಸ್ ತಡೆಗಟ್ಟಬೇಕಾದರೆ ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ಮನೆಯಲ್ಲಿ ಇರುವುದೇ ವಾಸಿ. ಚಾಮಾ ಲೇಔಟ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ವ್ಯಾಪಾರ ನಡೆದಿರುವುದು ಗಮನಕ್ಕೆ ಬಂದಿದ್ದು, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
    | ವೆಂಕಟರಡ್ಡಿ ಮುದ್ನಾಳ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts