More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

    ರಾಮದುರ್ಗ: ಕನಿಷ್ಠ ವೇತನ ಜಾರಿ, ಪಂಚತಂತ್ರ ತಂತ್ರಾಂಶದಲ್ಲಿ ಸಿಬ್ಬಂದಿಗಳ ಬಾಕಿ ದಾಖಲೆ ಅಪ್‌ಡೇಟ್ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಪಟ್ಟಣದ ತಾಪಂ ಕಚೇರಿ ಬಳಿ ಧರಣಿ ನಡೆಸಿದರು.

    ಬೇಡಿಕೆ ಈಡೇರಿಕೆಗೆ ತಿಂಗಳ ಹಿಂದೆ ಒತ್ತಾಯಿಸಲಾಗಿತ್ತು. ಅಧಿಕಾರಿಗಳ ಭರವಸೆ ಮೇರೆಗೆ ಹೋರಾಟ ಹಿಂಪಡೆಯಲಾಗಿತ್ತು. ಆದರೆ, ಅಧಿಕಾರಿಗಳು ಬೇಡಿಕೆ ಈಡೇರಿಸದೇ ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಧರಣಿ ನಿರತರು ದೂರಿದರು.

    ತಾಪಂ ಇಒ ಮುರುಳಿಧರ ದೇಶಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಪಿಡಿಒ, ಮುಖಂಡರ ಸಭೆ ನಡೆಸಿ ಸಮಸ್ಯೆ ನಿವಾರಿಸುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು. ಜಿ.ಎಂ.ಜೈನೆ ಖಾನ್, ವೀರಭಧ್ರ ಕಂಪ್ಲಿ, ಮಲ್ಲಪ್ಪ ಆಲೂರ, ತಿಪ್ಪಣ್ಣ ಪೈಲಿ, ದಿಲೀಪ್ ಭೋವಿ ಮತ್ತಿತರರು ಉಪಸ್ಥಿತರಿದ್ದರು.

    ಅಂಗನವಾಡಿ ನೌಕರರಿಂದ ಪ್ರತಿಭಟನೆ: ಎಲ್‌ಐಸಿ ಆಧಾರಿತ ಪಿಂಚಣಿ, ಕೆಲಸದ ಭದ್ರತೆ ಸೇರಿದಂತೆ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ತಾಹೀರಾ ಮಕಾಂದಾರ, ರುಕ್ಮಾಯಿ ಬಿಂಗೆ, ಮುಂತಾದವರು ಇದ್ದರು.

    ಕಕ್ಕೇರಿ ವರದಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮದ ಆಶಾ ಕಾರ್ಯಕರ್ತೆಯರು ಮೆರವಣಿಗೆ ಮೂಲಕ ಗ್ರಾಪಂ ಕಚೇರಿಗೆ ತೆರಳಿ ಪಿಡಿಒ ಸಂಜೀವ ಬೊಂಗಾಳೆಗೆ ಮನವಿ ಸಲ್ಲಿಸಿದರು. ಆಶಾ ಕಾರ್ಯಕರ್ತೆ ಶಿವಲೀಲಾ ಪತ್ರಿ ಮಠ, ಆಶಾ ಕಾರ್ಯಕರ್ತೆಯರು ಮನೆಗಳ ಸರ್ವೇ ಸೇರಿ ಎಲ್ಲ ಬಗೆಯ ಕಾರ್ಯಗಳನ್ನು ತಳಮಟ್ಟದಿಂದ ನಿರ್ವಹಿಸುವ ಗುರುತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ, ನಮಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ವೇತನ ಸಹ ಸರಿಯಾಗಿ ಸಿಗುತ್ತಿಲ್ಲ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಕೋರಿದರು. ಮಾಲತಿ ಹುಳ ಬುತ್ತಿ, ಪಾರ್ವತಿ ತಳವಾರ, ಸಾವಿತ್ರಿ ಗದ್ದಿಕೇರಿ, ಸುಮಿತ್ರ ಹಿರೇಮಠ, ಸುನಂದಾ ಪಾಟೀಲ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts