More

    ಇಂಧನ ದರ ನಿಯಂತ್ರಣ ಮಾಡಿ

    ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್, ಎಲ್​ಪಿಜಿ ದರ ಏರಿಕೆ ನಿಯಂತ್ರಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದಿಂದ ನಗರದಲ್ಲಿ ಬುಧವಾರ ನೂರಾರು ಆಟೋ ಚಾಲಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಚನ್ನಮ್ಮ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಸೇರಿದರು.

    ರಿಕ್ಷಾ ಚಾಲಕರ ಪ್ರಾಧಿಕಾರ ರಚಿಸಬೇಕು. ಇವರ ಮಕ್ಕಳಿಗೆ ಪ್ರಾಥಮಿಕದಿಂದ ಉನ್ನತಮಟ್ಟದವರೆಗೆ ಉಚಿತ ಶಿಕ್ಷಣ ನೀಡಬೇಕು ಹಾಗೂ ವಿದ್ಯಾರ್ಥಿ ವೇತನ ಒದಗಿಸಬೇಕು. ಆಟೋ ಚಾಲಕರ ಅವಲಂಬಿತ ಕುಟುಂಬಗಳಿಗೆ 10 ಲಕ್ಷ ರೂ.ಗಳವರೆಗೆ ವಿಮೆ ಕಾರ್ಡ್ ನೀಡಬೇಕು ಹಾಗೂ ಇತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

    ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಿದರು. ಸಂಘದ ಶೇಖರಯ್ಯ ಮಠಪತಿ, ಮೋದಿನಸಾಬ್ ದೋಣಿ, ಮಂಜುನಾಥ ಕೋಳಿಕಾಲ, ದಾವೂದಅಲಿ ಶೇಖ್, ಮುರಳಿ ಇಂಗಳಹಳ್ಳಿ, ಬಸಪ್ಪ ವಗರನಾಳ, ಕರೀಂ ಬಿಜಾಪುರಿ, ಗುರು ಬೆಟಗೇರಿ, ಮಲ್ಲಿಕಾರ್ಜುನ ನಾಶಿಪುಡಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts