More

    ವೀಣಾ ಕಾಶಪ್ಪನವರಗೆ ಇದೆ ಒಳ್ಳೆಯ ರಾಜಕೀಯ ಭವಿಷ್ಯ

    ಬಾಗಲಕೋಟೆ: ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಾಗ, ಒಳ್ಳೆಯ ಕೆಲಸ ಮಾಡಿದಾಗ ಟೀಕೆಗಳು ಬರುತ್ತಿರುತ್ತವೆ. ಅದಕ್ಕೆ ಎದರಬೇಡ, ಮುನ್ನುಗ್ಗು ನಮ್ಮ ಸಹಕಾರ ಇದೆ. ರಾಜಕೀಯದಲ್ಲಿ ಒಳ್ಳೆಯ ಭವಿಷ್ಯ ಇದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರೋತ್ಸಾಹದ ಮಾತು ಆಡಿದ್ದಾರೆ.

    ಬಾಗಲಕೋಟೆ ಅಂಜುಮನ್ಶಾಲಾ ಆವರಣದಲ್ಲಿ ಗುರುವಾರ ನಡೆದ ವೀಣಾ ವಿಜಯಾನಂದ ಕಾಶಪ್ಪನವರ(ವಿವಿಕೆ) ಫೌಂಡೇಶನವತಿಯಿಂದ ಹಮ್ಮಿಕೊಂಡಿರುವ ಇನ್ನೂರು ವಿದ್ಯಾರ್ಥಿಗಳಿಗೆ ಕೆಎಎಸ್, ಪಿಎಸ್ಐ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಉತ್ತಮ ಕೆಲಸ ಮಾಡುವಾಗ ಅಂತವರಿಗೆ ಕೈಲಾದರೆ ಸಹಾಯ ಮಾಡಬೇಕು, ಇಲ್ಲವಾದರೆ ಸುಮ್ಮನೆ ಇರಬೇಕು. ಆದರೆ, ಅಡ್ಡಗಾಲು ಹಾಕಬಾರದು. ಅಡ್ಡಗಾಲು ಹಾಕಿದರೂ ನೀನು ಹಿಂದೆ ಸರಿಯಬೇಡ. ಅಂತವರ ಆಶೀರ್ವಾದ ತೆಗೆದುಕೊಂಡು ಮುಂದೆ ಸಾಗು. ನನಿಗೆ ಒಳ್ಳೆದಾಗುತ್ತದೆ. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎನ್ನುವುದು ನಾಣ್ನುಡಿ. ಆದರೆ, ಇವರ ವಿಚಾರದಲ್ಲಿ ವೀಣಾ ಕಾಶಪ್ಪನವರ ಯಶಸ್ಸಿನ ಹಿಂದೆ ಅವರ ಪತಿ ವಿಜಯಾನಂದ ನಿಲ್ಲುವ ಮೂಲಕ ನಾಣ್ನುಡಿ ಉಲ್ಟಾ ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ವೀಣಾ ಕಾಶಪ್ಪನವರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಇದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡಿದ್ದಾಳೆ. ಅದೇ ಕಾರಣಕ್ಕೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭೆಗೆ ಪಕ್ಷದ ಟಿಕೆಟ್ಕೊಡಲಾಗಿತ್ತು. ಆದರೆ, ದುರಾದೃಷ್ಟಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದೆ ಕಾಶಪ್ಪನವರ ದಂಪತಿಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯ ಇದೆ ಎಂದು ಅಭಯ ನೀಡಿದರು.

    ವಿವಿಕೆ ಫೌಂಡೇಶನ್ವತಿಯಿಂದ ಸಮಾಜಮುಖಿ ಕಾರ್ಯಕ್ಕೆ ವೀಣಾ ಮುಂದಾಗಿರುವುದು ಸಂತೋಷ ತಂದಿದೆ. ಅದಕ್ಕಾಗಿಯೇ ಇದನ್ನು ಉದ್ಘಾಟಿಸಲು ನಾನು ಬಂದಿದ್ದೇನೆ. ಪ್ರತಿಭೆ ಯಾರ ಸ್ವತ್ತು ಅಲ್ಲ. ಹಳ್ಳಿಗಾಡಿನ ಯುವಕ-ಯುವತಿಯರಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಆದರೆ, ಅವರಿಗೆ ಸೂಕ್ತ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ವಿವಿಕೆ ಫೌಂಡೇಶನ್ಗ್ರಾಮೀಣ ಜನರಿಗೆ ಅನುಕೂಲವಾಗುವ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಉದ್ದೇಶ ಸಫಲವಾಗಲಿ. ಕರ್ನಾಟಕ ಆಡಳಿತ ಸೇವೆಯಲ್ಲಿ ಈ ಭಾಗದ ಯುವಕರು ಭಾಗಿಯಾಗುವಂತಾಗಲಿ ಎಂದು ಶುಭಹಾರೈಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಫೌಂಡೇಶನ್ಸಂಸ್ಥಾಪಕ ಅಧ್ಯಕ್ಷೆ ವೀಣಾ ಕಾಶಪ್ಪನವರ, ಎಸ್.ಆರ್.ಕೆ. ಫೌಂಡೇಶನ್ಮೂಲಕ ನಮ್ಮ ಪತಿ ಅವರು ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದ್ದರು. ಅದರ ಮುಂದುವರೆದ ಭಾಗವಾಗಿ ಈಗ ನಾನು ವಿವಿಕೆ ಫೌಂಡೇಶನ್ಆರಂಭಿಸಿದ್ದೇನೆ. ಕೆಎಎಸ್ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಪಾಸು ಮಾಡಬೇಕು. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವರು ತೇರ್ಗಡೆ ಆಗಿ ಮುಂದೆ ಬರಬೇಕು ಎನ್ನುವ ಸದುದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಇದು ಬರೀ ಇಷ್ಟಕ್ಕೆ ಸೀಮಿತವಲ್ಲ. ಮುಂಬರುವ ದಿನಗಳಲ್ಲಿ ಮಹಿಳಾ ಸಹಕಾರಿ ಸಂಘಗಳನ್ನು ಆರಂಭಿಸಲಿದ್ದೇವೆ. ಮಹಿಳೆಯರಿಗಾಗಿ ವಿಶೇಷ ತರಬೇತಿ, ಉಚಿತ ಆರೋಗ್ಯ ತಪಾಸಣೆ ಶಿಬಿರ, ರೈತರಿಗೆ ತರಬೇತಿ ಹೀಗೆ ವಿವಿಧ ಸಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆಲ್ಲ ನನಗೆ ಬೆಂಬಲವಾಗಿ ನನ್ನ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಇದ್ದಾರೆ. ಅವರು ಬೆಂಬಲ ಇಲ್ಲದಿದ್ದರೆ ಇದೆಲ್ಲ ಮಾಡಲು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಗಲು ನನಗೆ ಆಗುತ್ತಿರಲಿಲ್ಲ. ಇವತ್ತು ನನ್ನ ಕನಸಿನ ಫೌಂಡೇಶನ್ಉದ್ಘಾಟನೆಗೆ ನನ್ನ ರಾಜಕೀಯ ಗುರು, ತಂದೆ ಸಮಾನರಾದ ಸಿದ್ದರಾಮಯ್ಯ ಬಂದಿದ್ದು, ನನಗೆ ಅತ್ಯಂತ ಖುಷಿ ತಂದಿದೆ. ಒಂದು ಕಡೆಗೆ ನನಗೆ ನನ್ನ ಪತಿಯ ಬೆಂಬಲ ಮತ್ತೊಂದು ಕಡೆಗೆ ಸಿದ್ದರಾಮಯ್ಯ ಅವರು ಪ್ರೋತ್ಸಾಹ ಇದೆ. ಇವರಿಬ್ಬರೂ ನನಗೆ ರಾಜಕೀಯ ಗುರುಗಳು ಎಂದು ಹೇಳಿದರು.

    ಹನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಕಾಶಪ್ಪನವರ ಕುಟುಂಬ ಹಿಂದಿನಿಂದಲೂ ಸೇವೆ ಮಾಡಿಕೊಂಡು ಬಂದಿದೆ. ಈಗ ನನ್ನ ಪತ್ನಿಯೂ ಅದೇ ಹಾರಿಯಲ್ಲಿ ಸಾಗಿದ್ದು, ವಿವಿಕೆ ಫೌಂಡೇಶನ್ಸ್ಥಾಪಿಸಿ, ಸಮಾಜಮುಖಿ ಕೆಲಸ ಮಾಡುತ್ತಿರುವುದು ನನಗೆ ಬಹಳಷ್ಟು ಖುಷಿ ತಂದಿದೆ. ಜಿಪಂ ಅಧ್ಯಕ್ಷೆಯಾಗಿಯೂ ಅನೇಕ ಉತ್ತಮ ಕಾರ್ಯ ಮಾಡಿದ್ದರು. ನನ್ನ ಪತ್ನಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ಟಿಕೆಟ್ಕೊಡಿ ಎಂದು ಪರೋಕ್ಷವಾಗಿ ಕೇಳಿಕೊಂಡರು.

    ವೇದಿಕೆಯಲ್ಲಿ ಗಾಣಿಗ ಗುರುಪೀಠದ ಜಗದ್ಗುರು ಡಾ.ಜಯಬಸವ ಶ್ರೀಗಳು, ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಚಿತ್ತರಗಿ ಸಂಸ್ಥಾನಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜರು, ಇಳಕಲ್ಲದ ಸಜ್ಜಾದೆ ನಶೀನ್ಹಜರತ್ಸೈಯದ್ಫೈಸಲ್ಪಾಶಾ ಸಾಹೇಬ ಸೇರಿ ಅನೇಕ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಶಿವರಾಜ್ತಂಗಡಗಿ, ಆರ್.ಬಿ.ತಿಮ್ಮಾಪುರ, ಶಾಸಕರಾದ ಜೆ.ಟಿ.ಪಾಟೀಲ, ಭೀಮಸೇನ್ಚಿಮ್ಮನಕಟ್ಟಿ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿ ಹಲವರು ಉಪಸ್ಥಿತರಿದ್ದರು.

    ಬಾಗಲಕೋಟೆಗೆ ಟಗರು ಬಂದಿದೆ

    ಕಾರ್ಯಕ್ರಮದಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಚುನಾವಣೆಯಲ್ಲಿ ಜನಪ್ರಿಯವಾಗಿದ್ದ ತಮ್ಮ ಟಗರಿ ಡೈಲಾಗ್ಹೊಡೆದು ಗಮನ ಸೆಳೆದರು. ನಾವ್ಮೊದ್ಲ ಹೇಳಿದ್ವಿ, ಮತ್ಬರ್ತೇವಿ ಅಂತ. ಈಗ ಮತ್ ಬಂದೇವಿ. ಮುಂದೆಯೂ ಬರ್ತೇವೆ. ಬಾಗಲಕೋಟೆಗೆ ಟಗರು ಬಂದಿದೆ. ಮುಂದ ಮತ್ ಈ ಟಗರು ಬರುತ್ತೆ ಎಂದು ಡೈಲಾಗ್ಹೊಡೆದು ಚಪ್ಪಾಳೆ, ಕೇಕೆ ಗಿಟ್ಟಿಸಿದರು.

    ನಮ್ಮ ಮೇಲೆ ಸಮಾಜದ ಋಣ ಇರುತ್ತದೆ. ಅದನ್ನು ಪ್ರತಿಯೊಬ್ಬರೂ ತೀರಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಿವಿಕೆ ಫೌಂಡೇಶನ್ಮೂಲಕ ಸೇವಾ ಕಾರ್ಯ ಆರಂಭಿಸಿರುವ ವೀಣಾ ಕಾಶಪ್ಪನವರ ಸಫಲತೆ ಕಾಣಲಿ. ಪ್ರಜಾಪ್ರಭುತ್ವದಲ್ಲಿ ಜನರು ಮಾಲೀಕರು. ಅವರ ಆಶೀರ್ವಾದ ರಾಜಕಾರಣಿಗಳು, ಸಮಾಜ ಸೇವಕರಿಗೆ ಬೇಕೆ ಬೇಕು. ಜಾತಿ, ಧರ್ಮ ಇಲ್ಲದೇ ಎಲ್ಲ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ಆರಂಭಿಸಿದ್ದು ಒಳ್ಳೆಯದು. ಇದು ಯಶಸ್ವಿಯಾಗಲಿ.
    ಸಿದ್ದರಾಮಯ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts