More

    ವರದಾ ನದಿ ಬ್ಯಾರೇಜ್ ಜಲಾವೃತ, ಕಳಸೂರ ಗ್ರಾಮದ ಸಂಪರ್ಕ ಬಂದ್

    ಸವಣೂರ: ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಕಳಸೂರ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿದೆ.
    ತಾಲೂಕಿನ ಕಳಸೂರು ಗ್ರಾಮಸ್ಥರು ಕೋಳೂರು, ಗಣಜೂರು ಮಾರ್ಗವಾಗಿ 12 ಕಿ.ಮೀ. ಕ್ರಮಿಸಿ ಜಿಲ್ಲಾ ಕೇಂದ್ರ ತಲುಪುತ್ತಿದ್ದರು. ಆದರೆ, ನಿರಂತರ ಮಳೆಗೆ ವರದಾ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡ ಪರಿಣಾಮ ಕಳಸೂರು ಗ್ರಾಮಸ್ಥರು ಮಂಟಗಣಿ, ಕಲಕೋಟಿ, ಕರ್ಜಗಿ, ಜಾನಕೊಪ್ಪ ಕ್ರಾಸ ಮಾರ್ಗವಾಗಿ ಹಾವೇರಿ ತಲುಪಲು 25 ಕಿ.ಮೀ. ಕ್ರಮಿಸುವ ಪರಿಸ್ಥಿತಿ ಉದ್ಭವಿಸಿದೆ. ಇದು ಪ್ರತಿ ವರ್ಷ ಮಳೆಗಾಲದಲ್ಲಿ ಸಾಮಾನ್ಯವಾಗಿದೆ.
    ಸುತ್ತಮುತ್ತಲಿನ ಜಮಿನುಗಳಲ್ಲಿ ಕೃಷಿ ಚಟುವಟಿಕೆಗೆ ಹೋಗಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕಳಸೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾದ ವರದಾ ನದಿಗೆ ಮೇಲ್ಮಟ್ಟದ ಬ್ಯಾರೇಜ್ ನಿರ್ಮಾಣ ಮಾಡಬೇಕು ಎಂದು ಹತ್ತಾರು ವರ್ಷಗಳಿಂದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
    ಬ್ಯಾರೇಜ್ ಪ್ರತಿವರ್ಷ ಜಲಾವೃತಗೊಂಡ ಸಮಯದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರಿಗೆ ಹಾಗೂ ರೈತರಿಗೆ ಸಾಂತ್ವನ ಹೇಳುತ್ತಾರೆಯೇ ಹೊರತು ಬ್ಯಾರೇಜ್ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts