More

    ವೀರಶೈವ-ಲಿಂಗಾಯತರು ಮೀಸಲಾತಿಗೆ ಅರ್ಹರು

    ಮುಂಡರಗಿ: ವೀರಶೈವ-ಲಿಂಗಾಯತರು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಪಡೆಯಲು ಎಲ್ಲ ರೀತಿಯಿಂದಲೂ ಅರ್ಹರಿದ್ದಾರೆ. ಆದ್ದರಿಂದ ಈ ಕೂಡಲೆ, ರಾಜ್ಯ ಸರ್ಕಾರವು ಒಬಿಸಿ (2ಎ) ಮೀಸಲು ಬೇಡಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಇಲ್ಲಿನ ಅನ್ನದಾನೀಶ್ವರ ಮಠದ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀಗಳು, ವೀರಶೈವ ಧರ್ಮವು ಪ್ರಾಯೋಗಿಕ ತತ್ವನಿಷ್ಠವಾದ ಧರ್ಮವು. ಉದ್ಯೋಗಗಳ ಫಲವಾಗಿ ಒಳಪಂಗಡಗಳಾದವು. ಲಿಂಗಧಾರಿಗಳಾದವರೆಲ್ಲರೂ ವೀರಶೈವರು, ಲಿಂಗಾಯತರು. ಬಸವಾದಿ ಶರಣರು ಇದನ್ನೇ ಅನುಸರಿಸಿದರು. ವಚನ ಸಾಹಿತ್ಯದಲ್ಲಿ ವೀರಶೈವ ಪದ ಸಾಕಷ್ಟು ಬಳಕೆಯಾಗಿದೆ. ಲಿಂಗಾಯತ ಪದವು ಗ್ರಂಥಸ್ಥವಾಗಿಲ್ಲ. ಇದು ಕ್ರಿಯಾವಾಚಕ. ಇತ್ತೀಚಿಗೆ ಲಿಂಗಾಯತ ಬೇರೆ ಎಂಬ ಕೂಗು ಇದ್ದರೂ ರಾಜ್ಯದ ಮುಖ್ಯಮಂತ್ರಿಗಳು ವೀರಶೈವ -ಲಿಂಗಾಯತ ಒಂದೇ ಎಂದು ಹೇಳಿ ನೂರಾರು ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿದ್ದು ಶ್ಲಾಘನೀಯ. ಜಗದ್ಗುರುಗಳು, ವಿರಕ್ತರು, ಶಿವಾಚಾರ್ಯರು ಒಂದುಗೂಡಿ ವೀರಶೈವ-ಲಿಂಗಾಯತರು ಒಂದು, ವಿಶ್ವದ ಮಾನವರೆಲ್ಲ ಬಂಧು ಎಂಬ ಘೊಷಣೆ ಮಾಡಿರುವುದು ಸ್ವಾಗತಾರ್ಹ. ಇಂತಹ ನಾಲ್ಕಾರು ಸಭೆಗಳಲ್ಲಿ ನಾವು ಭಾಗಿಯಾಗಿ ಇದೇ ಮಂತ್ರವನ್ನು ಉಚ್ಚರಿಸಿದ್ದು ಸ್ಮರಣೀಯವಾಗಿದೆ. ಇದಕ್ಕೆ ರಾಜ್ಯ ಸರ್ಕಾರವು ವೀರಶೈವ-ಲಿಂಗಾಯತರನ್ನು ಒಬಿಸಿ(2ಎ) ಮೀಸಲಾತಿಗೆ ಸೇರಿಸಲು ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts