More

    ಕೊನೆಗೂ ಕೂಡಿ ಬಂತು ತರಕಾರಿ ಮಾರುಕಟ್ಟೆಗೆ ಉದ್ಘಾಟನೆಯ ಭಾಗ್ಯ

    ಚಿತ್ರದುರ್ಗ : ನಗರದ ಖಾಸಗಿ ಬಸ್ ನಿಲ್ದಾಣ ಬಳಿ ನಗರಸಭೆ ಅಂದಾಜು ಒಂದು ಕೋಟಿ ರೂ.ಅನುದಾನದಲ್ಲಿ ನಿರ್ಮಿಸಿದ್ದ 102 ಕಟ್ಟೆಗಳಿರುವ ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಕೊನೆಗೂ ಮಹೂರ್ತ ಕೂಡಿ ಬಂತು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಈ ಮಾರು ಕಟ್ಟೆಗೆ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಅವರು,ನಾನು ಮೂರನೇ ಅವಧಿಗೆ ಶಾಸಕನಾಗಿದ್ದ ಕೇಂದ್ರ-ರಾಜ್ಯಸರ್ಕಾರದ ಕೆಎಂಆರ್‌ಪಿ(ಕರ್ನಾಟಕ ಮುನ್ಸಿಫಲ್ ರಿಫಾರ್ಮ್ಸ್ ಪ್ರಾಜೆಕ್ಟ್) ಯೋಜನೆಯಡಿ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಮಾರುಕಟ್ಟೆ ನಿರ್ಮಾಣವಾಗಿಯೂ ನಾಲ್ಕೈದು ವರ್ಷಗಳಾಗಿದೆ. ಆದರೂ ಕಾರಣಾಂತರಗಳಿಂದ ಕಟ್ಟೆಗಳ ಹರಾಜು ನಡೆದಿರಲಿಲ್ಲ. ಕೆಲವು ತಿಂಗಳ ಹಿಂದೆ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿ,ಈಗ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗಿದೆ. 105 ಪೈಕಿ 18 ಇನ್ನು ಉಳಿದವನ್ನು ಅರ್ಹರಿಗೆ ವಿತರಿಸಲಾಗುವುದು. ಮಹಿಳೆಯರು, ಅಂಗವಿಕಲರು,ಎಸ್‌ಸಿ,ಎಸ್ಟಿ ಸಹಿತ ಸಾಮಾಜಿಕ ನ್ಯಾಯವನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟೆಗಳನ್ನು ವರ್ತಕರಿಗೆ ಹಂಚಿಕೆ ಮಾಡಲಾಗಿದೆ ಎಂದರು.

    ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ತಿಂಗಳೊಂದಕ್ಕೆ ಈ ಮಾರುಕಟ್ಟೆಯಿಂದ 2 ಲಕ್ಷ ರೂ.ಬಾಡಿಗೆ ಬರಲಿದೆ ಎಂದರು. ನಗರಸಭೆ ಸದಸ್ಯ ವೆಂಕಟೇಶ್ ಮಾತನಾಡಿ,ಕಟ್ಟೆಗಳನ್ನು ಹರಾಜು ಪಡೆದವರು ಇಂದಿನಿಂದಲೇ ವಹಿವಾಟು ಪ್ರಾರಂಭಿಸಬೇಕು. ಒಂದು ವೇಳೆ ಅವರು ಇಲ್ಲಿ ವಹಿವಾಟು ನಡೆಸದಿದ್ದರೂ ಬಾಡಿಗೆ ವಸೂಲಿ ಮಾಡಬೇಕು ಅಥವಾ ಹಂಚಿಕೆ ರದ್ದುಪಡಿಸಿ ಬೇರೆಯವರಿಗೆ ಹಂಚಿಕೆ ಮಾಡಬೇಕೆಂದು ಆಯುಕ್ತರನ್ನು ಒತ್ತಾಯಿಸಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ,ಉಪಾಧ್ಯಕ್ಷೆ ಶ್ವೇತಾ ವಿರೇಶ್,ಸರ್ದಾರ್ ಅಹಮ್ಮ ದ್ ಪಾಶ,ಹರೀಶ್ ಮತ್ತಿತರ ಸದಸ್ಯರು,ಕಂದಾಯಾ ಧಿಕಾರಿ ನಾಸೀರ್ ಪಾಶ, ಮುಖಂಡರಾದ ರಮೇಶ್,ಚಕ್ರವರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts