ಜಾತಿ ಸಂಕೋಲೆಯಿಂದ ಹೊರಬನ್ನಿ

blank

ಶಿಕಾರಿಪುರ: ವೀರಶೈವ ಸಮಾಜ ಕಾಯಕ, ದಾಸೋಹ, ಮಠ ಸಂಸ್ಕೃತಿಗಳ ಹಾಗೂ ಸಾಮಾಜಿಕ ಕಳಕಳಿಯ ಸಮಾಜಮುಖಿ ಸಮಾಜವಾಗಿದ್ದು ಇಂತಹ ಸಮಾಜದಲ್ಲಿ ಹುಟ್ಟಿದ್ದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

blank

ಭಾನುವಾರ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಸಮಾಜ ಆಯೋಜಿಸಿದ್ದ ವಿಶ್ವಬಂಧು ವೀರಶೈವ ಲಿಂಗಾಯತ ಸೌಹಾರ್ದ ಸಹಕಾರ ಸಂಘದ ಆರಂಭ ಮತ್ತು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿ ಬಡಾವಣೆ ಉದ್ಘಾಟನೆ ಹಾಗೂ ಸಮುದಾಯದಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಜಾತಿ, ಉಪ ಜಾತಿ ಎಂಬ ಸಂಕುಚಿತ ಮನೋಭಾವನೆಯಿಂದ ಹೊರಬಂದು ವೀರಶೈವ ಸಮಾಜವನ್ನು ಸಧೃಢವಾಗಿ ಕಟ್ಟುವ ಕಾರ್ಯವಾಗಬೇಕು. ರೇಣುಕಾದಿ ಜಗದ್ಗುರುಗಳ, ಬಸವಾದಿ ಶರಣರ ಚಿಂತನೆಗಳು ನಮಗೆ ಆದರ್ಶವಾಗಬೇಕು ಎಂದರು.

ಶಿಕಾರಿಪುರ ತಾಲೂಕು ಶರಣರ ಪಾದಸ್ಪರ್ಶದಿಂದ ಪಾವನವಾಗಿದೆ. ಇಲ್ಲಿನದು ಪುಣ್ಯದ ಮಣ್ಣು. ಈ ಮಣ್ಣಿನಲ್ಲಿ ಅದ್ಭುತ ಶಕ್ತಿಯಿದೆ. ಮಂಡ್ಯದ ಯಡಿಯೂರಪ್ಪ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದ, ನನ್ನನ್ನು ಮೂರು ಬಾರಿ ಸಂಸದನಾಗಿ ಮತ್ತು ಶಾಸಕನಾಗಿ ಮಾಡಿದ ಮಣ್ಣಿದು. ಈ ಮಣ್ಣಿನ ಋಣ ನಮ್ಮ ಮೇಲಿದ್ದು ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಮೂಲಕ ಜನಸೇವೆ ಮಾಡುತ್ತಿದ್ದಾರೆ ಎಂದರು.

ಕಾಳೇನಹಳ್ಳಿಯ ಶಿವಯೋಗಾಶ್ರಮದ ಶ್ರೀ ರೇವಣಸಿದ್ದ ಸ್ವಾಮೀಜಿ ಮಾತನಾಡಿ, ವೀರಶೈವ ಮಹಾಸಭಾ ಅತ್ಯಂತ ಸದೃಢವಾಗಬೇಕು ಎಂಬ ಬಯಕೆಯಿಂದ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದರು. ಅವರ ಅಂದಿನ ಚಿಂತನೆ ಫಲವಾಗಿ ಇಂದು ಅಖಿಲ ಭಾರತ ವೀರಶೈವ ಮಹಾಸಭಾ ಅದ್ಭುತವಾಗಿ ಬೆಳೆದು ನಿಂತಿದೆ. ತಾಲೂಕಿನಲ್ಲಿ ಸಮಾಜ ಸಂಘಟನೆ ಕಾರ್ಯ ಉತ್ತಮವಾಗಿದೆ. ಸಂಘಟನೆ ಬಲವಾದರೆ ಸಮಾಜ ಬಲವಾಗುತ್ತದೆ. ವೀರಶೈವ ಸಮಾಜದ ವೈಚಾರಿಕ ಚಿಂತನೆಗಳು ಮಾದರಿಯಾಗಿವೆ. ಇದು ಶರಣರು ನಮಗೆ ಬಿಟ್ಟು ಹೋದ ಬಳುವಳಿ ಎಂದರು.

ಸಾಗರದ ಪಂಚಾಕ್ಷರಯ್ಯ, ತಾಲೂಕು ಅಧ್ಯಕ್ಷ ಎನ್.ವಿ.ಈರೇಶ್, ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ನಿವೇದಿತಾ ರಾಜು, ರಾಷ್ಟ್ರೀಯ ನಿರ್ದೇಶಕ ಡಾ. ಬಿ.ಡಿ.ಭೂಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಎಪಿಎಂಸಿ ಅಧ್ಯಕ್ಷ ರುದ್ರಮುನಿ, ಸಮಾಜದ ಮುಖಂಡರಾದ ರುದ್ರಪ್ಪಯ್ಯ, ರುದ್ರಮೂರ್ತಿ, ಶಶಿಧರ್ ಚುರ್ಚಿಗುಂಡಿ, ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೊಟ್ರೇಶ್ವರಪ್ಪ, ಗಿರೀಶ್ ಧಾರವಾಡ, ವೀರನಗೌಡ, ಶಿವನಗೌಡ, ಚನ್ನೇಶಪ್ಪ, ಕುಮಾರ ಸ್ವಾಮಿ ಹಿರೇಮಠ, ಎಂ.ಜಿ.ಪ್ರಕಾಶ್ ಇದ್ದರು.

Share This Article
blank

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

blank