More

    ವೀರಯ್ಯಸ್ವಾಮಿ ಶಾಸ್ತ್ರಿಮಠ ಇನ್ನಿಲ್ಲ: ನಾಳೆ ಅಂತ್ಯಕ್ರಿಯೆ

    ಬೆಂಗಳೂರು: ಜಗದ್ಗುರು ದಾರುಕಾಚಾರ್ಯ ಆಶ್ರಮ ಸ್ಥಾಪಕ ವೀರಯ್ಯಸ್ವಾಮಿ ಶಾಸ್ತ್ರಿಮಠ (91) ಭಾನುವಾರ ಬೆಳಗ್ಗೆ ಶಿವಕ್ಯರಾದರು. ಸ್ವಾತಂತ್ಯ ಹೋರಾಟಗಾರರಾಗಿದ್ದ ಇವರು ನೇತಾಜಿ ಸುಭಾಸ್​ಚಂದ್ರ ಬೋಸ್​ ಟ್ರಸ್ಟ್​ ಸೇರಿ ಹಲವು ಸಂ ಸಂಸ್ಥೆಗಳಲ್ಲಿ ಸಕ್ರಿಯಯಾಗಿದ್ದರು. ಸನಾತನ ಧರ್ಮದ ಬಗ್ಗೆ ಪ್ರವರ್ಚನ ನೀಡುತ್ತಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ರಾಜಾಜಿನಗರದ ಮನೆಯಲ್ಲಿ ಭಕ್ತಾಧಿಗಳಿಗೆ ದರ್ಶನ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ( ಮೇ 20) ಬೆಳಗ್ಗೆ ಮಾಗಡಿ ರಸ್ತೆಯ ಕನ್ನಹಳ್ಳಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಹುಬ್ಬಳ್ಳಿ ನೇಹಾ, ಅಂಜಲಿ ಪ್ರಕರಣದ ಬಗ್ಗೆ ADGP ಹಿತೇಂದ್ರ ಹೇಳಿದ್ದೇನು?

    ರಂಭಾಪುರಿ ಜಗದ್ಗುರು ಸಂತಾಪ:
    ವೀರಯ್ಯಸ್ವಾಮಿ ಶಾಸ್ತ್ರಿಮಠ ನಿಧನಕ್ಕೆ ಬಾಳೆಹೊನ್ನೂರಿನ ರಂಭಾಪುರಿ ವೀರಸಿಂಹಾಸನ ಸಂಸ್ಥಾನ ಪೀಠದ ಶ್ರೀ ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.ಮೂರು ದಶಕಗಳಿಂದ ದಾರುಕಾಚಾರ್ಯ ಆಶ್ರಮದಲ್ಲಿ ದಾರುಕಾಚಾರ್ಯ ವಿಗ್ರಹ ಪ್ರತಿಷ್ಠಾಪಿಸಿ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದ ಇವರು, ಹಿರಿಯ ಅಧ್ಯಾತ್ಮಿಕ ಶಕ್ತಿಯಾಗಿದ್ದರು. ಇವರ ಅಧ್ಯಾತ್ಮಿಕ ಸಾಧನೆ ಮೆಚ್ಚಿ “ಅಂತರ್​ ಜ್ಯೋತಿಷಿ’ ಎಂಬು ಬಿರುದು ನೀಡಲಾಗಿತ್ತು.ಸದಾ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವೀರಯ್ಯಸ್ವಾಮಿ ಶಾಸ್ತ್ರಿಮಠ ಅವರ ಅಗಲಿಕೆ ಆಧ್ಯಾತ್ಮ ಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಶ್ರೀಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts