More

    ಮಾಸ್ – ಕ್ಲಾಸ್ ಲವ್ಲಿ: ವಸಿಷ್ಠ ಸಿಂಹ ಬೆಂಬಲಕ್ಕೆ ನಿಂತ ರವಿಚಂದ್ರನ್, ಉಪೇಂದ್ರ, ಪ್ರೇಮ್

    ಬೆಂಗಳೂರು: ‘ಯದಾ ಯದಾಹಿ’ ಚಿತ್ರದ ಬಳಿಕ ಸದ್ಯ ನಟ ವಸಿಷ್ಠ ಸಿಂಹ ‘ಲವ್‌ಲಿ’ ಚಿತ್ರದಲ್ಲಿ ಬಿಜಿಯಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಯಿತು.

    ರವಿಚಂದ್ರನ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಪ್ರೇಮ್, ಹರಿಪ್ರಿಯಾ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ನಿರ್ದೇಶಕ ನರ್ತನ್ ಜತೆ ‘ಮಫ್ತಿ’ ಚಿತ್ರದಲ್ಲಿ ಕೆಲಸ ಮಾಡಿದ್ದ ಯುವಪ್ರತಿಭೆ ಚೇತನ್ ಕೇಶವ್ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರವಿದು. ‘ಟೈಟಲ್ ಹಾಡಿನಂತೆ ಸಿನಿಮಾ ಕೂಡ ಕಲರ್‌ಫುಲ್ ಆಗಿ ಮೂಡಿಬಂದಿದೆ. ಮೊದಲರ್ಧ ರೊಮ್ಯಾಂಟಿಕ್ ಕಥೆ ಹಾಗೂ ದ್ವಿತೀಯಾರ್ಧದಲ್ಲಿ ಮತ್ತೊಂದು ವಿಷಯ ಹೇಳಿದ್ದೇವೆ. ಈ ಚಿತ್ರದಲ್ಲಿ ಮಾಸ್, ಕ್ಲಾಸ್ ಎರಡನ್ನೂ ಬಳಸಿದ್ದೇವೆ. ಜತೆಗೆ ಸಾಮಾಜಿಕ ಸಂದೇಶವಿದೆ. ಚಿತ್ರದಲ್ಲಿ ಮೂರು ಆ್ಯಕ್ಷನ್ ಸನ್ನಿವೇಶಗಳು, ನಾಲ್ಕು ಹಾಡುಗಳಿವೆ. ಮಂಗಳೂರು, ಬೆಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಲಂಡನ್‌ನಲ್ಲಿ ಒಂದು ಹಾಡಿನ ಶೂಟಿಂಗ್ ಮಾಡುವ ಆಲೋಚನೆಯಿದೆ. ರೌಡಿಸಂ, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್ ಕಥೆಯಿದೆ. ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಚೇತನ್.

    ನಾಯಕ ವಸಿಷ್ಠ ಸಿಂಹ, ‘ನನ್ನ ತುಂಬ ಕಾಡಿದ ಚಿತ್ರವಿದು. ಈಗ ಈ ಹಾಡಿನಿಂದ ಪ್ರಚಾರ ಪ್ರಾರಂಭಿಸಿದ್ದೇವೆ. ಆಗಸ್ಟ್‌ನಲ್ಲಿ ರಿಲೀಸ್ ಮಾಡುವ ಯೋಜನೆಯಿದೆ. ಇದೊಂದು ಸುಂದರ ಪ್ರೇಮಕಥೆಯ ಚಿತ್ರ’ ಎಂದು ಹೇಳಿಕೊಂಡರು. ನಾಯಕಿ ಸ್ಟೆಫಿ ಪಟೇಲ್, ‘ನಾನು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ಮೊದಲ ಕನ್ನಡ ಸಿನಿಮಾ. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ ಖುಷಿಯಿದೆ. ಜನನಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts