More

    ಬರಿಯ ಮಣ್ಣಿನ ವಿಕಾರ ರೂಪವನ್ನೇ ಕಾಣುವವರನ್ನು ವಿವೇಕಿಯೆಂದು ಯಾರಾದರೂ ಹೇಳುವರೇ?

    ಬರಿಯ ಮಣ್ಣಿನ ವಿಕಾರ ರೂಪವನ್ನೇ ಕಾಣುವವರನ್ನು ವಿವೇಕಿಯೆಂದು ಯಾರಾದರೂ ಹೇಳುವರೇ?ಇಹ-ಪರ ಸಂಬಂಧವನ್ನು ಇಲ್ಲಿ ಇನ್ನೂ ಒಂದು ವಿಧದಲ್ಲಿ ಹೀಗೆ ವಿವರಿಸಬಹುದು. ಧ್ಯೇಯಪ್ರಪಂಚವೆಂದರೆ, ಜೀವನದ ಮಹಾಮೌಲ್ಯಗಳ ಕಲ್ಪನಾಪ್ರಪಂಚ (World of Values). ಇದನ್ನು ನಿರಾಕರಿಸಿ, ನೋಡಿದುದೆಲ್ಲ, ಮಾಡಿದುದೆಲ್ಲ, ಅರ್ಥಶೂನ್ಯವೇ.

    ಉದಾ: ಸುವಾಸನೆ ಸೌಂದರ್ಯಗಳನ್ನುಳ್ಳ ಒಂದು ಪುಷ್ಪದಲ್ಲಿ ಇವುಗಳನ್ನು ಕಾಣದೆ, ಬರಿಯ ಮಣ್ಣಿನ ವಿಕಾರ ರೂಪವನ್ನೇ ಕಾಣುವವರನ್ನು ವಿವೇಕಿಯೆಂದು ಯಾರಾದರೂ ಹೇಳುವರೇ? ಸುಂದರವಾದ ಭಗವಂತನ ಅರ್ಚಾಮೂರ್ತಿಯಲ್ಲಿ – ತಿರುಪತಿ ಶ್ರೀರಂಗ ಇತ್ಯಾದಿ ಕ್ಷೇತ್ರಗಳಲ್ಲಿ – ಭಗವತ್ ಸಾನ್ನಿಧ್ಯವನ್ನು ಕಂಡು ಆನಂದಪುಲಕಿತರಾಗಿ, ಗದ್ಗದಕಂಠರಾಗಿ, ರೋಮಾಂಚನವನ್ನು ಹೊಂದಿ ಸ್ವಯಂಪ್ರೇರಣೆಯಿಂದ ಸ್ತುತಿ, ನಮಸ್ಕಾರಾದಿಗಳನ್ನು ಮಾಡುತ್ತ, ಪರಮಾನಂದ ಭರಿತರಾಗುವವರ ಕಣ್ಣಿಗೆ ಕಂಡದ್ದನ್ನು ಕಾಣದೆ, ಅಲ್ಲಿ ಬರಿಯ ಶಿಲೆಯನ್ನಷ್ಟೇ (Physical Reality and no other Higher Reality) ಕಾಣುವ ಮೂಢರನ್ನು ಪೂರ್ವಿಕರು ಸಾಂಪ್ರದಾಯಿಕ ಭಾಷೆಯಲ್ಲಿ ‘‘ಪಾಷಂಡಿಗಳು’’ ಎಂದು ಕರೆದಿದ್ದಾರೆ. ಯಮನು ಈ ಪಾಷಂಡ ಪ್ರವೃತ್ತಿಯನ್ನೇ ಪರ್ಯಾಯವಾಗಿ ಇಲ್ಲಿ ಖಂಡಿಸಿದ್ದಾನೆ. ಪಾಷಂಡಿಗಳ ಕಣ್ಣಿಗೆ, ದೇವರು ಬರಿಯ ಶಿಲೆ! ಗಂಗಾದಿ ಪವಿತ್ರ ತೀರ್ಥಗಳು ಬರಿಯ ನೀರು, (H2O). ಹಾಗೆಯೇ ಪೂಜ್ಯರಾದ ತಂದೆ-ತಾಯಿಗಳು, ಗುರು ಹಿರಿಯರು, ಕೇವಲ ತಮ್ಮಂತೆಯೇ ರಕ್ತಮಾಂಸದ ಮುದ್ದೆಯಷ್ಟೇ! ಪೂಜ್ಯಭಾವವೆಂಬುದಕ್ಕೆ (Reverence) ಇವರ ದೃಷ್ಟಿಯಲ್ಲಿ ಇಲ್ಲಿ ಆಸ್ಪದವಿಲ್ಲ. ಪವಿತ್ರ ಗ್ರಂಥಗಳಲ್ಲಿಯೂ ಇವರು ಕಾಣುವುದು(Wood pulp) ಕಾಗದದ ಆಕಾರ ಮಾತ್ರ: ಅಂದರೆ ಇವರಿಗೆ ಒಳ್ಳೆಯದು ಕೆಟ್ಟದ್ದು, ಪೂಜ್ಯ, ಸುಂದರ, ಇತ್ಯಾದಿ ಮೌಲ್ಯಗಳ ಕಲ್ಪನೆಯೇ ಸಾಧ್ಯವಿಲ್ಲ. ಇದಿಲ್ಲದೆ, ನಿಜವಾದ ಗತಿಯೇ ಇವರ ಜೀವನಕ್ಕೆ ಆಗುವಂತೆ ಇಲ್ಲ. ಅವರ ಅರ್ಥಶೂನ್ಯ ಸುತ್ತಾಟವನ್ನೇ ಜ್ಞಾನಿಗಳು, ಗಾಣದ ಎತ್ತಿನ ಗತಿಗೆ ಹೋಲಿಸಿ, ‘‘ಸಂಸಾರ’’ವೆಂದು ಕರೆದಿದ್ದಾರೆ. ಪ್ರಾಣಿಗಳ ಜೀವನಕ್ಕೂ, ಈ ನರಪಶುಗಳ ಜೀವನಕ್ಕೂ ಏನು ವ್ಯತ್ಯಾಸ?

    ಈ ಪರಲೋಕದ ಕಲ್ಪನೆಯ ಭದ್ರವಾದ ಅಡಿಗಲ್ಲೇ ಪರಮಾತ್ಮ ಸ್ವರೂಪದ ಬಗೆಗೆ ನಿಶ್ಚಯ ಜ್ಞಾನ. ಪರಮಾತ್ಮನನ್ನು ನಿರಾಕರಿಸಿದವನಿಗೆ ಪರಲೋಕದ ಜ್ಞಾನ ಸಾಧ್ಯವಿಲ್ಲ. (ಪರಮಾತ್ಮನನ್ನು ಒಪ್ಪದ ಕೆಲವು ವೇದೇತರ ಮತಗಳಲ್ಲಿ ಪರಲೋಕ ಪ್ರಸ್ತಾವವಿದ್ದರೂ, ಅದಕ್ಕೆ ಅಲ್ಲಿ ಶಾಶ್ವತ ಆಧಾರವಿಲ್ಲ ಎಂದು ತಾತ್ಪರ್ಯ).

    ಈ ಪರಮಾತ್ಮಜ್ಞಾನವು ಎಷ್ಟು ಕಠಿಣಸಾಧ್ಯವೆಂಬುದನ್ನು ಯಮದೇವನೇ ಹೀಗೆ ಹೇಳುತ್ತಾನೆ:

    ಶ್ರವಣಾಯಾಪಿ ಬಹುಭಿರ್ಯೋ ನ ಲಭ್ಯಃ

    ಶೃಣ್ವಂತೋಪಿ ಬಹವೋ ಯಂ ನ ವಿದ್ಯುಃ |

    ಆಶ್ಚರ್ಯೋ ವಕ್ತಾ ಕುಶಲೋಸ್ಯ ಬೋದ್ಧಾ

    ಆಶ್ಚರ್ಯೋ ಜ್ಞಾತಾ ಕುಶಲಾನುಶಿಷ್ಟಃ || (1-2-7)

    ಸರ್ವಾಂತರ್ಯಾಮಿಯಾದ ಪರಮಾತ್ಮನು ಅನೇಕರ ಪಾಲಿಗೆ ಶ್ರವಣಕ್ಕೂ ಸಿಗಲಾರನು. ಮತ್ತೆ ಕೆಲವರಿಗೆ ಶ್ರವಣ ಲಾಭವಾದರೂ ಅವನಲ್ಲಿ ನಂಬಿಕೆಯಾಗಲೀ, ಶ್ರದ್ಧೆಯಾಗಲೀ ಆಗುವುದು ಸುಲಭವಲ್ಲ. ಪರಮಾತ್ಮನನ್ನು ಕುರಿತು ಉಪನ್ಯಾಸವನ್ನು ಮಾಡುವವರೆಲ್ಲರೂ ಅವನನ್ನು ತಿಳಿದೇ ಇದ್ದಾರೆಂದೂ ಹೇಳುವಂತಿಲ್ಲ. ತಿಳಿದು (ಅಂದರೆ ಸ್ವಯಂ ಅನುಭೂತಿಯಿಂದ ಯೋಗಿ ಪ್ರತ್ಯಕ್ಷ ಮಾಡಿಕೊಂಡು), ಇತರರಿಗೆ ಶ್ರುತಪಡಿಸುವವರು ಜಗತ್ತಿನಲ್ಲಿ ಆಶ್ಚರ್ಯಪಡಬೇಕಾದ ವ್ಯಕ್ತಿಯೇ! ಇಂಥವರಿಂದ ಒಂದು ವೇಳೆ ಉಪದೇಶ ಪಡೆದರೂ, ಪರಮಾತ್ಮಲಾಭವನ್ನು ನಿಜವಾಗಿ ಹೊಂದಿದವನು ಮತ್ತೊಂದು ಆಶ್ಚರ್ಯದ ವ್ಯಕ್ತಿ: ಏಕೆಂದರೆ, ಪರಮಾತ್ಮಲಾಭವು ಮಹಾ ಕೌಶಲದಿಂದ ಬರತಕ್ಕದ್ದು. ಇದರಲ್ಲಿ ತಪಸ್ಸಿನ, ತಿಳುವಳಿಕೆಯ, ಒಂದು ಜಾಣ್ಮೆ ಅಡಗಿದೆ. ಹೀಗೆ ಸದುಪದೇಶದಿಂದ, ಗುರುಮುಖೇನ, ಪರಮಾತ್ಮನ ವಿಷಯವಾಗಿ ಅನುಶಾಸನವನ್ನು ಪಡೆದು, ‘‘ಜ್ಞಾತಾ’’ ಎನಿಸಿಕೊಂಡು ನಿಜವಾಗಿಯೂ ಭಗವಂತನನ್ನು ಅರಿತವನು ಅತ್ಯಂತ ಆಶ್ಚರ್ಯಮಯನಾದ ವ್ಯಕ್ತಿಯೇ. (ಮನುಷ್ಯಾಣಾಂ ಸಹಸ್ರೇಷು… ಇತ್ಯಾದಿ ಪ್ರಸಿದ್ಧ ಗೀತಾಸೂಕ್ತಿಗಳಲ್ಲಿ ಈ ವಿಷಯವನ್ನೇ ಸೂಚಿಸಿದೆ.)

    ಗೋವುಗಳ ಸಂಘಟನಾ ಶಕ್ತಿ ಬೆಳೆಯಬೇಕು! ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಡಾ. ಕೆ.ಎಸ್​. ನಾರಾಯಣಾಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts