More

    ವೀರಶೈವ ಲಿಂಗಾಯತರಿಗೆ ಕೇಂದ್ರ ಒಬಿಸಿ ಮಾನ್ಯತೆ ನೀಡಿ

    ಕೊಪ್ಪಳ: ವೀರಶೈವ ಲಿಂಗಾಯತರಿಗೆ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿ ಆ.1ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ಕೆ.ಬಿ.ಶ್ರೀನಿವಾಸರಡ್ಡಿ ಹೇಳಿದರು.


    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.


    ವೀರಶೈವ ಲಿಂಗಾಯತ ಸಮುದಾಯದ ಅನೇಕ ಮಠಗಳು ಶಿಕ್ಷಣಕ್ಕೆ ಆದ್ಯತೆ ನೀಡಿವೆ. ಅರವತ್ತು ವರ್ಷಗಳಿಂದ ಸಮುದಾಯ ಕೇಂದ್ರ ಪಟ್ಟಿಯ ಹಿಂದುಳಿದ ವರ್ಗಗಳಲ್ಲಿ ಸೇರಿಸಿಲ್ಲ. ಅದರ ಬಗ್ಗೆ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮವು ಕೃಷಿ ಆಧಾರಿತ ಕುಟುಂಬಗಳಾಗಿವೆ. ಬೆಳಗಾವಿ, ತುಮಕೂರು ಸೇರಿ ರಾಜ್ಯಾದ್ಯಂತ ಸಮುದಾಯದ ಶಿಕ್ಷಣ ಸಂಸ್ಥೆಗಳು ಜಾತಿ‌ಬೇಧ ತೋರದೆ ಎಲ್ಲ ವರ್ಗದವರಿಗೆ ಶಿಕ್ಷಣ ನೀಡುತ್ತಿವೆ ಎಂದರು.


    ನಮ್ಮ ಸಮುದಾಯ ಸದ್ಯ ರಾಜ್ಯ ಹಿಂದುಳಿದ ಪಟ್ಟಿಯಲ್ಲಿದೆ. ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಮನವಿ ಸಲ್ಲಿಸಿದ್ದೇವೆ. ಬಿಎಸವೈ ಸಿಎಂ ಇದ್ದಾಗ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆದು ಕೇಂದ್ರಕ್ಕೆ ಕಳಿಸಿದ್ದಾರೆ. ಸದ್ಯ ಮತ್ತೊಮ್ಮೆ ಮನವಿ ಸಲ್ಲಿಸಲು ಎಲ್ಲ ಜಿಲ್ಲಾ ಕೇಂದ್ರದಿಂದ ಆಗಸ್ಟ್ 1 ರಂದು ಶಾಂತಿಯುತ ಮೆರವಣಿಗೆ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ. ಬಳಿಕ ಸಿಎಂ ಸಮಯ ಪಡೆದು ಪದಾಧಿಕಾರಿಗಳೆಲ್ಲ ಸೇರಿ ಮನವಿ ಸಲ್ಲಿಸಿ ಒತ್ತಡ ಹೇರುತ್ತೇವೆ ಎಂದರು.


    ಮಹಾಸಭಾದ ಕೊಪ್ಪಳ ಜಿಲ್ಲಾಧ್ಯಕ್ಷ ಕಳಕನಗೌಡ ಕಲ್ಲೂರು, ವಿಜಯಕುಮಾರ್ ಪಾಟೀಲ್, ವೀರೇಶ ಮುಧೋಳ, ಚನ್ನಪ್ಪ ಮಳಗಿ, ತಾಲೂಕು ಅಧ್ಯಕ್ಷ ಗುರುರಾಜ ಹಲಗೇರಿ ಇದ್ದರು.
    =======

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts