More

    ವಿಡಿಎಸ್ ಕ್ಲಾಸಿಕ್ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ.

    ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ, ಶ್ರೀ ಪ್ರತೀಕ. ಎಸ್. ಹುಯಿಲಗೋಳ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದರು.

    ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು  ಭಾರತದ ಸಂವಿಧಾನವು ಜಗತ್ತಿನಲ್ಲೇ ಅತೀ ದೊಡ್ಡ ಸಂವಿಧಾನವಾಗಿದೆ.  ನಮ್ಮ ಸಂವಿಧಾನವು ಲಿಖಿತ ರೂಪದಲ್ಲಿದ್ದು ತಿದ್ದುಪಡಿಗೆ ಅವಕಾಶವಿದೆ. ನಮ್ಮ ದೇಶದ ಪ್ರಜೆಗಳಿಗೆ ಶಾಂತಿಯುತ ಜೀವನ ಮಾಡಲು ಸಂವಿಧಾನದಲ್ಲಿ   ಹಕ್ಕು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ.  ಸಂವಿಧಾನವು ಸರಕಾರದ ದಿಕ್ಸೂಚಿಯಾಗಿದೆ. ನಾವೆಲ್ಲ  ಸಂವಿಧಾನವನ್ನು  ಗೌರವಿಸುತ್ತಾ ಅದರ ಅಡಿಯಲ್ಲಿ ದೇಶದ ಪ್ರಗತಿಗೆ ಕೈಜೋಡಿಸಬೇಕು.  ನಮ್ಮ ಸಂವಿಧಾನವು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬಂದಿತು.  ಅಂದಿನಿಂದ ಇಂದಿನವರೆಗೆ  ಭಾರತದ ಪ್ರಜೆಗಳಾದ ನಾವು ಶಾಂತಿಯುತ ಜೀವನವನ್ನು ನಡೆಸಲು ಸಂವಿಧಾನವು ಕಾರಣವಾಗಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ವ್ಯಕ್ತಪಡಿಸಿದರು.

    ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು ಸಂವಿಧಾನವು ಹೇಗೆ ರಚನೆ ಆಯಿತು, ಸಂವಿಧಾನ ರಚನಕಾರರ ಹಾಗೂ ಮಹಾನ್ ನಾಯಕರ ಕುರಿತು ಹಾಗೂ ಸಂವಿಧಾನ ಒಳಗೊಂಡಿರುವ  ನಮ್ಮ ಹಕ್ಕು ಮತ್ತು ಕರ್ತವ್ಯಗಳು,  ವಿಧಿಗಳ ಹಾಗೂ ಅನುಚ್ಛೇದಗಳ ಕುರಿತು ಸಮಗ್ರವಾಗಿ ಮಕ್ಕಳಿಗೆ ತಿಳಿಸಿದರು.

    ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ಮಕ್ಕಳಿಗೆ 75ನೇ ಗಣರಾಜ್ಯೋತ್ಸವದ ಶುಭಾಶಯಗಳು  ತಿಳಿಸಿ ಅಭಿನಂದಿಸಿದರು.  ಶಾಲೆಯ ಮುಖ್ಯೋಪಾಧ್ಯಾಯರಾದ   ಶ್ರೀ ಎಂ . ಆರ್. ಡೊಳ್ಳಿನ ರವರು ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಕೆಚ್ಚೆದೆಯ ವೀರನಾದ,  ಕಿತ್ತೂರು ಸಾಮ್ರಾಜ್ಯದ ಸೈನ್ಯದ  ಬಂಟನಾದ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನದ ದಿನದ ಅಂಗವಾಗಿ ರಾಯಣ್ಣನ ಹೋರಾಟ ಹಾಗೂ ಜೀವನದ ಕುರಿತು ಸಂಕ್ಷಿಪ್ತ ಇತಿಹಾಸವನ್ನು ಮಕ್ಕಳಿಗೆ  ಉಣಬಡಿಸಿದರು. 

    ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಎ.  ಎಚ್.  ಬಾಗಲಕೋಟೆ ಯವರು, ವಿದ್ಯಾರ್ಥಿಗಳಾದ ಫಾತಿಮಾಲು ಬಾನು ಸಂಗಮಕರ್, ಅನುಶ್ರೀ ಹಿರೇಮಠ, ವೈಭವ ತಿಪ್ಪಣ್ಣವರ, ವಿದ್ಯಾ ಹಟ್ಟಿ ಹಾಗೂ ಸ್ಪೂರ್ತಿ ಆಲೂರ ರವರು ಅನಿಸಿಕೆ ವ್ಯಕ್ತಪಡಿಸಿದರು. 

    ಕಾರ್ಯಕ್ರಮವು ತೇಜಶ್ರೀ ಹಾದಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಶ್ರೀಮತಿ ಶ್ವೇತಾ ಮೇಲಗಿರಿ ನಿರೂಪಿಸಿದರು, ಶ್ರೀಮತಿ ಅರ್ಚನಾ ಗಿರಿತಿಮ್ಮಣ್ಣವರ ಸ್ವಾಗತಿಸಿದರು ಹಾಗೂ ಕು. ವೀಣಾ ನಾಯಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ ಮಹನೀಯರು, ಶಾಲೆಯ ಮುಖ್ಯೋಪಾಧ್ಯಾಯರು, ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು, ಪಾಲಕರು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts